ಮಂಗಳೂರು: ಅರ್ಧ ದಿನದಲ್ಲಿ 1 ಸಾವಿರ ತೆಂಗಿನಕಾಯಿ ಸುಲಿಯುವ ಎರಡು ಮಕ್ಕಳ ತಾಯಿ

ಇಬ್ಬರು ಮಕ್ಕಳ ತಾಯಿಯೊಬ್ಬಳು ಜೀವನೋಪಾಯವಾಗಿ ತೆಂಗಿನಕಾಯಿ ಸುಲಿಯುವ ಕೆಲಸವನ್ನು ಆರಿಸಿಕೊಂಡಿದ್ದಾಳೆ. ತನ್ನ ಸಂಸಾರವನ್ನು ಸಾಗಿಸಲು ಮತ್ತು ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಈ ಕೆಲಸಕ್ಕೆ ಇಳಿದಿದ್ದಾರೆ. ತನ್ನ ಸಾಮರ್ಥ್ಯ ಯಾರಿಗೇನು ಕಮ್ಮಿ ಇಲ್ಲ ಎಂದು ಕೆಲಸ ಮಾಡುವ ಇವರು, ಅರ್ಧ ದಿನದಲ್ಲೇ 1 ಸಾವಿರ ತೆಂಗಿನಕಾಯಿ ಸುಳಿಯುತ್ತಾರೆ.

ಮಂಗಳೂರು, ಅ.6: ಇಬ್ಬರು ಮಕ್ಕಳ ತಾಯಿಯೊಬ್ಬಳು ಜೀವನೋಪಾಯವಾಗಿ ತೆಂಗಿನಕಾಯಿ (Coconut) ಸುಲಿಯುವ ಕೆಲಸವನ್ನು ಆರಿಸಿಕೊಂಡಿದ್ದಾಳೆ. ತನ್ನ ಸಂಸಾರವನ್ನು ಸಾಗಿಸಲು ಮತ್ತು ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಈ ಕೆಲಸಕ್ಕೆ ಇಳಿದಿದ್ದಾರೆ. ತನ್ನ ಸಾಮರ್ಥ್ಯ ಯಾರಿಗೇನು ಕಮ್ಮಿ ಇಲ್ಲ ಎಂದು ಕೆಲಸ ಮಾಡುವ ಇವರು, ಅರ್ಧ ದಿನದಲ್ಲೇ 1 ಸಾವಿರ ತೆಂಗಿನಕಾಯಿ ಸುಳಿಯುತ್ತಾರೆ.

ಮೂಲತಃ ಮಡಿಕೇರಿಯವರಾದ 40 ವರ್ಷದ ಹರಿಣಾಕ್ಷಿ, ಪ್ರಸ್ತುತ ಕಾಸರಗೋಡಿನ ವಾಣಿನಗರದಲ್ಲಿ ವಾಸಿಸುತ್ತಿದ್ದಾರೆ. ಪುತ್ತೂರಿನ ತೆಂಗಿನಕಾಯಿ ವ್ಯಾಪಾರಿಯೊಬ್ಬರ ಮೂಲಕ ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಗಡಿ ಮನೆಗಳು ಮತ್ತು ಹೊಲಗಳಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸದಲ್ಲಿ ತೊಡಗಿದ್ದಾರೆ. ಅವರು ಪ್ರತಿ ತೆಂಗಿನಕಾಯಿಗೆ 1 ರೂಪಾಯಿ ಗಳಿಸುತ್ತಾರೆ ಮತ್ತು ಅರ್ಧ ದಿನದಲ್ಲಿ ಸುಮಾರು 1,000 ತೆಂಗಿನಕಾಯಿಗಳನ್ನು ಸುಲಿಯಬಲ್ಲರು.

“ಕೆಲವು ವರ್ಷಗಳ ಹಿಂದೆ ನಾನು ಕಾಸರಗೋಡಿಗೆ ಸ್ಥಳಾಂತರಗೊಂಡಾಗ ಈ ಕೆಲಸ ಪ್ರಾರಂಭಿಸಿದೆ. ಒಂಟಿ ತಾಯಿಯಾಗಿ, ನಾನು ಆದಾಯದ ಮಾರ್ಗವನ್ನು ಕಂಡುಹಿಡಿಯಬೇಕಾಗಿತ್ತು. ನಾನು ಇಡುಕ್ಕಿಯಲ್ಲಿ ಆಯುರ್ವೇದ ಚಿಕಿತ್ಸಕನಾಗಿ ತರಬೇತಿ ಪಡೆದಿದ್ದೇನೆ ಮತ್ತು ಈ ಹಿಂದೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಕೆಲಸ ಮಾಡಿದ್ದೇನೆ” ಎಂದು ಹರಿನಾಕ್ಷಿ ಹೇಳಿದ್ದಾಗಿ ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವೈಯಕ್ತಿಕ ಪರಿಸ್ಥಿತಿಗಳಿಂದಾಗಿ ನಾನು ಕಾಸರಗೋಡಿನಲ್ಲಿ ನೆಲೆಸಿದೆ. ಅಲ್ಲಿ ನಾನು ಉದ್ಯೋಗವನ್ನು ಹುಡುಕಲು ಹೆಣಗಾಡಿದೆ. ಪರಿಣಾಮವಾಗಿ, ನಾನು ವಿವಿಧ ಸಣ್ಣಪುಟ್ಟ ಕೆಲಸಗಳನ್ನು ಕೈಗೆತ್ತಿಕೊಂಡೆ. ಕಾರ್ಮಿಕನಾಗಿ ಮತ್ತು ಮನೆಗೆಲಸ ಕೆಲಸ ಮಾಡಲು ಆರಂಭಿಸಿದೆ. ಅದು ಸಾಧಾರಣ ಆದಾಯವನ್ನು ಮಾತ್ರ ಒದಗಿಸುತ್ತಿತ್ತು ಎಂದರು.

