
Entertainment:ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳುವುದಕ್ಕೆ ಜನರು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದು ಯುವಕರು ಹೊಸ ವರ್ಷದ ಪಾರ್ಟಿ ಮೂಡ್ನಲ್ಲಿ ಇದ್ದಾರೆ. ಕೆಲವು ನ್ಯೂ ಇಯರ್ ಅಂತ ಟ್ರಿಪ್‌ಗೆ ಹೋಗಿದ್ದಾರೆ. ಮತ್ತೆ ಕೆಲವರು ಬಾಟಲ್ ಹಿಡಿದು ಚಿತ್ ಆಗೋ ಮೂಡ್ನಲ್ಲಿದ್ದಾರೆ.
ಹೊಸ ವರ್ಷ ಪಾರ್ಟಿ ಅಂತ ಸ್ಕೆಚ್ ಹಾಕಿ ಕೂತವರಿಗೆ ಒಂದು ಪಾರ್ಟಿ ಸಾಂಗ್ ಇರದೇ ಹೋದ್ರೆ ಹೇಗೆ? ಪಾರ್ಟಿ ಅಂದ್ಮೇಲೆ ಪಾರ್ಟಿ ಸಾಂಗ್ ಇದ್ದರೇನೆ ಚಂದ. ಅದಕ್ಕೆ ಸತೀಶ್ ನೀನಾಸಂ ಪಾರ್ಟಿ ಮೂಡ್ನಲ್ಲಿ ಇರೋ ಯೂತ್ಸ್‌ಗಾಗಿ ಮಸ್ತ್ ಆಗಿರೋ ಪಾರ್ಟಿ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ.
ಅಂದ್ಹಾಗೆ ಈ ಹೊಸ ಪಾರ್ಟಿ ಸಾಂಗ್ ಸತೀಶ್ ನೀನಾಸಂ ಹೊಸ ಸಿನಿಮಾ ‘ಮ್ಯಾಟ್ನಿ’ಯದ್ದು. ಈ ಹಾಡಿನ ಮೂಲಕ ಯೂತ್ಸ್ ನ್ಯೂ ಇಯರ್ ಅನ್ನು ಮತ್ತಷ್ಟು ರಂಗು ರಂಗಾಗಿಸಲು ಸಜ್ಜಾಗಿದ್ದಾರೆ. ‘ಮ್ಯಾಟ್ನಿ’ ಸಿನಿಮಾದ “ಬಾರೋ ಬಾರೋ ಬಾಟಲ್ ತಾರೋ..” ಹಾಡು ಈಗಾಗಲೇ ರಿಲೀಸ್ ಆಗಿದ್ದು ಸಂಗೀತ ಪ್ರಿಯರ ಕಿವಿಯೊಳಗೆ ಗುಯ್ಂ ಎನ್ನುತ್ತಿದೆ.
ಈ ಸ್ಪೆಷಲ್ ಸಾಂಗ್ ಅನ್ನು ವಿಶೇಷ ಅತಿಥಿಯಾಗಿ ಆಗಮಿಸಿರೋ ಡಾಲಿ ಧನಂಜಯ್ ರಿಲೀಸ್ ಮಾಡಿದ್ದಾರೆ. ಇವರೊಂದಿಗೆ ನೀನಾಸಂ ಸತೀಶ್, ಡಾಲಿ ಧನಂಜಯ್, ನಾಗಭೂಷಣ್, ಶಿವರಾಜ್ ಕೆ.ಆರ್ ಪೇಟೆ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ನಟ ಪೂರ್ಣ ಕೂಡ ಸಾಥ್ ಕೊಟ್ಟಿದ್ದಾರೆ. ಈ ಪಾರ್ಟಿ ಸಾಂಗ್ ರಿಲೀಸ್ ವೇಳೆ ಮಜವಾದ ಚರ್ಚೆ ಕೂಡ ನಡೆದಿದೆ.
ಸತೀಶ್ ನೀನಾಸಂ ಗೆಳೆಯ ಡಾಲಿ ಧನಂಜಯ್ ಅವರನ್ನು ಕರೆಸಿ, ಸ್ನೇಹಿತರನ್ನೂ ಕರೆಸಿ ಅವರಿಗೂ ಗೊತ್ತಾಗಂತೆ ‘ಮ್ಯಾಟ್ನಿ’ ಸಿನಿಮಾದ “ಬಾರೋ ಬಾರೋ ಬಾಟಲ್ ತಾರೋ..” ಸಾಂಗ್ ರಿಲೀಸ್ ಮಾಡಿದ್ದಾರೆ. ಈ ವೇಳೆ ಡಾಲಿ ಧನಂಜಯ್ “ಹಾಡು ಚೆನ್ನಾಗಿದೆ ಒಬ್ಬ ಒಳ್ಳೆಯ ಜೆನ್ಯೂನ್ ವ್ಯಕ್ತಿ ಕಡೆಯಿಂದ ಬಿಡುಗಡೆ ಮಾಡ್ಸು, ನ್ಯೂ ಇಯರ್ ಬಂದೇ ಬಿಡ್ತು ಲಾಂಚ್ ಮಾಡ್ಸು” ಅನ್ನೋ ಡಾಲಿ ಧನಂಜಯ್‌ಗೆ ಸತೀಶ್ ನೀನಾಸಂ ಚಮಕ್ ಕೊಟ್ಟಿರೋದಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
‘ಮ್ಯಾಟ್ನಿ’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಸದ್ಯ ಮನೋಹರ್ ಕಾಂಪಳ್ಳಿ ನಿರ್ದೇಶನ ಮಾಡಿದ್ದಾರೆ. ಸತೀಶ್ ನೀನಾಸಂ, ರಚಿತಾ ರಾಮ್, ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1