ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 23 ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ನೇಮಕಾತಿಯಲ್ಲಿ ಮಾನದಂಡಗಳನ್ನು ಗಾಳಿಗೆ ತೂರಿ ಲಕ್ಷಾಂತರ ರೂ.ಗಳ
ಅವ್ಯವಹಾರವಾಗಿರುವುದು ತನಿಖೆಯಾಗಬೇಕು. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಚಿತ್ರದುರ್ಗಕ್ಕೆ ಆಗಮಿಸಿ
ನೇಮಕಾತಿಯಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಗಮನ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್
ಆಗ್ರಹಿಸಿದ್ದಾರೆ.

ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲಾ
ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕರ ಆಸ್ಪತ್ರೆ ನಿರ್ದೇಶಕರಾದ ಯುವರಾಜ್ ಡಾಕ್ಟರ್‍ಗಳ ನೇಮಕಾತಿಯಲ್ಲಿ ಲಕ್ಷಾಂತರ
ಅವ್ಯವಹಾರ ಮಾಡಿದ್ದಾರೆ ಮತ್ತು ನೇಮಕಾತಿಯನ್ನು ಸರಿಯಾಗಿ ಮಾಡಿರುವುದಿಲ್ಲ ಹಾಗೂ ಅಭ್ಯರ್ಥಿಗಳಿಂದ ಲಂಚವನ್ನು ಪಡೆದು
ಅವ್ಯವಹಾರವಾಗಿರುವ ಶಂಕೆಯಿದೆ ಇವರು ಭ್ರಷ್ಟನಾಗಿದ್ದು, ಇವರನ್ನು ಕೂಡಲೇ ಅಮಾನತು ಮಾಡಿ ಲೋಕಾಯುಕ್ತರಿಂದಾಗಲೀ
ಅಥವಾ ಸಿಐಡಿಯಿಂದ ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿದರು.
ಈ ವಿಷಯದ ಬಗ್ಗೆ ನಾವುಗಳು ಕೆ.ಡಿ.ಪಿ.ಸಭೆಯಲ್ಲಿ ಇಂತಹ ವಿಷಯಗಳು ಚರ್ಚೆಗೆ ಬರುವುದಿಲ್ಲ. ಇದರ ಬಗ್ಗೆ ನಾವು ಪ್ರಶ್ನೆ ಮಾಡಲು
ಸಿದ್ದರಿದ್ದರೂ ಸಹಾ ವಿಷಯವನ್ನು ಚರ್ಚೆಗೆ ತರುತ್ತಿಲ್ಲ ನೇಮಕಾತಿ ಸಂದರ್ಭದಲ್ಲಿ ಯಾರು ನೇಮಕಾತಿ ಮಾಡಿಕೊಳ್ಳಬೇಕು ಯಾರು
ನೇಮಕಾತಿ ಮಾಡಿಕೊಳ್ಳಬಾರದು ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಬರೀ
ಅವ್ಯವಹಾರ ಮಾಡಿರುತ್ತಾರೆ. ಆದ್ದರಿಂದ ಇವರನ್ನು ಮಾಡಿರುವ ನೇಮಕಾತಿಯನ್ನು ರದ್ದುಪಡಿಸಿ ಹೊಸ ನೇಮಕಾತಿಯನ್ನು ಮಾಡಿ
ಡಾಕ್ಟರ್‍ಗಳಿಗೆ ನ್ಯಾಯ ದೊರಕಿಸಿಕೊಡಬೇಕು ತನಿಖೆ ಮುಗಿಯುವ ಇವನನ್ನು ಆಮಾನತಿನಲ್ಲಿ ಇರಿಸಬೇಕು ಎಂದು ಆಗ್ರಹಿಸಿದರು.
2013 ರಲ್ಲಿ ಮೆಡಿಕಲ್ ಕಾಲೇಜು ಮಂಜೂರಾಗಿದ್ದು, 2025 ರಲ್ಲಿ ಆರಂಭಗೊಂಡಿದೆ. ನೇಮಕಾತಿ ಅವ್ಯವಹಾರದಲ್ಲಿ
ಭಾಗಿಯಾಗಿರುವವರನ್ನು ಕೂಡಲೆ ಸೇವೆಯಿಂದ ವಜಾಗೊಳಿಸಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶರಣ ಪ್ರಕಾಶ್
ಪಾಟೀಲ್‍ರವರಿಗೆ ಪತ್ರ ಬರೆಯಲಾಗುತ್ತದೆ. ಇದ್ದಲ್ಲದೆ ಮೆಡಿಕಲ್ ಕಾಲೇಜು ಚಿತ್ರದುರ್ಗದಲ್ಲಿ ಇದ್ದು ಇದರ ಕಚೇರಿಯೂ ಸಹಾ
ಚಿತ್ರದುರ್ಗದಲ್ಲಿ ಇದೆ ಆದರೆ ಸಂದರ್ಶನ ಮಾತ್ರ ಬೆಂಗಳೂರಿನಲ್ಲಿ ನಡೆಸಲಾಗುತ್ತದೆ ಇದರ ಬಗ್ಗೆ ಸಚಿವ ಶರಣ ಪ್ರಕಾಶ್ ಪಾಟೀಲ್
ಗಮನಹರಿಸಬೇಕಿದೆ, ಅವರು ಚಿತ್ರದುರ್ಗಕ್ಕೆ ಬಂದು ಇಲ್ಲಿ ನಡೆಯುವ ಅವ್ಯವಹಾರವನ್ನು ಪರಿಹಾರ ಮಾಡಬೇಕೆಂದು ನವೀನ್
ಆಗ್ರಹಿಸಿದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1