Milk Price Hike: ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್ ತಿಂಡಿ ಜೊತೆಗೆ ಕಾಫಿ-ಟೀ ದರವನ್ನೂ ಪರಿಷ್ಕರಿಸಲು ಹೋಟೆಲ್ ಅಸೋಸಿಯೇಷನ್ ನ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾಫಿ-ಟೀ ದರವನ್ನು ಕನಿಷ್ಠ 10% ಹೆಚ್ಚಿಸಲು ನಿರ್ಧರಿಸಿರುವ ಹೊಟೇಲ್ ಅಸೋಸಿಯೇಷನ್ ಆಗಸ್ಟ್ 1, 2023ರಿಂದ ಪರಿಷ್ಕೃತ ದರವನ್ನು ಹೆಚ್ಚಿಸಲು ನಿರ್ಧರಿಸಿದೆ.
![](https://samagrasuddi.co.in/wp-content/uploads/2023/07/image-3.png)
Milk Price Hike: ಮೊದಲೇ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನತೆಗೆ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಇದೆ. ನಿಗದಿಯಂತೆ ನಾಳೆಯಿಂದ ಎಂದರೆ ಆಗಸ್ಟ್ 1, 2023ರಿಂದ ಹಾಲಿನ ದರ ಹೆಚ್ಚಳವಾಗಲಿದೆ. ಹಾಲು ಉತ್ಪಾದಕರ ಅಗತ್ಯತೆಗಳನ್ನು ಉಲ್ಲೇಖಿಸಿ ಆಗಸ್ಟ್ 1 ರಿಂದ ನಂದಿನಿ ಹಾಲಿನ ಬೆಲೆಯಲ್ಲಿ ಲೀಟರ್‌ಗೆ 3 ರೂಪಾಯಿ ಹೆಚ್ಚಳವನ್ನು ಸರ್ಕಾರ ಘೋಷಿಸಿದೆ. ಇದರನ್ವಯ ನಾಳೆಯಿಂದ ಕರ್ನಾಟಕ ಹಾಲು ಒಕ್ಕೂಟದ ( ಕೆಎಂಎಫ್ ) ನಂದಿನಿ ಹಾಲಿನ ಬೆಲೆಯನ್ನು ಲೀಟರ್‌ಗೆ ಮೂರು ರೂಪಾಯಿಗಳಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ.
ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಕಡಿಮೆ ದರದಲ್ಲಿ ಹಾಲು ಮಾರಾಟವಾಗುತ್ತಿದ್ದು, ಇತರ ರಾಜ್ಯಗಳಲ್ಲಿ ಹಾಲು ಇನ್ನೂ ಅಧಿಕ ದರದಲ್ಲಿ ಮಾರಾಟವಾಗುತ್ತಿದೆ ಎಂದು ತಿಳಿಸಿದ್ದಾರೆ. ಆಗಸ್ಟ್ 1ರಿಂದ ನಂದಿನಿ ಹಾಲು 39 ರೂ.ಗಳ ಬೆಲೆಯ ಹಾಲು (ಟೋನ್ಡ್) ಲೀಟರ್‌ಗೆ 42 ರೂ.ಗೆ ಮಾರಾಟವಾಗಲಿದೆ. ಇನ್ನುಳಿದಂತೆ ಹಾಲಿನ ಮಾದರಿಗೆ ಅನುಗುಣವಾಗಿ ಎಲ್ಲಾ ರೀತಿಯ ಹಾಲಿನ ದರದಲ್ಲಿ ಲೀಟರ್‌ಗೆ 3 ರೂ. ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತದೆ. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಇನ್ನೂ ಹಾಲಿನ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರಸ್ತುತ, ಕರ್ನಾಟಕದಲ್ಲಿ ಅತ್ಯಂತ ಕಡಿಮೆ ದರದ ಹಾಲು ಮಾರಾಟವಾಗುತ್ತಿದೆ. ಆಗಸ್ಟ್ 1, 2023ರಿಂದ ಹಾಲಿನ ದರ ಲೀಟರ್‌ಗೆ 3 ರೂ. ಹೆಚ್ಚಲಾಗಲಿದ್ದು, ಈ ಹೆಚ್ಚಳವು ಸರ್ಕಾರಕ್ಕೆ “ರೈತರಿಗೆ ಹಣವನ್ನು ನೀಡಲು” ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.
ನಾಳೆಯಿಂದ ಯಾವ ಯಾವ ಹಾಲಿನ ಪ್ರಸ್ತುತ ದರ ಎಷ್ಟಿದೆ ಈಗ ಎಷ್ಟಾಗಲಿದೆ?
ಹಾಲು | ಪ್ರಸ್ತುತ ದರ | ಪರಿಷ್ಕೃತ ದರ |
ಸಮೃದ್ದಿ ಹಾಲು | 48 | 51 |
ಸ್ಪೆಷಲ್ ಹಾಲು | 43 | 46 |
ಸಂತೃಪ್ತಿ ಹಾಲು | 50 | 53 |
ಶುಭಂ ಹಾಲು | 43 | 46 |
ಟೋನ್ಡ್ ಹಾಲು | 37 | 40 |
ಡಬಲ್ಟೋನ್ಡ್ ಹಾಲು | 36 | 39 |
ಹೊಮೋಜಿನೈಸ್ಡ್ | 38 | 41 |
ಹೋಟೆಲ್ ತಿಂಡಿ ಜೊತೆಗೆ ಕಾಫಿ-ಟೀ ದರವೂ ಹೆಚ್ಚಳ!
ಇನ್ನೂ ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್ ತಿಂಡಿ ಜೊತೆಗೆ ಕಾಫಿ-ಟೀ ದರವನ್ನೂ ಪರಿಷ್ಕರಿಸಲು ಹೋಟೆಲ್ ಅಸೋಸಿಯೇಷನ್ ನ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾಫಿ-ಟೀ ದರವನ್ನು ಕನಿಷ್ಠ 10% ಹೆಚ್ಚಿಸಲು ನಿರ್ಧರಿಸಿರುವ ಹೊಟೇಲ್ ಅಸೋಸಿಯೇಷನ್ ಆಗಸ್ಟ್ 1, 2023ರಿಂದ ಪರಿಷ್ಕೃತ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಇನ್ನೂ ಇದೇ ವೇಳೆ ಈಗಾಗಲೇ ದರ ಹೆಚ್ಚಳ ಮಾದಿರ ಹೊಟೇಲ್ ಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ಮಾಹಿತಿ ನೀಡಿದ್ದಾರೆ.