ಆರ್‌ಎಸ್‌ಎಸ್ ಬ್ಯಾನ್ ಮಾತೇ ಇಲ್ಲ, ಸರ್ಕಾರಿ ಜಾಗದಲ್ಲಿ ರಾಜಕೀಯ ಚಟುವಟಿಕೆ ಬೇಡ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ.

ಚಿತ್ರದುರ್ಗ ಅ, 17

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಆರ್‍ಎಸ್‍ಎಸ್ ಬ್ಯಾನ್ ಮಾಡಿ ಅಂತ ಯಾರಾದ್ರೂ ಹೇಳಿದ್ರಾ? ಸರ್ಕಾರಿ ಜಾಗ ಆರ್‍ಎಸ್‍ಎಸ್ ಉಪಯೋಗಿಸ ಬಾರದು ಬಿಜೆಪಿ ಸರ್ಕಾರದಲ್ಲೇ ಸರ್ಕಾರಿ ಜಾಗ ಯಾರೂ ಬಳಸಬಾರದೆಂದು ಆದೇಶವಾಗಿದೆ. ಸಂವಿಧಾನ ದನ್ವಯ ಎಲ್ಲರಿಗೂ ಮುಕ್ತವಾದ ಅವಕಾಶ ಇದೆ ಆರ್‍ಎಸ್‍ಎಸ್ ಬ್ಯಾನ್ ಬಗ್ಗೆ ಯಾರೂ ಹೇಳಿಲ್ಲ, ಚರ್ಚೆಯೇ ಇಲ್ಲ ಆರ್‍ಎಸ್‍ಎಸ್ ಪಾಲಿಟಿಕಲ್ ಆರ್ಗನೈಸೇಶನ್, ಸಂದೇಹವಿಲ್ಲ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿಗೆ ಭೇಟಿ ನೀಡಿದ್ದ ಸಚಿವರು ಹಾನಗಲ್ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರಿ ಜಾಗ, ಶಾಲೆಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆ ಮಾಡಬಾರದು ರಾಜಕೀಯವನ್ನು ಶಾಲೆ, ಕಾಲೇಜುಗಳಲ್ಲಿ ತರಬಾರದು ಯಾವುದೇ ಸಂಸ್ಥೆ ಆಗಲಿ ಅನುಮತಿ ಪಡೆದು ಕಾರ್ಯಕ್ರಮ ಮಾಡಬೇಕು ಆರ್ ಎಸ್ ಎಸ್ ಶಾಖೆಗಳಿಗಾಗಿ ಉಪಯೋಗಿಸುವಂಥದ್ದು ಆಗಬಾರದು ಎಂದರು.

ಕೇಂದ್ರ ಸರ್ಕಾರದ ಸಚಿವರಾದ ಪ್ರಹ್ಲಾದ್ ಜೋಶಿ, ರಾಜ್ಯಕ್ಕೆ ಏನು ಮಾಡಿದ್ದಾರೆ ರಾಜ್ಯಕ್ಕೆ ಅನ್ಯಾಯ ಆದಾಗ ಬಾಯಿ ಇರಲಿಲ್ಲವಾ ಕೋರ್ಟ್‍ಗೆ ಹೋಗಿ ಕೇಂದ್ರದಿಂದ ಕಿತ್ತುಕೊಂಡು ಬರಬೇಕಾಯಿತು ಎಂದ ಸಚಿವರು ಕೇಂದ್ರದಿಂದ ರಾಜ್ಯಕ್ಕೆ ಅನುಕೂಲ ಮಾಡುವ ನಯಾಪೈಸೆ ಕೆಲಸ ಮಾಡಿಸ್ತಿಲ್ಲ ಜೋಶಿಗೆ ಪ್ರೆಸ್ ಮೀಟ್ ಮಾಡಿ ಟೀಕೆ ಮಾಡುವ ಚಪಲವಿದೆ ದೇಶದಲ್ಲೇ ರಾಜ್ಯ ಜಿಡಿಪಿ, ಇನ್‍ವೆಸ್ಟ್‍ಮೆಂಟ್‍ನಲ್ಲಿ ನಂ1 ಸ್ಥಾನದಲ್ಲಿದೆ ಎಂದರು.

ಜೆಡಿಎಸ್ ಶಾಸಕ ಶ್ರೀನಿವಾಸ್ ಹೈಕೋರ್ಟ್‍ಗೆ ರಿಟ್ ವಿಚಾರ ಅಭಿವೃದ್ಧಿ ಕಾಮಗಾರಿ ಹೈಕೋರ್ಟ್ ವ್ಯಾಪ್ತಿಗೆ ಬರುತ್ತದೆಯೇ ನ್ಯಾಯಾಲಯದಲ್ಲಿ ಯಾವುದೇ ಮಾನ್ಯತೆ ಸಿಗುವುದಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Views: 15

Leave a Reply

Your email address will not be published. Required fields are marked *