ಚಿತ್ರದುರ್ಗದಲ್ಲಿ ಕಟ್ಟಡ ಕಾರ್ಮಿಕರ ಭಾರೀ ಪ್ರತಿಭಟನೆ: ಭ್ರಷ್ಟಾಚಾರ ತನಿಖೆ, ಸೌಲಭ್ಯ ಪುನರ್‌ಸ್ಥಾಪನೆಗೆ ಆಗ್ರಹ.

ಚಿತ್ರದುರ್ಗ ಡಿ. 09

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನೋಂದಾಯಿತ ಕಟ್ಟಡ ಕಾರ್ಮಿಕರ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಚಿತ್ರದುರ್ಗ ನಗರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾರ್ಮಿಕರ ಕಲ್ಯಾಣ ಮಂಡಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದಾರೆ.

ಚಿತ್ರದುರ್ಗ ನಗರದಲ್ಲಿ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆಯನ್ನು ನಡೆಸಿದ ಕಾರ್ಮಿಕರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಪ್ರಾರಂಭಗೊಂಡು 18 ವರ್ಷಗಳು ಕಳೆದು ಹೋಗಿವೆ 2023ನೇ ಸಾಲಿನಿಂದ ಇಲ್ಲಿಯವರೆಗೆ ಮಂಡಳಿಯಲ್ಲಿ ಬೃಹತ್ ಬ್ರಷ್ಟಾಚಾರ ನಡೆದಿದ್ದು, ಟೆಂಡರ್ ನೀಡಿರುವ ಎಲ್ಲಾ ಯೋಜನೆಗಳ ತನಿಖೆಗೆ ಆದೇಶ ಮಾಡುವಂತೆ ಆಗ್ರಹಿಸಿದ್ದು, ನಮ್ಮ ಸಂಘದ ಹೋರಾಟಗಳ ಮುಖಾಂತರ ನೋಂದಾಯಿತ ಕಟ್ಟಡ ಕಾರ್ಮಿಕರ ಕಾನೂನುಗಳಿಗೆ ತಿದ್ದುಪಡಿ ತಂದು, ಅನೇಕ ಸೌಲಭ್ಯಗಳನ್ನು ಹೆಚ್ಚಿಗೆ ಮಾಡಿಸಿ, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನಮ್ಮ ಸಂಘ ದಾರಿದೀಪವಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಅನೇಕ ಬದಲಾವಣೆಗಾಗಿ 2023ನೇ ಸಾಲಿನಿಂದ ಇಲ್ಲಿಯವರೆಗೆ ಮಂಡಳಿಯಲ್ಲಿ ಬೃಹತ್ ಬ್ರಷ್ಟಾಚಾರ ನಡೆದಿದ್ದು, ಟೆಂಡರ್ ನೀಡಿರುವ ಎಲ್ಲಾ ಯೋಜನೆಗಳ ತನಿಖೆಗೆ ಆದೇಶ ಮಾಡುವಂತೆ ಆಗ್ರಹಿಸಿದೆ.

2023ನೇ ಸಾಲಿನಿಂದ ಎಸ್.ಸಂತೋಷ್ ಎಸ್.ಲಾಡ್, ಕಾರ್ಮಿಕ ಸಚಿವರಾದ ನಂತರ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮಂಡಳಿಯಿಂದ ನೀಡುತ್ತಿದ್ದ, ಅನೇಕ ಸೌಲಭ್ಯಗಳಿಗೆ ಕತ್ತರಿ ಹಾಕಿಸಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಬೇಕಿಲ್ಲದ ಯೋಜನೆಗಳನ್ನು ಜಾರಿಗೆ ತಂದು ಇಲ್ಲಿಯವರೆಗೆ ಅಂದಾಜಿ 4 ಸಾವಿರ ಕೋಟಿರೂಗಳನ್ನು ವ್ಯಯಿಸಿದ್ದು, ಸಾವಿರಾರು ಕೋಟಿ ರೂಗಳಷ್ಟು ಟೆಂಡರ್ ಪಡೆದ ಖಾಸಗಿ ಏಜೆನ್ಸಿಗಳಿಗೆ ಮಣೆಹಾಕಿ ನೋಂದಾಯಿತ ಕಟ್ಟಡ ಕಾರ್ಮಿಕರ ಸೆಸ್ ಹಣವನ್ನು ಈ ರೀತಿ ಸಂತೋಷ್.ಎಸ್.ಲಾಡ್. ಲೂಟಿ ಮಾಡಿಸಿದ್ದು ಸಿ.ಎ.ಜಿ. (ಕಂಟೋಲರ್ ಮತ್ತು ಆಡಿಟರ್ ಜನರಲ್ ಭಾರತ) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ವೆಚ್ಚಗಳ ಲೆಕ್ಕ ಪರಿಶೋಧಿಸುವ ಇಲಾಖೆಯು ನೀಡಿದ ವರದಿಯಲ್ಲಿ ಮಂಡಳಿಯ ಬ್ರಷ್ಟಾಚಾರ ಬಹಿರಂಗವಾಗಿದೆ. ಮಂಡಳಿಯು ಜಾರಿಗೆ ತಂದ ಎಲ್ಲಾ ಟೆಂಡರ್ ಕಾರ್ಯಕ್ರಮಗಳು ಬೋಗಸ್ ಕಾರ್ಯಕ್ರಮಗಳು ಎಂದು ವರದಿಯಾಗಿದೆ.

ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಮರೀಚಿಕೆಯಾಯಿತು. ಅಂಗವಿಕಲರ ಪಿಂಚಣಿ ಮತ್ತು ನಿವೃತ್ತಿ ಪಿಂಚಿಣಿ ವರ್ಷಕ್ಕೆ ಒಂದು ಬಾರಿ ನೀಡಲಾಗುತ್ತಿದೆ. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನಿರ್ಮಾಣ ಮಾಡಿಕೊಡಬೇಕಾಗದ ಕನಸಿನ ಮನೆಗಳು ಮರೆಯಾದವು ಎಂದಿದ್ದಾರೆ. ವೈದ್ಯಕೀಯ ಸಹಾಯಧನ ಮರುಪಾವತಿ ಮರೆಯಾಗಿದೆ. ನೋಂದಾಯಿತ ಕಟ್ಟಡ ಕಾರ್ಮಿಕರು ಯಾವುದೇ ಹಣಕಾಸಿನ ಸೌಲಭ್ಯ ಪಡೆಯಲು 1-2 ವರ್ಷಗಟ್ಟಲೆ ಕಾಯಬೇಕಾಗಿರುವುದು ಅನಿರ್ವಾಯವಾಗಿದೆ. ನೋಂದಾಯಿತ ಕಟ್ಟಡ ಕಾರ್ಮಿಕರ ಸಹಜ ಸಾವಿಗೆ ರೂ. 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿ ಕಳೆದ 15 ವರ್ಷಗಳಿಂದ ಮನವಿ ಸಲ್ಲಿಸಿಸಲಾಗಿದೆ. ನೋಂದಾಯಿತ ಕಟ್ಟಡ ಕಾರ್ಮಿಕನ ಕನಸಿನ ಮನೆ ನಿರ್ಮಾಣ ಮಾಡಿಕೊಳ್ಳಲು ಫಲಾನುಭವಿಗಳಿಗೆ ರೂ. 5 ಲಕ್ಷ ಸಹಾಯಧನ ನೀಡುವಲ್ಲಿ ಸರ್ಕಾರ ಮತ್ತು ಮಂಡಳಿ ವಿಫಲವಾಗಿದೆ.

ಸಚಿವ ಸಂತೋಷ್ ಎಸ್.ಲಾಡ್‍ರವರು ಕಾರ್ಮಿಕರ ಕಲ್ಯಾಣ ಮಂಡಳಿಗೆ ಅಧ್ಯಕ್ಷರಾದ ಮೇಲೆ ನೊಂದಾಯಿತ ಕಟ್ಟಡ ಉಚಿತವಾಗಿ ನೀಡಲಾಗಿರುವ ಪುರುಷ ಸುರಕ್ಷಾ ಕಿಟ್, ಮಹಿಳಾ ಸುರಕ್ಷಾ ಕಿಟ್, ಪ್ಲಂಬರ್ ಕಿಟ್, ಎಲೆಕ್ಟಿಕ್ಟಲ್ ಕಿಟ್, ಮೇಷನ್ ಕಿಟ್, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಸಂಚಾರಿ ಕ್ಲಿನಿಕ್ ಹೆಸರಿನಲ್ಲಿ ಸರಿಸುಮಾರು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನೀಡಿರುವ ಈ ಉಚಿತ ಸೌಲಭ್ಯಗಳಿಂದ ಸರಿ ಸುಮಾರು ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ ಎಂದು ದೂರಿದರು.

ಈ ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷರಾದ ಜೆ.ಮಂಜುನಾಥ್, ರಾಜ್ಯ ಉಪಾದ್ಯಕ್ಷರಾದ ಕೆ.ಗೌಸ್ ಪೀರ್, ನಾದಿಅಲಿ, ನರಸಿಂಹರಾಜು, ರಾಜ್ಯ ಖಂಜಾಚಿ ಈಶ್ವರಪ್ಪ, ಉಪ ಖಂಜಾಚಿ ಚಾಂದ್ ಪೀರ್, ರಾಜ್ಯ ನಿರ್ದೆಶಕರಾದ ಗೌಸಖಾನ್, ಸಲಿಂ, ರಾಜಪ್ಪ, ತಿಮ್ಮಯ್ಯ, ರಫಿಕ್, ಫೈರೋಜ್, ಪ್ರಸನ್ನ. ರಘು, ನಿಂಗರಾಜು, ಲಕ್ಷ್ಮಣಶಟ್ರು, ಗೌರೌವಾಧ್ಯಕ್ಷರಾಧ ಮಹಾಂತೇಶ್, ವೆಂಕಟೇಶ್, ಮಲ್ಲಿಕಾರ್ಜನ್, ಸಮೃದ್ದಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಮಘದ ಅಧ್ಯಕ್ಷ ವೆಂಕಟೇಶಪ್ಪ . ಖಂಜಾಚಿ ಮಹಂತೇಶ್, ಜಿಲ್ಲಾ ಟೈಲ್ಸ್ ಮತ್ತು ಗ್ರಾನೈಟ್ ಕಾರ್ಮಿಕರ ಸಂಘದ ಅಧ್ಯಕ್ಷರಾದ ಟಿ.ಚಂದ್ರಪ್ಪ ಖಂಜಾಚಿ ವೃಷಭೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *