ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮೇ. 18 ಇಂದಿನ ಪ್ರಸ್ತುತ ಸನ್ನಿವೇಷದಲ್ಲಿ ವಸ್ತು ಸಂಗ್ರಹಾಲಯಕ್ಕಷ್ಟೇ ಸೀಮಿತವಾಗದೇ ಸಂಶೋಧನೆಗೆ ವೇದಿಕೆಗಳಾಗಿದ್ದು ಇಂದಿನ ಕೃತಕ ಬುದ್ದಿ ಮತ್ತೆ ಪೂರಕವಾಗಿ ವಿಭಿನ್ನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಯುವಜನತೆಯನ್ನು ತಲುಪಬೇಕಾಗಿದೆ ಎಂದು ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಧ್ಯಾಪಕರಾದ ಡಾ. ರಂಗನಾಥರಾವ್. ಹೆಚ್. ಕರಾಡ್ ತಿಳಿಸಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿ ಸರ್ಕಾರಿ ವಸ್ತುಸಂಗ್ರಹಾಲಯ
ಚಿತ್ರದುರ್ಗ ಇದರವತಿಯಿಂದ ಮೇ.18 ರಂದು ರಂಗಯ್ಯನ ಬಾಗಿಲ ಬಳಿ ಹಮ್ಮಿಕೊಳ್ಳಲಾದ ಅಂತರರಾಷ್ಟ್ರೀಯ
ವಸ್ತುಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 1479ರಲ್ಲಿ ಇಟಲಿಯ ರೋಮ್ ನಗರದಲ್ಲಿ
ಸ್ಥಾಪಿತವಾದ ಅತ್ಯಂತ ಪ್ರಾಚೀನ ವಸ್ತುಸಂಗ್ರಹಾಲಯ ಬೆಳವಣಿಗೆಯಿಂದ ಪ್ರೇರೇಪಿತರಾದ ವಿಶ್ವದ ಅನೇಕ ದೇಶಗಳು ತಮ್ಮ
ಸಂಸ್ಕøತಿ, ಪರಂಪರೆ ಹಾಗೂ ಇತಿಹಾಸದ ಅಭಿವೃದ್ಧಿಗೆ ಪೂರಕವಾಗಿ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಿದ್ದು ವಿಶೇಷವಾಗಿ
1814ರಲ್ಲಿ ಭಾರತದ ಇಂಡಿಯನ್ ಮ್ಯೂಜಿಯಂ ಕಲ್ಕತ್ತಾ ಇದರ ಸ್ಥಾಪನೆ ಹೇಗೆ ಭಾರತದಲ್ಲಿ ವಸ್ತುಸಂಗ್ರಹಾಲಯದ ಬೆಳೆವಣಿಗೆಗೆ ಪೂರಕವಾಯಿತು ಎಂಬ ವಿಷಯದ ಜೊತೆಗೆ ವೇಗವಾಗಿ ಬದಲಾಗುತ್ತಿರುವ ಸಮುದಾಯಗಳಲ್ಲಿ ವಸ್ತು ಸಂಗ್ರಹಾಲಯಗಳ ಭವಿಷ್ಯ,
ಈ ವಿಷಯವಾಗಿ ಇಂದಿನ ಪ್ರಸ್ತುತ ಸನ್ನಿವೇಷದಲ್ಲಿ ವಸ್ತು ಸಂಗ್ರಹಾಲಯಕ್ಕಷ್ಟೇ ಸೀಮಿತವಾಗದೇ ಸಂಶೋಧನೆಗೆ ವೇದಿಕೆಗಳಾಗಿದ್ದು ಇಂದಿನ ಕೃತಕ ಬುದ್ದಿ ಮತ್ತೆ ಪೂರಕವಾಗಿ ವಿಭಿನ್ನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಯುವಜನತೆಯನ್ನು ತಲುಪಬೇಕಾಗಿದೆ ಎಂದರು.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರಾಜಪ್ಪ ಮಾತನಾಡಿ ವಸ್ತು ಸಂಗ್ರಹಾಲಯಗಳು ಜ್ಞಾನದ ಭಂಡಾರವಾಗಿವೆ ಇವುಗಳನ್ನು ವೀಕ್ಷಣೆ ಮಾಡಿ ಇತಿಹಾಸ ತಿಳಿಯಲು ನಾಗರೀಕರು ಮತ್ತು ಯುವ ಜನತೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಚಿತ್ರದುರ್ಗ ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷರಾದ ಗೋಪಾಲಸ್ವಾಮಿ ನಾಯಕರು ಮಾತನಾಡಿ ಚಿತ್ರದುರ್ಗ
ನಗರದಲ್ಲಿ ಈಗಿರುವ ವಸ್ತುಸಂಗ್ರಹಾಲಯ ಸ್ಥಾಪನೆಗೆ ಹುಲ್ಲೂರು ಶ್ರೀನಿವಾಸ ಜೋಯಿಸರ ಕೊಡುಗೆ ಅಪಾರವಾಗಿದ್ದು ಚಿತ್ರದುರ್ಗ
ಇತಿಹಾಸದ ಅಮೂಲ್ಯ ಬೆಳಕು ಚೆಲ್ಲಿದ್ದಾರೆ ನಗರದಲ್ಲಿ ಐತಿಹಾಸಿಕ ಕೋಟೆ ಎದುರುಗಡೆ ಇರುವ ಪಿಲ್ಟರ್‍ಹೌಸ್ ಕಟ್ಟಡವನ್ನು
ಪುರಾತತ್ವ ಇಲಾಖೆಯ ಹೆಸರಿಗೆ ಮಾಡಿಸಿಕೊಡಲು ನಗರ ಸಭೆಯ ಮಾಜಿ ಅಧ್ಯಕ್ಷರಾದ ಕಾಂತರಾಜ್‍ರವರು ಅಧ್ಯಕ್ಷರಾಗಿದ್ದಾಗ
ಸಂಪೂರ್ಣ ಬೆಂಬಲ ನೀಡಿದರು ಪಿಲ್ಟರ್‍ಹೌಸ್ ಕಟ್ಟಡಕ್ಕೆ ವಸ್ತು ಸಂಗ್ರಹಾಲಯ ಹಸ್ತಾಂತರವಾದರೆ ಪ್ರವಾಸಿಗರಿಗೆ ತುಂಬಾ
ಅನುಕೂಲವಾಗುತ್ತದೆ ಎಂದರು.
ಶ್ರೀ ಕ್ಯಾತಲಿಂಗೇಶ್ವರ ದೇವಸ್ಥಾನದ ಸಮಿತಿ ಆದ್ಯಕ್ಷರಾದ ಬೊಮ್ಮಣ್ಣ ಮಾತನಾಡಿ ಚಿತ್ರದುರ್ಗದ ಹತ್ತಿರ ತಮಟಕಲ್‍ನಲ್ಲಿರುವ
ಗುಣಮಧುರನ ಶಾಸನ ಸಂರಕ್ಷಣೆಗೆ ಪ್ರಹ್ಲಾದ್. ಜಿ. ಸಹಾಯಕ ನಿರ್ದೇಶಕರು ತುಂಬಾ ಕಾಳಜಿ ವಹಿಸಿದರು ಜಿಲ್ಲೆಯಲ್ಲಿರುವ
ಅಮೂಲ್ಯ ಶಾಸನಗಳ ರಕ್ಷಣೆಗೆ ಅವರು ಇನ್ನು ಕ್ರಮವಹಿಸಲಿ ಎಂದರು
ನಗರಸಭೆಯ ಮಾಜಿ ಸದಸ್ಯರಾದ ಮಹಂತೇಶ್ ಮಾತನಾಡಿ ಈಗಿರುವ ರಂಗಯ್ಯನ ಬಾಗಿಲು ಸ್ಮಾರಕ ರಕ್ಷಣೆಗೆ ಸ್ಥಳೀಯ
ನಾಗರೀಕರು ಮದಕರಿ ಗಣಪತಿ ಸಮಿತಿಯವರ ಕಾಳಜಿಯಿಂದಾಗಿ ಕೋಟೆ ಬಾಗಿಲು ಉಳಿದು ಬಂದಿದೆ ಎಂದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಹ್ಲಾದ್. ಜಿ ಮಾತನಾಡಿ ನಮ್ಮ
ಇಲಾಖಾ ವತಿಯಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪ್ರಾಚ್ಯಾವಶೇಷಗಳ ಗ್ರಾಮವಾರು ಸರ್ವೇ ಕಾರ್ಯವನ್ನು ನಡೆಸಲಾಗಿದೆ
ಪ್ರಾಚ್ಯಾವಶೇಷಗಳ ಸಂರಕ್ಷಣೆಗೆ ಪ್ರಾಮುಖ್ಯತೆ ವಹಿಸಲಾಗಿದೆ ಮತ್ತು ಜಿಲ್ಲೆಯಲ್ಲಿರುವ ಸ್ಮಾರಕಗಳ ರಕ್ಷಣೆಗೆ ಅಗತ್ಯ ಕ್ರಮ
ವಹಿಸಲಾಗುತ್ತಿದೆ ಎಂದರು
ಕಾರ್ಯಕ್ರಮದಲ್ಲಿ ನಗರದ ಸಾರ್ವಜನಿಕರು ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.