ಫೇಸ್​ಬುಕ್, ಇನ್​ಸ್ಟಾಗಾಗಿ 2 ಹೊಸ AI ವಿಡಿಯೋ ಎಡಿಟಿಂಗ್ ಸಾಧನ ಪರಿಚಯಿಸಿದ ಮೆಟಾ.

ಫೇಸ್ ಬುಕ್ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುವ ವಿಡಿಯೋಗಳ ಎಡಿಟಿಂಗ್​ಗಾಗಿ ಮೆಟಾ 2 ಹೊಸ ಸಾಧನಗಳನ್ನು ಜಾರಿಗೊಳಿಸಿದೆ.

ಸ್ಯಾನ್ ಫ್ರಾನ್ಸಿಸ್ಕೊ: ಮೆಟಾ ಪ್ಲಾಟ್​ಫಾರ್ಮ್ಸ್​ (META.O) ಗುರುವಾರ ವಿಡಿಯೋ ಎಡಿಟಿಂಗ್​ಗಾಗಿ ಬಳಸುವ ಎರಡು ಹೊಸ ಎಐ ಆಧಾರಿತ ವೈಶಿಷ್ಟ್ಯಗಳನ್ನು ಪ್ರಾರಂಭಿಸಿದೆ.

ಇನ್​ಸ್ಟಾಗ್ರಾಮ್ ಅಥವಾ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಬಯಸುವ ವಿಡಿಯೋಗಳನ್ನು ಎಡಿಟ್​ ಮಾಡಲು ಬಳಸಬಹುದು. ಎರಡು ವಿಡಿಯೋ ಎಡಿಟರ್​ಗಳ ಪೈಕಿ ಒಂದಕ್ಕೆ ಎಮು ವಿಡಿಯೋ ಎಂದು ಹೆಸರಿಡಲಾಗಿದ್ದು ಇದು ಶೀರ್ಷಿಕೆ, ಫೋಟೋ ಅಥವಾ ಚಿತ್ರದ ಪ್ರಾಂಪ್ಟ್​​ನೊಂದಿಗೆ ನಾಲ್ಕು ಸೆಕೆಂಡುಗಳ ಉದ್ದದ ವಿಡಿಯೋಗಳನ್ನು ರಚಿಸುತ್ತದೆ. ಇನ್ನೊಂದನ್ನು ಎಮು ಎಡಿಟ್ ಎಂದು ಕರೆಯಲಾಗುತ್ತದೆ. ಇದರ ಮೂಲಕ ಟೆಕ್ಸ್ಟ್​ ಟು ವಿಡಿಯೋ ಮಾದರಿಯಲ್ಲಿ ಪಠ್ಯ ಇನ್​ಪುಟ್ ನೀಡಿ ಅದರಂತೆ ವಿಡಿಯೋಗಳನ್ನು ರಚಿಸಬಹುದು.ಹೊಸ ಸಾಧನಗಳು ಮೂಲ ಎಮು ಮಾದರಿಯ ಮುಂದಿನ ಆವೃತ್ತಿಗಳಾಗಿದ್ದು, ಪಠ್ಯ ಇನ್​ಪುಟ್​ಗೆ ಪ್ರತಿಕ್ರಿಯೆಯಾಗಿ ಚಿತ್ರಗಳನ್ನು ರಚಿಸುತ್ತವೆ. ಎಮು ಇನ್​ಸ್ಟಾಗ್ರಾಮ್​ನಲ್ಲಿ ಜನರೇಟಿವ್ ಎಐ ತಂತ್ರಜ್ಞಾನ ಮತ್ತು ಕೆಲವು ಎಐ ಇಮೇಜ್ ಎಡಿಟಿಂಗ್ ಸಾಧನಗಳನ್ನು ಬೆಂಬಲಿಸುತ್ತದೆ. ಇದರ ಮೂಲಕ ಫೋಟೋ ಸೆರೆ ಹಿಡಿಯಬಹುದು ಮತ್ತು ಅದರ ದೃಶ್ಯ ಶೈಲಿ ಅಥವಾ ಹಿನ್ನೆಲೆಯನ್ನು ಬದಲಾಯಿಸಬಹುದು.ಕಳೆದ ವರ್ಷದ ಕೊನೆಯಲ್ಲಿ ಓಪನ್‌ಎಐನ ಚಾಟ್​ ಜಿಪಿಟಿ ಪ್ರಾರಂಭವಾದಾಗಿನಿಂದ ವ್ಯವಹಾರಗಳು ಮತ್ತು ಉದ್ಯಮಗಳು ಹೊಸ ಉತ್ಪಾದನಾ ಎಐ ಮಾರುಕಟ್ಟೆಯತ್ತ ಧಾವಿಸಿವೆ. ಸಾಮಾಜಿಕ ಮಾಧ್ಯಮ ದೈತ್ಯ ಎಐ ವಿಶ್ವದಲ್ಲಿ ವೇಗವಾಗಿ ದಾಪುಗಾಲು ಹಾಕುತ್ತಿದೆ.