ಔಷಧಿಯೂ ಮಾನವನ ಬದುಕಿನ ಅಂಶ – ಉಪವಿಭಾಗಾಧಿಕಾರಿ ಮಹಮ್ಮದ್ ಜುಲಾನಿ ಖುರೇಷಿ.

ಚಿತ್ರದುರ್ಗದಲ್ಲಿ ನೂತನ ಔಷಧಿ ಭವನ ಉದ್ಘಾಟನೆ – ಆರೋಗ್ಯ, ಔಷಧಿ ನಿಯಂತ್ರಣ ಹಾಗೂ ಜಾಗೃತಿ ಕುರಿತ ಚರ್ಚೆ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಅ. 26

ಮಾನವನ ಇಂದಿನ ಜೀವನದಲ್ಲಿ ಔಷಧಿಯೂ ಸಹಾ ಒಂದು ಭಾಗವಾಗಿದೆ, ಉತ್ತಮವಾದ ಆರೋಗ್ಯ ನಿರ್ಮಾಣಕ್ಕೆ ಔಷಧಿಯೂ ಸಹಾ ಸಹಾಯಕವಾಗಿದೆ ಎಂದು ಉಪ ವಿಭಾಗಾಧಿಕಾರಿಗಳಾದ ಮಹಮ್ಮದ್ ಜುಲಾನಿ ಖುರೇಷಿ ತಿಳಿಸಿದರು. ಚಿತ್ರದುರ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದವತಿಯಿಂದ ಭಾನುವಾರ ನೂತನವಾಗಿ ಚಳ್ಳಕೆರೆ ರಸ್ತೆಯ ಆಕ್ಷಯ ಗ್ಲೋಬಲ್ ಆಸ್ಪತ್ರೆಯ ಹಿಂಭಾಗದ ಶ್ರೀರಾಮ ಬಡಾವಣೆಯಲ್ಲಿ ನಿರ್ಮಾಣ ಮಾಡಲಾದ ಔಷಧಿ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರೋಗ್ಯ ಭಾಗ್ಯವನ್ನು ಹೊಂದಿದವರು ಉತ್ತಮವಾದರೆ, ಔಷಧಿ ಇದ್ದವರು ಸೌಭಾಗ್ಯವನ್ನು ಹೊಂದಿದವರಾಗಿದ್ದಾರೆ, ಇದು ಈಗಿನ ಕಾಲಕ್ಕೆ ಆನ್ವಯವಾಗುವಂತ ಮಾತಾಗಿದೆ. ಇಂದಿನ ದಿನಮಾನದಲ್ಲಿ ಆಹಾರದಷ್ಟೇ ಪ್ರಾಮುಖ್ಯತೆಯನ್ನು ಔಷಧಿಗೂ ಸಹಾ ನೀಡಬೆಕಾದ ಅನಿವಾರ್ಯತೆ ಉಂಟಾಗಿದೆ. ಔಷಧಿಯೂ ಸಹಾ ಇಂದಿನ ಮಾನವರ ಬದುಕಿನಲ್ಲಿ ಒಂದು ಭಾಗವಾಗಿದೆ ಮಾನವನ ಉತ್ತಮವಾದ ಆರೋಗ್ಯ ನಿರ್ಮಾಣಕ್ಕೆ ಔಷಧಿಯೂ ಸಹಾ ಅಗತ್ಯವಾಗಿದೆ ಎಂದರು. ಒಬ್ಬ ರೋಗಿ ನಿಮ್ಮ ಬಳಿ ಬಂದು ಔಷಧಿಯನ್ನು ಪಡೆಯುವಾಗ ಆತನಿಗೆ ದೈಹಿಕವಾಗಿ ದೈರ್ಯಕ್ಕಿಂತ ಮಾನಸಿಕವಾಗಿ ಹೆಚ್ಚಾಗಿ ಆತ್ಮಸ್ಥರ್ಯವನ್ನು ತುಂಬುವಂತ ಕಾರ್ಯವಾಗಬೇಕಿದೆ. ರೋಗಿಯನ್ನು ಮಾನಸಿಕವಾಗಿ ಕುಗ್ಗದೆ ಆತನಿಗೆ ದೈರ್ಯವನ್ನು ತುಂಬುವಂತ ಕಾರ್ಯವನ್ನು ಮಾಡಬೇಕಿದೆ ಆಗ ಮಾತ್ರ ಆತ ರೋಗದಿಂದ ಚೇತರಿಸಿಕೊಳ್ಳಲು ಸಾಧ್ಯವಿದೆ. ನಿಮ್ಮ ಅಂಗಡಿಗೆ ಔಷಧಿಯನ್ನು ತೆಗೆದುಕೊಳ್ಳಲು ಬರುವವರಿಗೆ ದಯವಿಟ್ಟು ವ್ಯದ್ಯರು ಚೀಟಿಯಲ್ಲಿ ಬರೆದಿರುವ ಔಷಧಿಯನ್ನು ಮಾತ್ರ ನೀಡಿ ಅದಕ್ಕೆ ಪರ್ಯಾಯವಾಗಿ ಬೇರೆ ಮಾತ್ರೆಯನ್ನು ನೀಡಬೇಡಿ. ಇತ್ತೀಚಿ ದಿನಮಾನದಲ್ಲಿ ನಕಲಿ ಔಷಧಿಗಳ ಹಾವಳಿ ಹೆಚ್ಚಾಗಿದೆ ಸರ್ಕಾರ ಇದರ ನಿಯಂತ್ರಣಕ್ಕೂ ಸಹಾ ಮುಂದಾಗಿದೆ. ನೀವು ಸಹಾ ನಕಲಿ ಎಂದು ಗೋತ್ತಾದರೆ ಅದರ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಿ ಸಹಕಾರ ಮಾಡಿ ಜನರಲ್ಲಿ ಇದರ ಬಗ್ಗೆ ಜಾಗೃತಿಯನ್ನು ಮೂಡಿಸಿ ಎಂದು ತಿಳಿಸಿದರು. ಸಹಾಯಕ ಔಷಧಿ ನಿಯಂತ್ರಕರಾದ ಕೆಂಪಯ್ಯ ಸುರೇಶ್ ಮಾತನಾಡಿ, ಇಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಕಟ್ಟಡ ಉತ್ತಮವಾಗಿದೆ ಇದರ ಸದುಪಯೋಗ ಆಗಬೇಕಿದೆ ಕಾಲ ಕಾಲಕ್ಕೆ ತಕ್ಕಂತೆ ಸರ್ಕಾರ ಮಟ್ಟದಲ್ಲಿ ಜಾರಿಯಾಗುವ ಆದೇಶಗಳನ್ನು ಸಕಾಲಕ್ಕೆ ತಮ್ಮ ಸದಸ್ಯರಿಗೆ ತಲುಪಿಸುವುದರ ಮೂಲಕ ಸೂಕ್ತವಾದ ವ್ಯಾಪರಕ್ಕೆ ಅನುವು ಮಾಡಿಕೊಡಿ, ಔಷಧಿ ವಿತರಣೆಯಲ್ಲಿ ಬೇರೆ ರಾಜ್ಯಗಳು ಆಭೀವೃದ್ದಿಯನ್ನು ಕಾಣುತ್ತಿವೆ ಆದರೆ ನಮ್ಮ ರಾಜ್ಯ ಇದರಲ್ಲಿ ಹಿಂದೆ ಇದೆ. ಪ್ರಗತಿಯನ್ನು ಕಾಣಬೇಕಿದೆ. ಇಲಾಖೆಯಲ್ಲಿನ ವೆಬ್ ಸೈಟ್ ಪ್ರತಿ ದಿನ ನೋಡುವ ಹವ್ಯಾಸವನ್ನು ಬೆಳಸಿಕೊಳ್ಳಿ ಇದರಿಂದ ನಿಮಗೆ ಅನುಕೂಲವಾಗುತ್ತದೆ ಎಂದರು. ಹರೀಶ್ ಜೈನ್ ಮಾತನಾಡಿ, ಯಾವುದೇ ಒಂದು ಸಂಘಕ್ಕೆ ಅವರದ್ದೇ ಆದ ಕಟ್ಟಡ ಇರುವುದು ಗೌರವದ ಸಂಕೇತವಾಗಿದೆ, ಇಲ್ಲಿ ತಿಂಗಳಿಗೆ ಒಮ್ಮೆ ಸಭೆಯನ್ನು ಮಾಡುವುದರ ಮೂಲಕ ನಿಮ್ಮ ವೃತ್ತಿಗೆ ಸಂಬಂಧಪಟ್ಟ ಮಾಹಿತಿಯನ್ನು ಪಡೆಯಿರಿ, ಸಮಾಜ ಮತ್ತು ವೃತ್ತಿಗೆ ಗೌರವವನ್ನು ನೀಡಿ, ನಿಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ತಿಳಿಸಿ ಪರಿಹಾರವನ್ನು ಕಂಡುಕೊಳ್ಳಿ ಎಂದು ತಿಳಿ ಹೇಳಿದರು. ಕರ್ನಾಟಕ ರೀಟೇಲರ‍್ಸ್ ಡಿಸ್ಟ್ರಿಬ್ಯೂಟರ‍್ಸ್ ಆರ್ಗನೈಸೇಷನ್‌ನ ಅಧ್ಯಕ್ಷರಾದ ಸಿ ಜಯರಾಮ್ ಮಾತನಾಡಿ, ಔಷಧಿ ಭವನ ರಾಜ್ಯ ಮಟ್ಟದಲ್ಲಿ ಇಲ್ಲ ಆದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿರ್ಮಾಣವಾಗಿದೆ, ಶೀಘ್ರದಲ್ಲಿ ರಾಜ್ಯ ಮಟ್ಟದಲ್ಲಿಯೂ ಸಹಾ ಔಷಧಿ ಭವನ ನಿರ್ಮಾಣವಾಗಬೇಕಿದೆ. ಕೋವಿಡ್ ಸಮಯದಲ್ಲಿ ನಮ್ಮ ಔಷಧಿ ವಿತರಕರು ಉತ್ತಮವಾದ ಕೆಲಸವನ್ನು ಮಾಡಿದ್ದಾರೆ ಆದರೆ ಸರ್ಕಾರ ಇವರ ಕೆಲಸವನ್ನು ಗುರುತಿಸಿಲ್ಲ, ಅಲ್ಲದೆ ಈ ಸಮಯದಲ್ಲಿ ನಮ್ಮವರು ೩೦ ಜನ ಮೃತ ಪಟ್ಟಿದ್ದಾರೆ ಇವರಿಗೆ ಪರಿಹಾರವನ್ನು ಸಹಾ ನೀಡಿಲ್ಲ ಸರ್ಕಾರದ ಬದಲಿಗೆ ನಮ್ಮ ಸಂಸ್ಥೆವತಿಯಿಂದ ತಲಾ ೩ ಲಕ್ಷ ರೂಗಳಂತೆ ೯೦ ಲಕ್ಷ ರೂ.ಗಳನ್ನು ನೀಡಲಾಗಿದೆ. ಕೇಂದ್ರ ಸರ್ಕಾರ ನಡೆಸುತ್ತಿರುವ ಜನ ಔಷಧಿ ಕೇಂದ್ರಗಳಲ್ಲಿ ಕಾನೂನು ಬಾಹಿರವಾಗಿ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ ಇದರ ಬಗ್ಗೆ ದೂರು ನೀಡಿ ಸಾಕ್ಷಿಯನ್ನು ನೀಡಿದರು ಸಹಾ ಯಾವುದೆ ಪ್ರಯೋಜನವಾಗಿಲ್ಲ, ಕಾನೂನು ಪಾಲಿಸಿ ವ್ಯಾಪಾರ ಮಾಡುವವರಿಗೆ ನಮ್ಮ ಸಂಘ ಸದಾ ನಿಮಗೆ ಶ್ರೀರಕ್ಷೆಯಾಗಿರುತ್ತದೆ ಆದರೆ ಕಾನೂನು ಮೀರಿ ವ್ಯಾಪಾರ ಮಾಡುವವರಿಗೆ ಶಿಕ್ಷೆ ಕಾದಿರುತ್ತದೆ ಎಂದು ತಿಳಿಸಿದರು. ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತದ ಆಪರ ಔಷಧ ನಿಯಂತ್ರಕರು ಮತ್ತು ನಿಯಂತ್ರಣಾಧಿಕಾರಿಗಳಾದ ಡಾ.