Minimum Pension: ಸರ್ಕಾರಿ ನೌಕರರ ಪೆನ್ಷನ್ ಕುರಿತು ಮಹತ್ವದ ಅಪ್ಡೇಟ್ ಪ್ರಕಟ, ನಿವೃತ್ತಿ ಬಳಿಕ ಎಷ್ಟು ಹಣ ಸಿಗಲಿದೆ ಗೊತ್ತಾ?

Old Pension Scheme: ಮುಂದಿನ ಒಂದು ವರ್ಷದಲ್ಲಿ ನಡೆಯಬೇಕಿರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.   

Old Pension Scheme Update: ಒಂದು ವೇಳೆ ನೀವೂ ಕೂಡ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಕೇಂದ್ರ ಸರ್ಕಾರಿ ನೌಕರರಿದ್ದರೆ, ಈ ಸಂತಸದ ಸುದ್ದಿ ನಿಮಗಾಗಿ. ಹೌದು, ಎನ್‌ಪಿಎಸ್ ವಿರುದ್ಧ ಪ್ರತಿಭಟನೆಗಳು ನಡೆದ ಕಾರಣ ಸರ್ಕಾರ ಇದೀಗ ನೌಕರರ ಪಿಂಚಣಿಗೆ ಹೊಸ ಸೂತ್ರವನ್ನು ಸಿದ್ಧಪಡಿಸಿದೆ. ಅಸ್ತಿತ್ವದಲ್ಲಿರುವ ಮಾರುಕಟ್ಟೆ-ಸಂಯೋಜಿತ ಪಿಂಚಣಿ ಯೋಜನೆಯನ್ನು ಬದಲಾಯಿಸುವ ಮೂಲಕ ಕೇಂದ್ರ ಸರ್ಕಾರವು ನೌಕರರಿಗೆ ಕನಿಷ್ಠ ಪಿಂಚಣಿಯನ್ನು ಕೊನೆಯದಾಗಿ ಪಡೆದ ಸಂಬಳದ 40%-45% ರಷ್ಟು ಶೀಘ್ರದಲ್ಲೇ ಪರಿಗಣಿಸುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಸಮಿತಿಯ ರಚನೆಯ ನಂತರ ಅಪ್ಡೇಟ್ ಪ್ರಕಟಗೊಂಡಿದೆ
ಸರ್ಕಾರವು ಪಿಂಚಣಿ ಸಮಿತಿಯನ್ನು ರಚಿಸಿದ ನಂತರ ಈ ಹೊಸ ಅಪ್ಡೇಟ್ ಪ್ರಕಟಗೊಂಡಿದೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಮುಂದಿನ ಒಂದು ವರ್ಷದಲ್ಲಿ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಿಯಲಾಗುತ್ತಿದೆ.

ಪ್ರಸ್ತುತ ನೌಕರರು 10% ಕೊಡುಗೆ ನೀಡುತ್ತಿದ್ದಾರೆ
ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ನೌಕರರ ಪ್ರತಿಭಟನೆ ಹಾಗೂ ಹಳೆ ಪಿಂಚಣಿ ಯೋಜನೆಗೆ ಹೆಚ್ಚಾಗುತ್ತಿರುವ ಆಗ್ರಹವನ್ನು ಗಮನದಲ್ಲಿಟ್ಟುಕೊಂಡು 2004ರಲ್ಲಿ ಜಾರಿಗೆ ತಂದಿರುವ ಪಿಂಚಣಿ ವ್ಯವಸ್ಥೆಯನ್ನು ಪರೆಗಣನೆಗೆ ತೆಗೆದುಕೊಳ್ಳುವುದಾಗಿ ಸರಕಾರ ಹೇಳಿತ್ತು. ಇದರೊಂದಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಕುರಿತು ವರದಿ ನೀಡಲು ಸಮಿತಿಯನ್ನು ಸಹ ರಚಿಸಿತ್ತು. ಪ್ರಸ್ತುತ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS), ನೌಕರರು ಮೂಲ ವೇತನದ ಶೇ.10 ರಷ್ಟು ಮತ್ತು ಸರ್ಕಾರ ಶೇ. 14% ರಷ್ಟು ಕೊಡುಗೆಯನ್ನು ನೀಡುತ್ತಾರೆ. 

OPS ಅಡಿಯಲ್ಲಿ 50% ಖಾತರಿ ಪಿಂಚಣಿ
ಎನ್‌ಪಿಎಸ್ ಅಡಿಯಲ್ಲಿ ಬರುವ ಉದ್ಯೋಗಿಗಳ ಪಿಂಚಣಿ ಮಾರುಕಟ್ಟೆಯಿಂದ ಬರುವ ಆದಾಯವನ್ನು ಅವಲಂಬಿಸಿರುತ್ತದೆ. ಆದರೆ, ಹಳೆಯ ಪಿಂಚಣಿ ಯೋಜನೆ (OPS) ಅಡಿಯಲ್ಲಿ, ಕೊನೆಯ ವೇತನದ ಶೇ. 50 ರಷ್ಟನ್ನು ಅನ್ನು ಖಾತರಿ ಪಿಂಚಣಿಯಾಗಿ ನೀಡಲಾಗುತ್ತದೆ. ರಾಯಿಟರ್ಸ್ ವರದಿಯ ಪ್ರಕಾರ ಸರ್ಕಾರವು ಪ್ರಸ್ತುತ ಪಿಂಚಣಿ ಯೋಜನೆಯನ್ನು ಬದಲಾಯಿಸಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಶೇ. 40 ರಿಂದ ಶೇ.45 ರಷ್ಟು ಮೊತ್ತವನ್ನು ಪಡೆಯುವ ನಿರೀಕ್ಷೆಯಿದೆ
ಹೊಸ ನಿಯಮ ಒಂದೊಮ್ಮೆ ಜಾರಿಗೆ ಬಂದ ಬಳಿಕ ನೌಕರರು ತಮ್ಮ ಕೊನೆಯ ವೇತನದ ಶೇ.40ರಿಂದ ಶೇ.45ರಷ್ಟು ಪಿಂಚಣಿಯಾಗಿ ಪಡೆಯಲು ಸಾಧ್ಯವಾಗಲಿದೆ ಎಂದು ವರದಿ ಹೇಳಿದೆ. ರಾಯಿಟರ್ಸ್ ಜೊತೆ ಮಾತನಾಡಿದ ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು, ಯಾವುದೇ ರೀತಿಯಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಸ್ಥಾಪಿಸುವುದು ಸರ್ಕಾರದ ಯೋಜನೆ ಇಲ್ಲ ಎಂದಿದ್ದಾರೆ. 

ಪಿಂಚಣಿ ಕುರಿತು ಸಿದ್ಧಗೊಳ್ಳಲಿರುವ ಹೊಸ ವ್ಯವಸ್ಥೆಯು ಹಳೆಯ ಪಿಂಚಣಿ ವ್ಯವಸ್ಥೆಗೆ ಮರಳಿದ ರಾಜ್ಯಗಳ ಕಳವಳವನ್ನು ನಿವಾರಿಸಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ, ರಾಜಸ್ಥಾನ, ಜಾರ್ಖಂಡ್, ಛತ್ತೀಸ್‌ಗಢ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಸರ್ಕಾರಗಳು ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರುಸ್ಥಾಪಿಸಲು ಘೋಷಿಸಿದ್ದು ಇಲ್ಲಿ ಗಮನಾರ್ಹ.

ನೌಕರರು ಪ್ರಸ್ತುತ ತಮ್ಮ ಕೊನೆಯ ಸಂಬಳದ ಸುಮಾರು 38% ಅನ್ನು ಪಿಂಚಣಿಯಾಗಿ ಪಡೆಯುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರವು 40% ಆದಾಯವನ್ನು ಖಾತರಿಪಡಿಸಿದರೆ, ಅದು ಕೇವಲ 2% ನಷ್ಟು ಕೊರತೆಯನ್ನು ಮಾತ್ರ ನೀಗಿಸುತ್ತದೆ ಎಂದು ಮತ್ತೊರ್ವ ಅಧಿಕಾರಿ ಹೇಳಿದ್ದಾರೆ.  ಆದಾಗ್ಯೂ, ಪಿಂಚಣಿಯ ಕಾರ್ಪಸ್ನಲ್ಲಿ ಒಂದು ವೇಳೆ ಕುಸಿತ ಕಂಡುಬಂದರೆ, ಖರ್ಚು ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

Source : https://zeenews.india.com/kannada/business/minimum-pension-new-update-on-government-employees-pension-now-government-employees-will-get-this-much-minimum-pension-141623

Leave a Reply

Your email address will not be published. Required fields are marked *