ಮಹಾಶಿವರಾತ್ರಿ ಉಪವಾಸ-ಜಾಗರಣೆಯಿಂದ ದೇಹ-ಮನ ಶುದ್ಧಿ ಸಾಧ್ಯ: ನಿರ್ಮಲಾನಂದ ಶ್ರೀಗಳ ಸಂದೇಶ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 14

ಶಿವರಾತ್ರಿಯಲ್ಲಿ ಮಾನವ ತನ್ನ ದೇಹವನ್ನು ಉಪವಾಸಕ್ಕೆ ಕೆಡವಿ, ಜಾಗರಣೆಯನ್ನು ಮಾಡುವುದರ ಮೂಲಕ ದೇಹವನ್ನು ಶುದ್ದಿಕರಿಸಿಕೊಳ್ಳಬೇಕಿದೆ ಎಂದು ಶ್ರೀ ಕ್ಷೇತ್ರ ಆದಿ ಚುಂಚನಗಿರಿಯ ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಡಾ,ನಿರ್ಮಲಾನಂದ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿ ಶ್ರೀ ಸದ್ಗರು ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ 96ನೇ ಮಹಾ ಶಿವರಾತ್ರಿ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಸರಳವಾದ ನೀರು ಸಹಾ ಒಮ್ಮೋಮ್ಮೆ ಕಠೀಣವಾಗಿ ತನ್ನ ಶಕ್ತಿಯನ್ನು ಪ್ರದರ್ಶನ ಮಾಡುತ್ತದೆ. ಮನಸ್ಸುನ್ನು ಶುದ್ದಿಕರಿಸಲು ಕಷ್ಟ ಪಡಬೇಕಾಗುತ್ತದೆ. ಭಗವಂತ ಶ್ರೀಮಂತ ಕಡೆಗೆ ಹೋಗದೇ ಸರಖಳತೆಯ ಕಡೆಗೆ ಒಲಿಯುತ್ತಾನೆ, ಇಂದು ಬಿಡುಗಡೆಯಾದ ಮಹಾ ಬೆಳಕು ಶ್ರೀಗಳ ದೂರ ದೃಷ್ಟಿಯಿಂದ ಬಂದಿದ್ದಾಗಿದೆ, ಇಲ್ಲಿ ಕತ್ತಲಿನಿಂದ ಬೆಳಕಿನಡೆಗೆ ಹೋಗುವ ದಾರಿಯೇ ಮಹಾ ಬೆಳಕಾಗಿದೆ. ಇದನ್ನು ಶ್ರೀಗಳು ಸಪ್ತಾಹ ರೂಪದಲ್ಲಿ ಮಾಡುತ್ತಾ ಜನರಿಗೆ ಶಿವನಾಮಮೃತವನ್ನು ಉಣಿಸುತ್ತಿದ್ದಾರೆ ಎಂದರು.

ಕಾಯವನ್ನು ಶುದ್ದಿಕರಿಸದಿದ್ದರೆ ದೇಹ ಮಲೀನವಾಗುತ್ತದೆ, ಮುಂದಿನ ಪಯಾಣ ಸರಿ ಹೋಗುವುದಿಲ್ಲ, ಶಿವರಾತ್ರಿಯಲ್ಲಿ ಉಪವಾಸ, ಜಾಗರಣೆಯನ್ನು ಮಾಡುವುದರ ಮೂಲಕ ಶಿವನನ್ನು ಒಲಿಸಿಕೊಳ್ಳಬಹುದಾಗಿದೆ, ಕರ್ಮ, ಭಕ್ತಿ, ಮನಸ್ಸು, ಬುದ್ದಿ ಶುದ್ದಿಯಾಗಬೇಕಿದೆ, ಆಗ ಮಾತ್ರ ಶಿವ ಪ್ರಜ್ಞೆ ಮೂಡುತ್ತದೆ. ಶ್ರೀಗಳು ಇಂತಹ ಕಾರ್ಯಕ್ರಮವನ್ನು ನಿಮಗಾಗಿ ಮಾಡುತ್ತಾರೆ ಇಲ್ಲಿ ಬರುವುದರ ಮೂಲಕ ಮಹಾತ್ಮರು ಹೇಳುವ ಮಾತನ್ನು ಕೇಳುವುದರ ಮೂಲಕ ನಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕಿದೆ. ತಂದೆ-ತಾಯಿಗಳು ನಮ್ಮ ದೇಹವನ್ನು ಬೆಳೆಸುತ್ತಾರೆ ಆದರೆ ಗುರುಗಳಾದವರು ನಮಗೆ ಜ್ಞಾನವನ್ನು ತುಂಬುತ್ತಾರೆ, ಈ ಹಿನ್ನಲೆಯಲ್ಲಿ ಶಿವಲಿಂಗಾನಂದ ಶ್ರೀಗಳ ಕಾರ್ಯ ಉತ್ತಮವಾಗಿದೆ ಎಂದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಮಾತನಾಡಿ, ಮಾನವ ಹುಟ್ಟುವಾಗ ವಿಶ್ವ ಮಾನವನಾಗುತ್ತಾನೆ ಆದರೆ ಬೆಳೆಯುತ್ತಾ ಸ್ವಾರ್ಥಿಯಾಗುತ್ತಾನೆ, ತಾನು ತನ್ನದು ಎಂದು ಕುಟುಂಬದ ಜಂಜಾಟದಲ್ಲಿ ಇರುತ್ತಾರೆ ಧಾಮೀಕತಡೆಯ ಕಡೆಗೆ ಬರುವುದು ಕಡಿಮೆಯಾಗುತ್ತದೆ ದೇವರ ಧಾನ್ಯ ಇಲ್ಲವಾಗುತ್ತದೆ ಏನಾದರೂ ಕಷ್ಟ ಬಂದಾಗ ಮಾತ್ರ ಭಗವಂತ ನೆನಪಾಗುತ್ತಾನೆ, ಶಿವಲಿಂಗಾನಂದ ಶ್ರೀಗಳು ತಮ್ಮ ಆಶ್ರಮದಲ್ಲಿ ವೃದ್ದಾಶ್ರಮ, ವಿದ್ಯಾರ್ಥಿ ನಿಲಯ, ಮಕ್ಕಳಿಗೆ ಉಚಿತವಾದ ಶಿಕ್ಷಣವನ್ನು ನೀಡುವುದರ ಮೂಲಕ ಬೇರೆಯವರಿಗೆ ಮಾರ್ಗದರ್ಶಕರಾಗಿದ್ದಾರೆ. ಶೋಷಿತರಿಗೆ ಶ್ರೀಗಳು ಆಭಯವನ್ನು ನೀಡುವುದರ ಮೂಲಕ ರಕ್ಷಣೆಯನ್ನು ಮಾಡುತ್ತಿದ್ದಾರೆ ಎಂದರು.