ಕೃತಕ ಬುದ್ಧಿಮತ್ತೆ (ಎಐ) ಎಂಬುದು ಕಂಪ್ಯೂಟರ್ ವಿಜ್ಞಾನದ ವ್ಯಾಪಕ ಶ್ರೇಣಿಯ ಶಾಖೆಯಾಗಿದ್ದು, ಸಾಮಾನ್ಯವಾಗಿ ಮಾನವ ಬುದ್ಧಿಮತ್ತೆಯ ಅಗತ್ಯವಿರುವ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಸ್ಮಾರ್ಟ್ ಯಂತ್ರಗಳನ್ನು ನಿರ್ಮಿಸುವ ಬಗ್ಗೆ ಇದು ಕೇಂದ್ರೀಕೃತವಾಗಿದೆ. ಎಐ ಬಹು ವಿಧಾನಗಳನ್ನು ಹೊಂದಿರುವ ಅಂತರಶಿಸ್ತೀಯ ವಿಜ್ಞಾನವಾಗಿದ್ದರೂ, ಯಂತ್ರ ಕಲಿಕೆ ಮತ್ತು ಆಳವಾದ ಕಲಿಕೆ (ಡೀಪ್ ಲರ್ನಿಂಗ್) ಯಲ್ಲಿನ ಪ್ರಗತಿಗಳು, ನಿರ್ದಿಷ್ಟವಾಗಿ, ಟೆಕ್ ಉದ್ಯಮದ ಪ್ರತಿಯೊಂದು ಕ್ಷೇತ್ರದಲ್ಲೂ ಬದಲಾವಣೆಯನ್ನು ಸೃಷ್ಟಿಸುತ್ತಿವೆ. ವಿಶಾಲವಾಗಿ ಹೇಳುವುದಾದರೆ, ಕೃತಕ ಬುದ್ಧಿವಂತ ವ್ಯವಸ್ಥೆಗಳು ಸಾಮಾನ್ಯವಾಗಿ ಮಾನವ ಅರಿವಿನ ಕಾರ್ಯಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುತ್ತವೆ.ಕೃತಕ ಬುದ್ಧಿಮತ್ತೆಯು ಯಂತ್ರಗಳಿಗೆ ಮಾನವ ಮನಸ್ಸಿನ ಸಾಮರ್ಥ್ಯಗಳನ್ನು ನಕಲು ಮಾಡಲು ಅಥವಾ ಸುಧಾರಿಸಲು ಅನುವು ಮಾಡಿಕೊಡುತ್ತದೆ. ಸ್ವಯಂ ಚಾಲಿತ ಕಾರುಗಳ ಅಭಿವೃದ್ಧಿಯಿಂದ ಹಿಡಿದು ಚಾಟ್​ಜಿಪಿಟಿ ಮತ್ತು ಗೂಗಲ್​ನ ಬಾರ್ಡ್​ನಂಥ ಜನರೇಟಿವ್ ಎಐ ಸಾಧನಗಳ ಪ್ರಸರಣದವರೆಗೆ, ಎಐ ದೈನಂದಿನ ಜೀವನದ ಭಾಗವಾಗುತ್ತಿದೆ.

Source : https://m.dailyhunt.in/news/india/kannada/etvbhar9348944527258-epaper-etvbhkn/fes+buk+in+staagaagi+2+hosa+ai+vidiyo+editing+saadhana+parichayisidha+meta-newsid-n557258498?listname=newspaperLanding&topic=homenews&index=7&topicIndex=0&mode=pwa

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *