
ಪಾಕ್ ಕ್ರಿಕೆಟರ್ ಶೋಯೆಬ್ ಮಲ್ಲಿಕ್ (Shoaib Malik) ಹಾಗೂ ಸಾನಿಯಾ ಮಿರ್ಜಾ ದಾಂಪತ್ಯ ಕೊನೆಯಾಗಲಿದೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಅಷ್ಟೇ ಅಲ್ಲ, ಇದಕ್ಕೆ ಪಾಕ್ ನಟಿ ಆಯೆಶಾ ಓಮರ್ (Ayesha Omar) ಕಾರಣ ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಟಾಕ್ ಶೋ ಒಂದರಲ್ಲಿ ಆಯೆಶಾ ಮಾತನಾಡಿದ್ದಾರೆ. ‘ಮದುವೆ ಆದವರಿಗೆ ನಾನು ಅಟ್ರ್ಯಾಕ್ಟ್ ಆಗಲ್ಲ’ ಎಂದು ನೇರ ಮಾತುಗಳಿಂದ ಅವರು ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶೋಯೆಬ್ ಮಲ್ಲಿಕ್ ಹಾಗೂ ಸಾನಿಯಾ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರ ದಾಂಪತ್ಯಕ್ಕೆ ಆಯೆಶಾ ಹುಳಿ ಹಿಂಡುವ ಕೆಲಸ ಮಾಡಿದ್ದರು ಎಂದು ಹೇಳಲಾಗಿತ್ತು. ಈ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅನೇಕರು ಶೋಯೆಬ್ ಮಲ್ಲಿಕ್ ಅವರನ್ನು ದೂರಿದರೆ ಇನ್ನೂ ಕೆಲವರು ಆಯೆಶಾ ವಿರುದ್ಧ ಕಿಡಿಕಾರಿದ್ದರು. ಪಾಕ್ನ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ನಡೆಸಿಕೊಡುವ ಟಾಕ್ಶೋನಲ್ಲಿ ಆಯೆಶಾ ಈ ಬಗ್ಗೆ ಮಾತನಾಡಿದ್ದಾರೆ.
‘ನೀವು ಶೋಯೆಬ್ ಮಲ್ಲಿಕ್ ಜೊತೆ ಡೇಟಿಂಗ್ ಮಾಡುತ್ತಿದ್ದೀರಂತೆ ಹೌದೇ’ ಎಂದು ಶೋಯೆಬ್ ಅಖ್ತರ್ ಅವರು ಆಯೆಶಾ ಬಳಿ ಕೇಳಿದರು. ಇದಕ್ಕೆ ಉತ್ತರಿಸಿದ ಅವರು, ‘ಇದನ್ನು ನಿಮಗೆ ಹೇಳಿದ್ದು ಯಾರು’ ಎಂದು ಆಯೆಶಾ ಮರುಪ್ರಶ್ನೆ ಹಾಕಿದರು. ಆಗ ಅಖ್ತರ್ ಅವರು, ಎಲ್ಲೋ ಓದಿದ್ದು ಎಂದರು. ‘ನಾನು ಮದುವೆ ಆದ ವ್ಯಕ್ತಿಗೆ ಅಥವಾ ಕಮಿಟ್ ಆದವರಿಗೆ ಆಕರ್ಷಿತಗೊಳ್ಳುವುದಿಲ್ಲ. ನಾನು ಹೇಗೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಆಯೆಶಾ ಹೇಳಿದರು.
ಇದನ್ನೂ ಓದಿ: ‘ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ’: ‘ರಾವಲ್ಪಿಂಡಿ ಎಕ್ಸ್‌ಪ್ರೆಸ್; ವೇಗಕ್ಕೆ ಬ್ರೇಕ್ ಹಾಕಿದ ಶೋಯೆಬ್ ಅಖ್ತರ್
ಈ ಮೊದಲು ಈ ವಿಚಾರವಾಗಿ ಅವರು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ‘ಅವರು ಖುಷಿಯಿಂದ ಮದುವೆ ಆಗಿದ್ದಾರೆ. ನಾನು ಇಬ್ಬರನ್ನೂ ಗೌರವಿಸುತ್ತೇನೆ. ಶೋಯೆಬ್ ಹಾಗೂ ನಾನು ಒಳ್ಳೆಯ ಫ್ರೆಂಡ್ಸ್. ನಾವಿಬ್ಬರೂ ಪರಸ್ಪರ ಗೌರವಿಸುತ್ತೇವೆ. ಈ ರೀತಿಯ ಸಂಬಂಧಗಳು ಜಗತ್ತಿನಲ್ಲಿ ಇವೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