ಉಮೇಶ್ ಎಸ್. ಕೆ.ಸಿ.ಡಿ.ಎ. ಮತ್ತು ಚೇತನ ಹಾಗೂ ಚಿರಾಗ್ ಫಾರ್ಮನ ಮಾಜಿ ಅಧ್ಯಕ್ಷರಾದ ಕೆ.ಇ.ಪ್ರಕಾಶ್, ದಾವಣಗೆರೆಯ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಪ್ರಾದೇಶಿಕ ಕಚೇರಿಯ ಉಪ ಔಷಧಿ ನಿಯಂತ್ರಕರಾದ ಡಾ.ಎಂ.ಖಲಿದ್ ಆಹ್ಮದ್ ಖಾನ್ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಕಚೇರಿ ಚಿತ್ರದುರ್ಗ ವೃತ್ತದ ಸಹಾಯಕ ಔಷಧಿ ನಿಯಂತ್ರಕರಾದ ಸಿ.ಹೆಚ್.ಗೀರೀಶ್ ಎಸ್.ಜೆ.ಎಂ. ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ.ಟಿ.ಎಸ್.ನಾಗರಾಜ್ ಹಾಗೂ ದಾವಣಗೆರೆಯ ಏ.ಕೆ.ಫಾರ್ಮನ ಸಚಿನ್ ಆಚಾರ್ಯರವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರದುರ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಎಸ್.ಓಂಕಾರಮೂರ್ತಿ ವಹಿಸಿದ್ದರು ಇದೇ ಸಂದರ್ಭದಲ್ಲಿ ಬೆಂಗಳೂರಿನ ಗ್ರೂಪ್ ಫಾರ್ಮಾಸ್ಯೂಟಿಕಲ್ಸ್‌ನ ಉಪಾಧ್ಯಕ್ಷರಾದ ಡಾ.ಸುನಿಲ್ ಎಸ್.ಚಿಪ್ಲುಂಕರ್ ರವರು ಕಲಿಕಾ ಮತ್ತು ವ್ಯಾಪಾರ ಕೌಶಲ್ಯ ಪರಿಣಿತಿಯ ಬಗ್ಗೆ ಉಪನ್ಯಾಸ ನೀಡಿದರು. ದೀಕ್ಷಾ ಮನೋಜ್ಞ ನೃತ್ಯ ರೂಪಕದ ಮೂಲಕ ಗಣಪತಿಯ ಪ್ರಾರ್ಥನೆ ಮಾಡಿದರೆ, ಚಿತ್ರದುರ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಚಂದ್ರಮೋಹನ್ ರೆಡ್ಡಿ, ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಸ್. ವಿರೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಹಾ ಕಾರ್ಯದರ್ಶಿ ಬಿ.ಟಿ.ಬಸವರಾಜು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *