
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ, 11 : ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬಿಜೆಪಿ ಯುವ ಮುಖಂಡ, ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸಿಇಓ ಎಂ.ಸಿ.ರಘುಚಂದನ್ ಭಾಗವಹಿಸಿ ಗಂಗಾ, ಯುಮುನಾ ಹಾಗೂ ಗುಪ್ರಗಾಮಿನಿಯಾಗಿ ಸರಸ್ವತಿ ನದಿ ಸೇರುವ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ, ಸೂರ್ಯನಿಗೆ ಅಘ್ರ್ಯ ಅರ್ಪಣೆ ಮಾಡಿದ್ದಾರೆ.
144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಜಗತ್ತಿನ ಮೂಲೆ ಮೂಲೆಗಳಿಂದ ಕೋಟ್ಯಾಂತರ ಆಸ್ತಿಕರು ಪ್ರಯಾಗ್‍ರಾಜ್ ಕಡೆ ಬರುತ್ತಿದ್ದಾರೆ.ದೇಶದ ಇತಿಹಾಸದಲ್ಲಿ ಇದೊಂದು ಮೈಲುಗಲ್ಲು ಎನ್ನುವಂತೆ ಕುಂಭ ಮೇಳ ನಡೆಯುತ್ತಿದ್ದು, ಸಾವಿರಾರು ನಾಗಾಸಾಧುಗಳು ಭಾಗವಹಿಸಿರುವುದು ವಿಶೇಷವಾಗಿದೆ.