ಕಾಸರಗೋಡಿನ ಮನೆಯೊಂದರಲ್ಲಿ ಕೆಲಸ ಮಾಡುವಾಗ, ನಾನು ತೆಂಗಿನಕಾಯಿ ಸುಲಿಯುವುದನ್ನು ಕಲಿತುಕೊಂಡೆ. ಆದರೆ ಪರಿಸ್ಥಿತಿಗಳು ನನ್ನನ್ನು ಕೆಲಸವನ್ನು ಬಿಡುವಂತೆ ಮಾಡಿತು. ಅದೃಷ್ಟವಶಾತ್, ಪುತ್ತೂರಿನ ಅರ್ಲಪದವು ಎಂಬಲ್ಲಿನ ತೆಂಗಿನಕಾಯಿ ವ್ಯಾಪಾರಿಯೊಬ್ಬರ ಪರಿಚಯವಾಯಿತು. ಅವರು ನನ್ನನ್ನು ವಿವಿಧ ಹೊಲಗಳು ಮತ್ತು ಮನೆಗಳಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸಕ್ಕೆ ಸಂಪರ್ಕಿಸಿದರು.

11 ವರ್ಷದ ಮಗಳು ಮತ್ತು ಒಂಬತ್ತು ವರ್ಷದ ಮಗನ ತಾಯಿಯಾಗಿರುವ ಹರಿನಾಕ್ಷಿ, ಆದಾಯಕ್ಕೆ ಪೂರಕವಾಗಿ ಹಸುವನ್ನು ಸಾಕುತ್ತಿದ್ದಾರೆ. “ನನ್ನ ಬಾಲ್ಯದಿಂದಲೂ, ನಾನು ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ. ನಾನು ಚಿಕ್ಕ ವಯಸ್ಸಿನಲ್ಲಿಯೇ ನನ್ನ ಹೆತ್ತವರನ್ನು ಕಳೆದುಕೊಂಡೆ. ನಾನು ಪ್ರತಿದಿನ ಸರಿಸುಮಾರು 1,000 ತೆಂಗಿನಕಾಯಿಗಳನ್ನು ತೆಗೆಯಲು ಸಮರ್ಥನಾಗಿದ್ದೇನೆ. ಗಂಟೆಗೆ ಸರಾಸರಿ 100 ತೆಂಗಿನಕಾಯಿಗಳ ದರದಲ್ಲಿ ಕೆಲಸ ಮಾಡುತ್ತೇನೆ ಎಂದಿದ್ದಾಗಿ ವರದಿ ಮಾಡಿದೆ.

ನನ್ನ ಬಿಡುವಿನ ವೇಳೆಯಲ್ಲಿ ನಾನು ಏಣಿಯನ್ನು ಬಳಸಿ ಅಡಿಕೆ ಕೊಯ್ಲು ಮತ್ತು ಮೆಣಸು ಕೊಯ್ಲು ತೆಗೆಯುವ ಕೆಲಸ ಕೂಡ ಮಾಡುತ್ತೇನೆ ಎಂದು ಹೇಳುವ ಮೂಲಕ ಅವರು ಕಠಿಣ ಪರಿಶ್ರಮಕ್ಕೆ ತಮ್ಮ ಅಚಲ ಬದ್ಧತೆಯನ್ನು ಒತ್ತಿ ಹೇಳಿದರು.

“ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಅನೇಕರಿಗೆ ಮಾದರಿಯಾಗಿದ್ದಾರೆ. ಸಾಂಪ್ರದಾಯಿಕವಾಗಿ ಪುರುಷ ಪ್ರಾಬಲ್ಯವನ್ನು ಹೊಂದಿರುವ ತೆಂಗಿನಕಾಯಿ ಸುಲಿಯುವ ವೃತ್ತಿ ಕ್ಷೇತ್ರದಲ್ಲಿ ಮಹಿಳೆಯನ್ನು ಕಂಡಿರಲಿಲ್ಲ ಎಂದು ಕೃಷಿ ನಿಯತಕಾಲಿಕವಾದ ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆ ಹೇಳಿದ್ದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

Source : https://tv9kannada.com/karnataka/dakshina-kannada/woman-peeling-1000-coconuts-in-half-a-day-in-on-the-border-of-dakshina-kannada-and-kasaragod-rks-686636.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *