ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 02: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ವಿಚಾರಕ್ಕೆ ಪ್ರತಿಕ್ರಿಯಿಸಿ ರಾಜ್ಯಪಾಲರು ರಾಜಭವನದಲ್ಲಿ ಒತ್ತಡದಲ್ಲಿ ಕೆಲಸ ಮಾಡ್ತಿದಾರೆ ಕೂಲಂಕುಶ ವಿಚಾರಣೆ ಮಾಡದೇ ಪ್ರಾಸಿಕ್ಯೂಶನ್‌ಗೆ ಅವಕಾಶ ನೀಡಿದ್ದಾರೆ ನಮಗೆ ಕಾನೂನು, ನ್ಯಾಯ ದೇವತೆ ಮೇಲೆ ವಿಶ್ವಾಸವಿದೆ ಖಂಡಿತ ತೀರ್ಪು ನಮ್ಮ ಪರವಾಗಿಯೇ ಬರುತ್ತೆ ಇಲ್ಲವಾದ್ರೆ ಸುಪ್ರೀಂ ಕೋರ್ಟ ಇದೆ, ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಚಿತ್ರದುರ್ಗದ ಡಿಸಿ ಕಚೇರಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ವರದಿ ಸರಕಾರ ಒತ್ತಡ ಹಾಕಿ ತರಿಸಿದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಡಾ. ಸುಧಾಕರ್ ಕೋವಿಡ್ ನಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ತಣ್ಣಗೆ ಇದ್ರು ಯಾರ ಮೇಲೆ ಯಾರೂ ಒತ್ತಡ ಹಾಕಲ್ಲ ಅದರಲ್ಲೂ ಕಾಂಗ್ರೆಸ ಜನಪರ ಕೆಲಸ ಮಾಡುವ ಪಕ್ಷ ಕೋವಿಡ್ ನಲ್ಲಿ ನಮಗೂ, ಜನರಿಗೂ ಅನ್ಯಾಯವಾಗಿದೆ ಆದ್ರೆ ಅವರ ಪಕ್ಷದ ಯತ್ನಾಳ್ ರವರೇ 8 ಸಾವಿರ ಕೋಟಿ ಹಗರಣ ಆಗಿದೆ ಅಂತಾ ಸದನದಲ್ಲೇ ಹೇಳಿದ್ದಾರೆ.ಅಪರೇಶನ್ ಕಮಲ ವಿಚಾರವಾಗಿ ಪ್ರತಿಕ್ರಿಯೆ ಬಿಜೆಪಿಯೇತರ ಸರಕಾರ ಇರುವಲ್ಲಿ ಸರಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡ್ತಿದಾರೆ.

ಆದ್ರೆ ಕರ್ನಾಟಕದಲ್ಲಿ ಬಿಜೆಪಿ ಪ್ಲ್ಯಾನ್ ಸಕ್ಸಸ್ ಆಗಲ್ಲ ನಾವು 135 ಜನ ಶಾಸಕರು ಒಗ್ಗಟ್ಟಾಗಿದ್ದೀವಿ ಯಾರಿಗೆ ಬಿಜೆಪಿಯವರು ಸಂಪರ್ಕ ಮಾಡಿದ್ದಾರೋ ಅವರೇ ನಿಮ್ಮ ಮುಂದೆ ಹೇಳಲಿ ಎಂದ ಸಚಿವರು, ನಾನೇ ಸಿಎಂ ಆಗ್ತೀನಿ, ಮಾಜಿ ಸಚಿವ ಆರ್. ವಿ ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿ ನಾನೂ ಇಲ್ಲಿಗೆ ಬರಬೇಕಾದ್ರೆ ಅವರ ಹೇಳಿಕೆ ನೋಡಿದೆ ಅವ್ರು ಹಿರಿಯರು, ಸಾಕಷ್ಟು ಬಾರಿ ಸಚಿವರಾಗಿ ಕೆಲ್ಸ ಮಾಡಿದಾರೆ ಇನ್ನುಳಿದದ್ದು ಸಿಎಂ ಸ್ಥಾನ ಒಂದೇ ಎಂಬ ಅರ್ಥದಲ್ಲಿ ಹೇಳಿದ್ದಾರೆ ಎಂದರು.
ಬಿಜೆಪಿ ನಾಯಕರ ಮೇಲೆ ಪ್ರಾಸಿಕ್ಯೂಶನ್‌ಗೆ ಒತ್ತಾಯ ವಿಚಾರ ನಾವು ನಿನ್ನೆ ಕಾಂಗ್ರೆಸ್ ಎಲ್ಲಾ ಶಾಸಕರು ಸೇರಿ ರಾಜ್ಯಪಾಲರಿಗೆ ಮನವಿ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನ್ ರೆಡ್ಡಿ, ಕುಮಾರಸ್ವಾಮಿ ಇವರ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಲು ಮನವಿ ಸಿಎಂ ವಿರುದ್ಧ ವ್ಯತಿರಿಕ್ತ ತೀರ್ಪು ಬಂದ್ರೆ ನಮ್ಮ ಕಾನೂನು ನಡೆ ಪ್ರಾರಂಭ ಇದು ಕುತಂತ್ರದಿಂದ ಮಾಡುತ್ತಿರುವ ಕೆಲಸ ಸ್ಥಿರವಾದ ಸರಕಾರವನ್ನು ಕುತಂತ್ರದಿಂದ ಅಸ್ಥಿರ ಮಾಡ್ತಿದಾರೆ ಎಂದು ದೂರಿದರು.

ಸಿದ್ದರಾಮಯ್ಯ ಒಬ್ಬ ಪ್ರಾಮಾಣಿಕ, ದಕ್ಷ ಸಿಎಂ ಅಂತಾ ಜನರಿಗೆ ಗೊತ್ತಿದೆ ಇವರ ಮುಖಕ್ಕೆ ಮಸಿ ಬಳಿಯಲು ಕುತಂತ್ರ ಮಾಡ್ತಿದಾರೆ. ಅವರ ಕುತಂತ್ರಕ್ಕೆ ರಾಜಕೀಯವಾಗಿ ನಾವೂ ಉತ್ತರ ಕೊಡ್ತೀವಿ ಕಾಂಗ್ರೆಸ್ ಪ್ರಭಾವೀ ಸಚಿವರ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ಇನ್ನೇ ಚರ್ಚೆ ಮಾಡಿದೀವಿ ಅಂತಾ ಹೇಳಲು ಬರಲ್ಲ ನಾನೂ ಮಹದೇವಪ್ಪ, ಸತೀಶ್ ಜಾರಕಿಹೊಳಿ ಮನೆಗೆ ಹೋಗಿ ಬರ್ತೀನಿ ಕ್ಷೇತ್ರದ ಅನುದಾನದ ವಿಚಾರಕ್ಕೆ ಸಚಿವರ ಮನೆಗೆ ಭೇಟಿ ಮಾಡಿರುತ್ತಾರೆ ಆದ್ರೆ ಈ ಭೇಟಿಗೆ ಬೇರೆ ಬಣ್ಣ ಹಚ್ಚುವುದು ಸರಿಯಲ್ಲ ಎಂದರು.
ಚಿತ್ರದುರ್ಗದಲ್ಲಿ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿ ಬಾಲ್ಯ ವಿವಾಹ ತಡೆಯಲು ನೂತನ ಕಾಯ್ದೆಯನ್ನು ಜಾರಿತರಲಾಗುವುದು ಗೃಹ,ಆಡಿಪಿಆರ್.ನ್ಯಾಯಾಂಗ, ಮಹಿಳಾ ಮಕ್ಕಳ ಕಲ್ಯಾಣ., ಆರೋಗ್ಯ,ಶಿಕ್ಷಣ ಮತ್ತು ಇತ್ರೆ ಒಂಬತ್ತು ಇಲಾಖೆಗಳನ್ನು ಒಳಗೊಂಡ ಹೊಸಾ ಕಾಯ್ದೆ ಮಾಡಿ ತಿದ್ದುಪಡಿ ಮಾಡಲು ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗಿದೆ. ಸದನದಲ್ಲಿ 9 ಇಲಾಖೆಗಳನ್ನು ಒಳಗೊಂಡಂತೆ ಒಂದು ತಿದ್ದುಪಡಿ ಮಾಡಿದೀವಿ 9 ಇಲಾಖೆಗಳನ್ನು ಒಳಗೊಂಡು ಬಾಲ್ಯ ವಿವಾಹ ತಡೆಗೆ ಕಾನೂನು ತರುತ್ತೇವೆ ಈ ಪಿಡುಗಿಗೆ ಇಲಾಖೆ, ಸರಕಾರ ಕೈ ಕಟ್ಟಿ ಕಣ್ಣು ಮುಚ್ಚಿ ಕೂತಿಲ್ಲ ಈ ವಿಚಾರವಾಗಿ ಹುಡುಗ-ಹುಡುಗಿಯರನ್ನು ಎಜುಕೇಟ್ ಮಾಡ್ತೀದೀವಿ ಇಂದು ರಿವೀವ್ ಮೀಟಿಂಗ್‌ನಲ್ಲೂ ಈ ವಿಚಾರ ಚರ್ಚೆ ಎಂದು ತಿಳಿಸಿದ ಸಚಿವರು, ಗ್ಯಾರಂಟಿಯಿಂದ ಶಾಸಕರ ಅನುದಾನಕ್ಕೆ ಕೊಕ್ಕೆ ವಿಚಾರ ಸಿಎಂ ಹಾಗೂ PWಆ ಇಲಾಖೆಯಿಂದ 50 ಕೋಟಿ ಅನುದಾನ ನೀಡಿದೆ ಇದರಿಂದ ಎಲ್ಲಾ ಶಾಸಕರೂ ಖುಷಿಯಾಗಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
Views: 0