ಸಂಸದರಾದ ಗೋವಿಂದ ಕಾರಜೋಳ ಮಾತನಾಡಿ, ನಮ್ಮ ನಾಡಿನಲ್ಲಿನ ಮಠಗಳು ಮಾನವನ ಕಲ್ಯಾಣಕ್ಕಾಗಿ ಶ್ರಮಿಸುತ್ತಿವೆ, ಹಿಂದಿನ ಕಾಲದ ಆಶ್ರಮ, ಗುರಕುಲ ಪದ್ದತಿಗಳು ಈಗ ಪುನರಾವರ್ತನೆಯಾಗುತ್ತಿವೆ, ಜಾತಿ ಧರ್ಮಗಳನ್ನು ಮೀರಿ ಮಾನವ ಕುಲ ಗಂಡು, ಹೆಣ್ಣು ಎಂಬ ಜಾತಿಗಳ ಮಧ್ಯದಲ್ಲಿ ಬೆಳೆಯಬೇಕಿದೆ, ಮಠಗಳು ಇರುವುದರಿಂದ ನಾಡಿನಲ್ಲಿ ಕೋಟ್ಯಾಂತರ ಮಕ್ಕಳಿಗೆ ಶಿಕ್ಷಣ ದೂರಕುತ್ತಿದೆ, ಶಾಲೆ-ಕಾಲೇಜುಗಳನ್ನು ಸ್ಥಾಪನೆ ಮಾಡುವುದರ ಮೂಲಕ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ, ಸಮ ಸಮಾಜ ನಿರ್ಮಾಣಕ್ಕೆ ಎಲ್ಲರು ಸಹಾ ಕೈ ಜೋಡಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾದರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಯಾದವಾನಂದ ಶ್ರೀಗಳು, ಶಂಭುನಾಥ್ ಶ್ರೀಗಳು, ಶಿವಲಿಂಗಾನಂದ ಶ್ರೀಗಳು ಸಾನಿಧ್ಯವಹಿಸಿದ್ದರು.ಈ ಸಂದರ್ಭದಲ್ಲಿ ಬಿ.ಭೀಮಯ್ಯ, ಕಮ್ಮಲಮ್ಮ, ಅನಿತ್ ಕುಮಾರ್, ಡಾ.ಮುಕುಂದರಾವ್, ಶ್ರೀಮರಿ ರೇಖಾ, ಹನುಮಂತೇಗೌಡ ಭಾಗವಹಿಸಿದ್ದರು. ಸುಬ್ರಾಯ ಭಟ್ಟರು ವೇದ ಘೋಷ ಮಾಡಿದರೆ, ತೋಟಪ್ಪ ಉತ್ತಂಗಿ ತಂಡ ಪ್ರಾರ್ಥಿಸಿತು, ಹುರಲಿ ಬಸವರಾಜು ಸ್ವಾಗತಿಸಿದರು, ಮುರುಗೇಶ್ ಕಾರ್ಯಕ್ರಮ ನಿರೂಪಿಸಿದರು.ಶ್ರೀವಾರು ಭಜನಾ ಮಂಡಳಿಯಿಂದ ಭಜನೆಯನ್ನು ಹಾಡಲಾಯಿತು. ಇದೇ ಸಂದರ್ಭದಲ್ಲಿ ಗೋಶಾಲೆಗೆ ಉಚಿತವಾಗಿ ಮೇವನ್ನು ನೀಡಿದವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *