Manish Pandey: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಮನೀಶ್ ಪಾಂಡೆ: ಆಸಕ್ತಿ ತೋರದ ಆರ್​ಸಿಬಿ

Manish Pandey

ಇಂಡಿಯನ್ ಪ್ರೀಮಿಯರ್‌ ಲೀಗ್‌ (IPL 2023) ಟೂರ್ನಿಯ ಹದಿನಾರನೇ ಆವೃತ್ತಿ ಸಲುವಾಗಿ ಐಪಿಎಲ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆಯನ್ನು ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿದೆ. 10 ತಂಡಗಳು ತಮಗೆ ಅಗತ್ಯವಿರುವ ಆಟಗಾರರ ಖರೀದಿ ಸಲುವಾಗಿ ಹಣದ ಹೊಳೆ ಹರಿಸುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ. ನೀಡುವ ಮೂಲಕ ಸ್ಯಾಮ್ ಕುರ್ರನ್ (Sam Curren) ಅವರನ್ನು ತಮ್ಮದಾಗಿಸಿಕೊಂಡಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ದಾಖಲೆ ಸ್ಯಾಮ್ ಪಾಲಾಗಿದೆ. ಕಳೆದ ಕೆಲವು ಸೀಸನ್​ಗಳಿಂದ ಮಂಕಾಗಿರುವ ಮನೀಶ್ ಪಾಂಡೆ (Manish Pandey) ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.

ಕನ್ನಡಿದ ಮನೀಶ್​ರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ದೊಡ್ಡ ಮನಸ್ಸು ಮಾಡಲಿಲ್ಲ. ಜೊತೆಯೆ ಆರ್​ಸಿಬಿ ಖಾತೆಯಲ್ಲಿ ದೊಡ್ಡ ಮೊತ್ತ ಇಲ್ಲದ ಕಾರಣ ಕಡಿಮೆ ಮೊತ್ತಕ್ಕೆ ಸಿಗುವ ಆಟಗಾರರನ್ನು ಖರೀದಿಸುತ್ತಿದೆ. ಸದ್ಯ 1 ಕೋಟಿ ಮೂಲಬೆಲೆ ಹೊಂದಿದ್ದ ಪಾಂಡೆ 2.4 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಆರ್​ಸಿಬಿ ತಂಡ 1.5 ಕೋಟಿಗೆ ಇಂಗ್ಲೆಂಡ್​ನ ವಿಲ್ ಜ್ಯಾಕ್ಸ್ ಅವರನ್ನು ಖರೀದಿಸಿದೆ. ಜೊತೆಗೆ 75 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲಿಯನ್ನು ಆರ್​ಸಿಬಿ ತಂಡವು 1 ಕೋಟಿ 90 ಲಕ್ಷ ರೂ. ನೀಡಿ ಖರೀದಿಸಿದೆ.

ಜಮ್ಮು-ಕಾಶ್ಮೀರ ಪ್ರತಿಭೆ SRH ತೆಕ್ಕೆಗೆ:

ಜಮ್ಮು-ಕಾಶ್ಮೀರದ ಪ್ರತಿಭಾವಂತ ಆಲ್ರೌಂಡರ್ ವಿವ್ರಂತ್ ಶರ್ಮಾ ಅವರು ಅಚ್ಚರಿಯ ಮೊತ್ತಕ್ಕೆ ಹರಾಜಾಗಿದ್ದಾರೆ. 20 ಲಕ್ಷ ಮೂಲಬೆಲೆ ಹೊಂದಿದ್ದ ವಿವ್ರಂತ್ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 2.6 ಕೋಟಿ ಕೊಟ್ಟು ಖರೀದಿ ಮಾಡಿದೆ. ಉಪೇಂದ್ರ ಯಾದವ್ ಅವರನ್ನು 25 ಲಕ್ಷಕ್ಕೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಶ್ರೀಕರ್ ಭರತ್ 1.20 ಕೋಟಿಗೆ ಗುಜರಾತ್ ಪಾಲಾದರು. ಅನ್​ಮೋಲ್ ಪ್ರೀತ್ ಸಿಂಗ್, ಹಿಮ್ಮತ್ ಸಿಂಗ್, ಪ್ರಿಯಂ ಗರ್ಗ್, ಸೌರಭ್ ಕುಮಾರ್, ಅಭಿಮನ್ಯು ಈಶ್ವರನ್, ಮೊಹಮ್ಮದ್ ಅಜರುದ್ದೀನ್ ಅನ್​ಸೋಲ್ಡ್ ಆದರು.

ಐಪಿಎಲ್​ ಮಿನಿಹರಾಜು ಪ್ರಕ್ರಿಯೆ ಲೈವ್​

ದಾಖಲೆ ಮೊತ್ತಕ್ಕೆ ಸ್ಯಾಮ್ ಸೇಲ್:

ಐಪಿಎಲ್ 2023 ಮಿನಿ ಹರಾಜಿನಲ್ಲಿ 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಮ್ ಕುರ್ರನ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್​, ಎಸ್​ಆರ್​​ಹೆಚ್​, ಮುಂಬೈ ಇಂಡಿಯನ್ಸ್​ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಭರ್ಜರಿ ಪೈಪೋಟಿ ಕಂಡು ಬಂತು. ಆದರೆ, ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ. ನೀಡುವ ಮೂಲಕ ಸ್ಯಾಮ್ ಕುರ್ರನ್ ಅವರನ್ನು ತಮ್ಮದಾಗಿಸಿಕೊಂಡಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ದಾಖಲೆ ಸ್ಯಾಮ್ ಪಾಲಾಗಿದೆ. ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಸಿಎಸ್​ಕೆ ದಾಖಲೆಯ 16.25 ಕೋಟಿ ಮೊತ್ತಕ್ಕೆ ಪಡೆದುಕೊಂಡಿದೆ. ಇದರ ನಡುವೆ ಆಸ್ಟ್ರೇಲಿಯಾದ ಕ್ಯಾಮ್ರೊನ್ ಗ್ರೀನ್ 17.5 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/manish-pandey-is-sold-delhi-capitals-to-inr-2-4-crore-ipl-auction-2023-news-in-kannada-vb-au48-489896.html

Leave a Reply

Your email address will not be published. Required fields are marked *