ಮಂಡಲ್ ವರದಿ – ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿದ ಐತಿಹಾಸಿಕ ದಾಖಲೆ

ಚಿತ್ರದುರ್ಗ ಆ. 28

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್


ಮಂಡಲ್ ವರದಿ ಹಿಂದುಳಿದ ವರ್ಗಗಳ ಸಾಮಾಜಿಕ, ರಾಜಕೀಯ, ಅರ್ಥಿಕವಾಗಿ ನ್ಯಾಯವನ್ನು ನೀಡಿದಂತ ವರದಿಯಾಗಿದೆ, ಮಂಡಲ್ ರವರು ಈ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್.ಲಕ್ಷ್ಮೀಕಾಂತ ಕುಂಚಿಗನಾಳ್ ತಿಳಿಸಿದ್ದಾರೆ.


ಚಿತ್ರದುರ್ಗ ನಗರದ ಪ್ರವಾಸಿಮಂದಿರದಲ್ಲಿ ಬುಧವಾರ ನಡೆದ ಮಂಡಲ್ ಆಯೋಗದ ಅಧ್ಯಕ್ಷರು, ಬಿಹಾರ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಸಂಸದರಾದ ದಿ.ಬಿ.ಪಿ.ಮಂಡಲ್‍ರವರ 107ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುದ ಸಾಹು ಮಹರಾಜರನ್ನು ನೆನೆಯಬೇಕಿದೆ. ಆಗಿನ ಸಮಯದಲ್ಲಿ ತ್ರೀವವಾಗಿ ಹಿಂದುಳಿದಿದ್ದ ಹಿಂದುಳಿದ ವರ್ಗಗಳನ್ನು ಅಂದೇ ನಮ್ಮ ಕಷ್ಟವನ್ನು ನೋಡಿ ಪರಿಶಿಷ್ಟ ಜಾತಿಗೆ ಸೇರಿಸಿದ್ದು ಸಾಹು ಮಹಾರಾಜರು, ಇದರಿಂದ ನಮ್ಮ ಸಮುದಾಯ ಪ್ರಗತಿಯನ್ನು ಹೊಂದಲು ಸಾಧ್ಯವಾಯಿತು. ಶೋಷಣೆಗೆ ಒಳಗಾದವರಿಗೆ ಮೀಸಲಾತಿಯ ಅವಶ್ಯಕತೆ ಇದೆ ಎಂದು ಕೃಷ್ಣರಾಜ ಮಹಾರಾಜರು ಸಹಾ ಈ ಸಮುದಾಯಕ್ಕೆ ನೆರವಾದರು ಎಂದರು.


ನಮ್ಮ ಸಮುದಾಯ ಕೇಂದ್ರದಲ್ಲಿ ಓಬಿಸಿಯಲ್ಲಿ ಇದ್ದರೆ ರಾಜ್ಯದಲ್ಲಿ ಹಿಂದುಳಿದ ವರ್ಗದಲ್ಲಿದೆ. ಮಂಡಲ್ ವರದಿ ಹಿಂದುಳಿದ ವರ್ಗಗಳಿಗೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ನ್ಯಾಯವನ್ನು ನೀಡುವುದರ ಮೂಲಕ ಹಿಂದುಳಿದ ಸಮುದಾಯವನ್ನು ಪ್ರಗತಿಯತ್ತ ಸಾಗಲು ಸಾಧ್ಯವಾಗಿದೆ. ನಮ್ಮಲ್ಲಿನ ಬೆಲೆಯನ್ನು ಜಾತಿಗಳಿಂದ ನೋಡದೇ ಅವರ ಜ್ಞಾನವನ್ನು ನೋಡಿ ಅಳೆಯಬೇಕಿದೆ. ರಾಜ್ಯದಲ್ಲಿ ನಮ್ಮ ಸಮುದಾಯ ಸುಖಿಯಾಗಿಲ್ಲ, ಸಾಮಾಜಿಕ ನ್ಯಾಯವನ್ನು ಈ ವರ್ಗದವರಿಗೆ ನೀಡಬೇಕಿದೆ. ಇಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ, ಮುಂದುವರೆದ ಜನಾಂಗ ಓಬಿಸಿಯವರಿಗೆ ಯಾವುದೇ ರೀತಿಯ ಸ್ಥಾನವನ್ನು ನೀಡಿಲ್ಲ, ನಮ್ಮಲ್ಲಿನ ಕಂದಾಚಾರವನ್ನು ನಿಲ್ಲಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ. ಸ್ವಾತಂತ್ರ್ಯ ಬಂದಾಗಿನಿಂದ ಹಿಂದುಳಿದ ವರ್ಗದವರನ್ನು ಮತದ ಬ್ಯಾಂಕ್ ಆಗಿ ಕೆಲವು ಪಕ್ಷದವರು ಮಾಡಿಕೊಂಡಿದ್ದಾರೆ ಅದರೆ ಅವರಿಗೆ ಮೂಲ ಸೌಲಭ್ಯವನ್ನು ನೀಡುವಲ್ಲಿ ಮಾತ್ರ ಹಿಂದೆ ಬಿದ್ದಿವೆ ಎಂದು ರಾಜಕೀಯ ಪಕ್ಷಗಳನ್ನು ದೂರಿದರು.


ಸಣ್ಣ-ಪುಟ್ಟ ಜಾತಿಗಳು ಚುನಾವಣೆಯಲ್ಲಿ ಸ್ಪರ್ದೆ ಮಾಡಿ ಗೆಲುವಂತ ವಾತಾವರಣ ಇರುವುದಿಲ್ಪ ಅಂತಹ ಜಾತಿಗಳಿಗೆ ಈ ರೀತಿಯಾದ ಮೀಸಲಾತಿ ಸಿಕ್ಕರೆ ಅವರು ರಾಜಕೀಯವಾಗಿ ಬೆಳೆಯಲು ಸಾಧ್ಯವಿದೆ. ಆದರೆ ಇತ್ತೀಚಿನ ದಿನಮಾನದಲ್ಲಿ ವಿಧಾನ ಪರಿಷತ್‍ಗೆ ಬಂಡವಾಳ ಶಾಹಿಗಳು ಬರುತ್ತಿರುವುದರಿಂದ ಸಣ್ಣ-ಪುಟ್ಟ ಜಾತಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದ ಅವರು, ಶಿಕ್ಷಣದ ಅರಿವು ಇಲ್ಲದವರು ಶೋಷಣೆಗೆ ಒಳಗಾಗುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮೀಸಲಾತಿಯನ್ನು ಪಡೆದಂತೆ ಓಬಿಸಿಯವರಿಗೂ ಸಹಾ ಮೀಸಲಾತಿ ಅವಶ್ಯಕತೆ ಇದೆ ಎಂದರು.
ಸಾಹಿತಿಗಳಾದ ಆನಂದ ಕುಮಾರ್ ಮಾತನಾಡಿ, ಬುಡಕಟ್ಟಿನ ಯಾದವ ಸಮುದಾಯದಲ್ಲಿ ಜನಿಸಿದ ಮಂಡಲ್‍ರವರು ಬಿಹಾರದಲ್ಲಿ ಹಿಂದುಳಿದ ವರ್ಗದವರಿಗೆ ನ್ಯಾಯವನ್ನು ಕೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಬಿಹಾರದಲ್ಲಿ ಹಿಂದುಳಿದ ವರ್ಗದವರು ಸಾಮಾಜಿಕ, ಅರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದುವರೆದಿರುವುದಿಲ್ಲ ಅವರಿಗೆ ನ್ಯಾಯವನ್ನು ನೀಡುವುದರ ಸಲುವಾಗಿ ಮಂಡಲ್ ವರದಿಯಲ್ಲಿ ಅವರಿಗೆ ಮಹತ್ವವಾದ ಸ್ಥಾನವನ್ನು ನೀಡಲಾಗಿದೆ ಎಂದರು.


ಮಂಡಲ್‍ರವರು ನೀಡಿದ ವರದಿಯನ್ನು ಜಾರಿ ಮಾಡಲು ಹಲವಾರು ವರ್ಷಗಳ ಕಾಲ ಯಾವ ಪ್ರಧಾನ ಮಂತ್ರಿಗಳು ಸಹಾ ಮುಂದೆ ಬರಲಿಲ್ಲ ಆದರೆ ವಿ.ಪಿ.ಸಿಂಗ್‍ರವರು ಧೈರ್ಯದಿಂದ ಈ ವರದಿಯನ್ನು ಜಾರಿ ಮಾಡುವುದರ ಮೂಲಕ ಹಿಂದುಳಿದ ವರ್ಗದವರಿಗೆ ನ್ಯಾಯವನ್ನು ಒದಗಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಈ ಸಮುದಾಯದಲ್ಲಿ ನಾಯಕತ್ವದ ಕೊರತೆ ಇದೆ ಇವರಲ್ಲಿ ಉತ್ತಮವಾದ ನಾಯಕ ಇದ್ದರೆ ಇವರು ಸಹಾ ಎಲ್ಲರಂತೆ ಪ್ರಗತಿಯನ್ನು ಕಾಣಲು ಸಾದ್ಯವಿದೆ ಎಂದು ತಿಳಿಸಿದರು.


ಪರಿಷತ್ ಕಾರ್ಯದರ್ಶಿಗಳಾದ ಜಗದೀಶ್ ಗುಂಡೇರಿ ಮಾತನಾಡಿ, ದೇಶದಲ್ಲಿ ಶೇ. 95ರಷ್ಟು ಇರುವ ಹಿಂದುಳಿದ ಜನಾಂಗಕ್ಕ ಯಾವುದೇ ರೀತಿಯ ಸ್ಥಾನ ಸಿಕ್ಕಿಲ್ಲ ಆದರೆ ಶೇ.5 ರಷ್ಟು ಇರುವ ಜನಾಂಗ ಮಾತ್ರ ಎಲ್ಲಾ ರೀತಿಯ ಸ್ಥಾನವನ್ನು ಕಲ್ಪಿಸಿಕೊಂಡಿದೆ. ಹಿಂದುಳಿದ ವರ್ಗದವರಲ್ಲಿ ಶಿಕ್ಷಣದ ಕೂರತೆ ಇದೆ, ದೇಶದಲ್ಲಿ ಹಿಂದುಳಿದ ವರ್ಗದವರು ಹಿಂದು ಇಲ್ಲದೆ ಮುಂದುವರೆದೆ ಅಂತರ ಪಿಶಾಚಿಯಾಗಿ ಇದ್ದಾರೆ. ಅರಸು ರವರು ಇಲ್ಲದಿದ್ದರೆ ಹಿಂದುಳಿದ ವರ್ಗದವರು ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ ಎಂದರು.


ಕಾರ್ಯಕ್ರಮದಲ್ಲಿ ಕಣಿವೆ ಮಾರಮ್ಮ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಜನ ಶಕ್ತಿ ಸಂಘದ ಷಫೀವುಲ್ಲಾ, ಗಾಯಕ ಪ್ಯಾರಜಾನ್, ಹನುಮಂತಪ್ಪ, ಗೀರಿಶ್ ನಾಯ್ಕ್, ಕೃಷ್ಣಮೂರ್ತಿ, ರಾಮು ಗೋಸಾಯಿ, ಗೋವಿಂದರಾಜು ಸೇರಿದಂತೆ ಇತರರು ಭಾಗವಹಿಸಿದ್ದರು. 

Leave a Reply

Your email address will not be published. Required fields are marked *