ವಿಶ್ವ ಚಾಂಪಿಯನ್ನರಿಗೆ ಸೋಲಿನ ರುಚಿ ತೋರಿಸಿದ ಟೀಂ ಇಂಡಿಯಾ! ನಾಯಕಿಯಾಗಿ ಸಕ್ಸಸ್ ಕಂಡ ಮಂಧಾನ.

ಅಹಮದಾಬಾದ್: ಭಾರತ ಹಾಗೂ ನ್ಯೂಜಿಲೆಂಡ್ ಮಹಿಳಾ ತಂಡಗಳ (Women’s Team) ನಡುವೆ ಮೂರು ಪಂದ್ಯಗಳ ಏಕದಿನ (ODI) ಸರಣಿ ಇಂದಿನಿಂದ ಆರಂಭವಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಮಹಿಳಾ ತಂಡ ಭರ್ಜರಿ ಪ್ರದರ್ಶನ ತೋರುವ ಮೂಲಕ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-0 ಯಿಂದ ಮುನ್ನಡೆ ಕಾಯ್ದುಕೊಂಡಿದೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ-20 ವಿಶ್ವಕಪ್ (World Cup) ಟ್ರೋಫಿ ಗೆದ್ದು ಬೀಗಿದ್ದ ನ್ಯೂಜಿಲ್ಯಾಂಡ್ (New Zealand) ತಂಡವನ್ನು ಸೋಲಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.

ಟಾಸ್ ಗೆದ್ದ ಮಂಧಾನ ಬ್ಯಾಟಿಂಗ್ ಆಯ್ಕೆ

ನಾಯಕಿ ಹರ್ಮನ್‌ಪ್ರಿತ್ ಕೌರ್ ತಂಡದಿಂದ ಹೊರಗುಳಿದಿರುವುದರಿಂದ ತಂಡವನ್ನು ಸ್ಫೋಟಕ ಆರಂಭಿಕ ಆಟಗಾರ್ತಿಯಾಗಿರುವ ಸ್ಮೃತಿ ಮಂದಾನ ಅವರು ಮುನ್ನಡೆಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಟೀಮ್ ಇಂಡಿಯಾ ಆರಂಭದಲ್ಲೇ ಮುಗ್ಗರಿಸಿತು. ನಾಯಕಿ ಸ್ಮೃತಿ ಮಂದಾನ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಳ್ಳುವ ಮೂಲಕ ನಿರಾಸೆ ಅನುಭವಿಸಿದರು. ನಂತರ ಬಂದ ಯಸ್ತಿಕಾ ಭಾಟಿಯಾ 37 ಹಾಗೂ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 33 ರನ್ ಗಳಿಸುವ ಮೂಲಕ ಕೊಂಚ ಚೇತರಿಕೆ ನೀಡಿದರು.

ಬ್ಯಾಟರ್‌ಗಳ ನೀರಸ ಪ್ರದರ್ಶನ

ಇದಾದ ಬಳಿಕ ಬಂದ ಹೇಮಲತಾ ಕೇವಲ 3 ರನ್ ಗಳಿಸಿ ನಿರಾಸೆ ಅನುಭವಿಸಿದರು. ಒಂದು ಹಂತದಲ್ಲಿ ತಂಡ 150 ರನ್ ಒಳಗೆ ಕುಸಿಯುವ ಆತಂಕ ಎದುರಾಗಿತ್ತು. ಇದಾದ ಬಳಿಕ ಬಂದ ಜಮಿಮಾ ರೋಡ್ರಿಗಸ್ 35, ತೇಲ್ ಹಸಬ್ನಿಸ್ 42, ಅನುಭವಿ ಆಟಗಾರ್ತಿ ದೀಪ್ತಿ ಶರ್ಮಾ 41 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು. ಅಂತಿಮವಾಗಿ ಟೀಂ ಇಂಡಿಯಾ 44.3 ಓವರ್‌ಗಳಲ್ಲಿ 227 ರನ್‌ಗಳಿಗೆ ಸರ್ವಪತನ ಕಂಡಿತು.

228 ರನ್‌ ಗಳ ಸವಾಲಿನ ಮೊತ್ತ ಗಳಿಸಿದ ಟೀಂ ಇಂಡಿಯಾ

ನ್ಯೂಜಿಲ್ಯಾಂಡ್ ಪರವಾಗಿ ಭರ್ಜರಿ ಬೌಲಿಂಗ್ ದಾಳಿ ನಡೆಸಿದ ಅಮೇಲಿಯಾ ಕೆರ್ 4, ಜೆಸ್ ಕೆರ್ 3, ಈಡೆನ್ ಕಾರ್ಸನ್ 2 ಹಾಗೂ ಸೂಜಿ ಬೇಟ್ಸ್ 1 ವಿಕೆಟ್ ಪಡೆದು ಮಿಂಚಿದರು. 228 ರನ್‌ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಭಾರತೀಯ ಬೌಲರ್ಸ್ ಎದರು ನೆಲಕಚ್ಚಿ ಆಡುವಲ್ಲಿ ವಿಫಲರಾದರು. ಆರಂಭದಲ್ಲಿ ಎಡವಿದ ನ್ಯೂಜಿಲ್ಯಾಂಡ್ ವನಿತೆಯರು ಕೇವಲ 168 ರನ್ ಗಳಿಸಲಷ್ಟೇ ಶಕ್ತವಾಯಿತು ಆ ಮೂಲಕ 59 ರನ್‌ಗಳ ಸೋಲು ಅನುಭವಿಸಿತು.

ಹಣ್ಣಷ್ಟೇ ಅಲ್ಲ, ಮಾವಿನ ಸೊಪ್ಪಿನಲ್ಲೂ ಅಡಗಿದೆ ಅದ್ಭುತ ಸೀಕ್ರೆಟ್ಸ್!ಇನ್ನಷ್ಟು ಸುದ್ದಿ…

59 ರನ್‌ಗಳ ಗೆಲುವು ಸಾಧಿಸಿದ ಟೀಂ ಇಂಡಿಯಾ

ನ್ಯೂಜಿಲ್ಯಾಂಡ್ ಪರವಾಗಿ ಜಾರ್ಜಿಯಾ ಪ್ಲಿಮ್ಮರ್ 25, ಲಾರೆನ ಡೌನ್ 26, ಬ್ರೂಕ್ ಹಾಲಿಡೇ 39 ಮತ್ತು ಮ್ಯಾಡಿ ಗ್ರೀನ್ 31 ರನ್ ಗಳಿಸಿದರು. ಭಾರತದ ಪರವಾಗಿ ರಾಧಾ ಯಾದವ್ 3, ಸೈನಾ ಟಾಕೂರ್ 2 ಮತ್ತು ದೀಪ್ತಿ ಶರ್ಮಾ ಹಾಗೂ ಅರುಂಧತಿ ರೆಡ್ಡಿ ತಲಾ ಒಂದು ವಿಕೆಟ್ ಪಡದು ಮಿಂಚಿದರು. ಅಂತಿಮವಾಗಿ ಟೀಂ ಇಂಡಿಯಾ 59 ರನ್‌ಗಳ ಗೆಲುವು ಸಾಧಿಸುವ ಮೂಲಕ ಟಿ-20 ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲ ಯಶಸ್ವಿಯಾಯಿತು.

Leave a Reply

Your email address will not be published. Required fields are marked *