Mental Health: ಮೆದುಳನ್ನು ಆರೋಗ್ಯ, ಕ್ರಿಯಾಶೀಲವಾಗಿಡಲು ಸಹಾಯ ಮಾಡುವ ಚಟುವಟಿಕೆಗಳು 

ವಯಸ್ಸಾದಂತೆ ಕಂಡುಬರುವ ಅಲ್ಝೈಮರ್ ಮತ್ತು ಇತರ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬಾಧಿಸಬಾರದೆಂದರೆ ದೈಹಿಕ ಆರೋಗ್ಯದ ಜೊತೆಗೆ  ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕೂಡಾ ಮುಖ್ಯ. ನೀವು  ಕೆಲವೊಂದು ಮೆದುಳಿನ ಆರೋಗ್ಯಕ್ಕೆ ಪೂರಕವಾಗಿರುವ ಚಟುವಟಿಕೆಗಳನ್ನು ಮಾಡುವ ಮೂಲಕ ಮೆದುಳನ್ನು ಕ್ರೀಯಾಶಿಲ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳಬಹುದು.

ಆರೋಗ್ಯಕರವಾಗಿರಲು ಹೆಚ್ಚಿನ ಜನರು ದೈಹಿಕವಾಗಿ ಸದೃಢವಾಗಿರುವತ್ತ ಗಮನಹರಿಸುತ್ತಾರೆ, ಆದರೆ ನೀವು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು  ಬಯಸಿದರೆ, ದೇಹದ ಜೊತೆಗೆ ಮನಸ್ಸನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಮನಸ್ಸು ಮತ್ತು ದೇಹದ ನಡುವೆ ಬಹಳ ಆಳವಾದ ಸಂಬಂಧವಿದೆ. ಆದ್ದರಿಂದ ಮೆದುಳನ್ನು ಸಕ್ರಿಯವಾಗಿ ಮತ್ತು ಆರೋಗ್ಯಕರವಾಗಿರಿಸುವುದು ಬಹಳ ಮುಖ್ಯ. ಕೆಲವೊಂದು ಮೆದುಳಿಗೆ ವ್ಯಾಯಾಮ ನೀಡುವಂತಹ ಚಟುವಟಿಕೆಗಳನ್ನು ಮಾಡುವ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು,  ಮೆದುಳನ್ನು ಚುರುಕಾಗಿಸಬಹುದು. ಜೊತೆಗೆ ಈ ಅಭ್ಯಾಸದಿಂದ ವಯಸ್ಸಾದಂತೆ ಕಂಡುಬರುವ ಅಲ್ಝೈಮರ್ ಮತ್ತು ಇತರ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬಾರದಂತೆ ತಡೆಯಬಹುದು. ಹಾಗಿದ್ದರೆ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾದಂತಹ ಚಟುವಟಿಕೆಗಳು ಯಾವುದೆಂಬುದನ್ನು ನೋಡೋಣ.

ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಈ ಚಟುವಟಿಕೆಗಳು:

ಯೋಗ ಮತ್ತು ಧ್ಯಾನ: ನೀವು ಸಣ್ಣಪುಟ್ಟ ವಿಷಯಗಳ ಮೇಲೆ ಅಸಮಧಾನಗೊಂಡರೆ ಮತ್ತು ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗದಿದ್ದರೆ, ಈ ಪರಿಸ್ಥಿತಿಯನ್ನು ಎದುರಿಸಲು ಸುಲಭವಾದ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಧ್ಯಾನ ಮಾಡುವುದು. ಮುಂಜಾನೆ ಸ್ವಲ್ಪ ಬೇಗ ಎದ್ದು ಯೋಗ ಮತ್ತು ಧ್ಯಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ.  ಇದರಿಂದ ನೀವು ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಅಲ್ಲದೆ ಈ ಅಭ್ಯಾಸಗಳು ಮನಸಿನ ಒತ್ತಡವನ್ನು ತೊಡೆದುಹಾಕುತ್ತದೆ. ಮಾನಸಿಕವಾಗಿ ಸದೃಢವಾಗಿರುವುದರ ಮೂಲಕ ಅಲ್ಝೈಮರ್ ಕಾಯಿಲೆಯಂತಹ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಚೆಸ್, ಸುಡೋಕು ಮುಂತಾದ ಆಟಗಳನ್ನು ಆಡುವುದು: ನಿಮ್ಮ ಮೆದುಳಿಗೆ ವ್ಯಾಯಾಮ ಮಾಡಲು, ಚೆಸ್, ಸುಡೋಕು ಮುಂತಾದ ಮೆದುಳಿನ ಚುರುಕುತನಕ್ಕೆ ಸವಾಲೊಡ್ಡುವ ಆಟಗಳಲ್ಲಿ ಸ್ವಲ್ಪ ಸಮಯವನ್ನು ಕಳೆಯಿರಿ. ಮೆದುಳು ಆರೋಗ್ಯಕರವಾಗಿರಬೇಕೆಂದರೆ ಅದನ್ನು ಸಕ್ರಿಯವಾಗಿರಿಸುವುದು ಬಹಳ ಮುಖ್ಯ. ಹಾಗಾಗಿ ಮೆದುಳನ್ನು ಸಕ್ರಿಯವಾಗಿರಿಸಲು ಚೆಸ್, ಸುಡೋಕು ಮುಂತಾದ ಆಟಗಳನ್ನು ಆಡುತ್ತಾ ಮೆದುಳಿಗೆ ವ್ಯಾಯಾಮ ನೀಡಬೇಕು. ಇದರಿಂದಾಗಿ  ಮೆದುಳು ಆರೋಗ್ಯಕರವಾಗಿರುತ್ತದೆ ಮತ್ತು ಇದು ಅನೇಕ ರೋಗಗಳ ಅಪಾಯವನ್ನು ಕಡೆಮೆ ಮಾಡುತ್ತದೆ. ಅಲ್ಲದೆ ಇಂತಹ ಆಟಗಳು ಮಕ್ಕಳ ಕಲಿಕೆಯ ಏಕಾಗ್ರತೆಯನ್ನು ಕೂಡಾ ಹೆಚ್ಚಿಸುತ್ತದೆ.

ನೃತ್ಯ: ನೃತ್ಯವು ಕೇವಲ ದೈಹಿಕ ಚಟುವಟಿಕೆ ಮಾತ್ರವಲ್ಲ, ಇದು ಮಾನಸಿಕವಾಗಿ ಸದೃಢವಾಗಿರಲು ಸಹ ಸಹಾಯ ಮಾಡುತ್ತದೆ.  ನೀವು ದುಃಖಿತರಾದಾಗ,  ಸ್ವಲ್ಪ ಸಮಯದವರೆಗೆ ನಿಮ್ಮ ನೆಚ್ಚಿನ ಹಾಡಿಗೆ ನೃತ್ಯ ಮಾಡಿ. ಇದರಿಂದ ಉದ್ವೇಗ ಮತ್ತು ಖಿನ್ನತೆಯು ಸಂಪೂರ್ಣವಾಗಿ ಮಾಯವಾಗುತ್ತದೆ. ಅಲ್ಲದೆ ನೃತ್ಯ ಹೆಚ್ಚುವರಿ ಕ್ಯಾಲೋರಿಗಳನ್ನು ಸುಡಲು ಕೂಡಾ ಸಹಾಯ ಮಾಡುತ್ತದೆ.

ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸಿ: ಹೊಸ ಹೊಸ ವಿಷಯಗಳನ್ನು ಕಲಿಯುವುದು ಮನಸ್ಸನ್ನು ಆರೋಗ್ಯಕರವಾಗಿಡಲು ಮತ್ತು ಸಂತೋಷವಾಗಿಡಲು ತುಂಬಾ ಪ್ರಯೋಜನಕಾರಿಯಾಗಿದೆ.  ಸಂಗೀತವಾದ್ಯ, ಚಿತ್ರಕಲೆ, ಪುಸ್ತಕ ಓದುವುದು, ತೋಟಗಾರಿಕೆ,  ಅಥವಾ ಹೊಸ ಭಾಷೆಗಳನ್ನು ಕಲಿಯುವುದು ಈ ರೀತಿಯ ಯಾವುದೇ ವಿಷಯಗಳನ್ನು ಕಲಿಯುವುದರಿಂದ ಮಾನಸಿಕ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಅಲ್ಲದೆ  ವಿವಿಧ ಭಾಷೆಗಳನ್ನು ಕಲಿಯುವುದರಿಂದ ಮನಸ್ಸು ಚುರುಕಾಗುತ್ತದೆ ಮತ್ತು ನಿಮಗೆ ಅದು ಆತ್ಮವಿಶ್ವಾಸವನ್ನು ನೀಡುತ್ತದೆ.

Source : https://tv9kannada.com/lifestyle/know-about-some-activities-that-can-help-keep-the-mind-healthy-and-active-lifestyle-news-mda-684789.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *