ಬಸವಾದಿ ಶರಣರ ಗದ್ದುಗೆಗಳ ಅಭಿವೃದ್ಧಿಗಾಗಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಸಚಿವ ಶ್ರೀ ಎಂ ಬಿ ಪಾಟೀಲ್ ಮನವಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 18: ಇಂದು ಅನೇಕ ಕಡೆ ಬಸವಾದಿ ಶರಣರ ಗದ್ದುಗೆಗಳು ಸುಸ್ಥಿಯಲ್ಲಿಲ್ಲ. ಗದ್ದುಗೆಗಳ ಅಭಿವೃದ್ಧಿಗಾಗಿ ಮುಂಬರುವ ರಾಜ್ಯ ಬಜಟ್‍ನಲ್ಲಿ ಅನುದಾನ ಮೀಸಲಿಡುವಂತೆ ಮಾನ್ಯ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ
ಕೈಗಾರಿಕೆ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ಶ್ರೀ ಎಂ ಬಿ ಪಾಟೀಲ್ ತಿಳಿಸಿದರು.

ಚಿತ್ರದುರ್ಗ ನಗರದ ಬೃಹನ್ಮಠದ ಆವರಣದ ಅನುಭವ ಮಂಟಪದಲ್ಲಿ ಇಂದಿನಿಂದ ಆರಂಭವಾದ ಎರಡು ದಿನದ 13ನೆಯ ಅಖಿಲ
ಭಾರತ ಶರಣ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕಳೆದ ನಾಲ್ಕೈದು ದಶಕಗಳಿಂದ ಶರಣ ಸಾಹಿತ್ಯ
ಪರಿಷತ್ತನ್ನು ಸ್ಥಾಪಿಸಿ ಈ ನಾಡಿನ ಮೂಲೆ ಮೂಲೆಗಳಿಗೆ ಬಸವಾದಿ ಶರಣರ ತತ್ತ್ವಗಳನ್ನು ಮುಟ್ಟಿಸಿದವರು ಪೂಜ್ಯ ಶ್ರೀ ಶಿವರಾತ್ರಿ
ದೇಶಿಕೇಂದ್ರ ಮಹಾಸ್ವಾಮಿಗಳವರು. ಇಂದು ಅನೇಕ ಕಡೆ ಬಸವಾದಿ ಶರಣರ ಗದ್ದುಗೆಗಳು ಸುಸ್ಥಿಯಲ್ಲಿಲ್ಲ. ಗದ್ದುಗೆಗಳ
ಅಭಿವೃದ್ಧಿಗಾಗಿ ಮುಂಬರುವ ರಾಜ್ಯ ಬಜಟ್‍ನಲ್ಲಿ ಅನುದಾನ ಮೀಸಲಿಡುವಂತೆ ಮಾನ್ಯ ಮುಖ್ಯಮಂತ್ರಿಗಳ ಬಳಿ ಮನವಿ
ಮಾಡಲಾಗುವುದು. ಬಸವಾದಿ ಶರಣ ಸ್ಮಾರಕಗಳನ್ನು ಉಳಿಸಿ ಅಭಿವೃದ್ಧಿ ಪಡಿಸಲು ಸಮಗ್ರ ಯೋಜನೆಯನ್ನು ರೂಪಿಸಲು ನಾಡಿನ
ಸ್ವಾಮೀಜಿಗಳು, ಮಠಾದೀಶರೊಂದಿಗೆ ಚರ್ಚಿಸಲಾಗುವುದು. ಮಾನ್ಯ ಮುಖ್ಯಮಂತ್ರಿಗಳು ಬಸವಣ್ಣನವರ ಹಾಗೂ ಬಸವಾದಿ
ಶರಣರ ಚಿಂತನೆಗಳ ಬಗ್ಗೆ ನಮಗಿಂತ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ನುಡಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಡಾ.ಎಸ್.ಆರ್.ಗುಂಜಾಳ ಮಾತನಾಡಿ ಶರಣ ಸಾಹಿತ್ಯ
ಸಮ್ಮೇಳನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಕಾರ್ಯಚರಣೆ ಹಮ್ಮಿಕೊಂಡಿದೆ. ಈ ಸಭೆಯಲ್ಲಿ ಬಹಳ
ಶರಣ ಸೇರಿದ್ದೀರಿ. ಶರಣರ ವಚನಗಳನ್ನು ಪಾಲಿಸಿ ಒಳ್ಳೆಯ ಜೀವನ ನಡೆಸುವಂತೆ ಶರಣರು ಸಂದೇಶ ನೀಡುರುತ್ತಾರೆ. ಶರಣ
ತತ್ತ್ವಗಳು, ಸಂದೇಶಗಳು ಸಮಾಜಕ್ಕೆ ಈ ಸಮ್ಮೇಳನದ ಮೂಲಕ ತಲುಪುವಂತಾಗಲಿ ಎಂದು ನುಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿ ದಯಯೇ ಧರ್ಮದ
ಮೂಲವಯ್ಯ ಎಂಬ ಮಾತು ಸಮಾಜಕ್ಕೆ ಬೇಕಾಗಿದೆ. ಕಾಯಕವೇ ಕೈಲಾಸ ಎಂಬ ಮಾತನ್ನು ನಮ್ಮ ಜೀವನದಲ್ಲಿ
ಅಳವಡಿಸಿಕೊಳ್ಳಬೇಕಾಗಿದೆ. ಜನರಲ್ಲಿರುವ ಅಂಧಕಾರವನ್ನು ಹೋಗಲಾಡಿಸಿ ವೈಜ್ಞಾನಿಕ ಜಗತ್ತನ್ನು ಬೆಳಸಬೇಕಾಗಿದೆ. ಶರಣ
ಸಾಹಿತ್ಯ ಅಂದರೆ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಜೀವನದ ಮಾರ್ಗವೇ ಶರಣ ಸಾಹಿತ್ಯ. ಸಮಾಜದ ಸಂಘರ್ಷದ ನಾಶಕ್ಕೆ
ಶರಣ ಸಾಹಿತ್ಯ ಒಂದೇ ಮಾರ್ಗ ಎಂದು ನುಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಶಿವರಾತ್ರಿ
ದೇಶಿಕೇಂದ್ರ ಮಹಾಸ್ವಾಮಿಗಳು, ಡಂಬಳ ಗದಗ ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ತೋಂಟದ
ಸಿದ್ದರಾಮ ಮಹಾಸ್ವಾಮಿಗಳು, ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ದರಾಮ ಬೆಲ್ದಾಳ ಶರಣರು,

ಶ್ರೀ ಸಿದ್ಧರಾಮೇಶ್ವರ ಸಂಸ್ಥಾನದ ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮ ಸ್ವಾಮಿಗಳು, ಮಾದಾರಚನ್ನಯ್ಯ ಗುರುಪೀಠದಶ್ರೀ
ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮಿಗಳು, ಶ್ರೀ ಕಬೀರಾನಂದಾಶ್ರಮದ ಸದ್ಗುರು ಶ್ರೀ ಶಿವಲಿಂಗಾನಂದ ಸ್ವಾಮಿಗಳು,
ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಮಹಾಸ್ವಾಮಿಗಳು, ಡಾ.
ಬಸವಪ್ರಭುಸ್ವಾಮಿಗಳು, ಯೋಗಗುರು ಚನ್ನಬಸವಣ್ಣ, ಸಿದ್ದಯ್ಯನಕೋಟೆಯ ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು ವಹಿಸಿದ್ದರು.
ಸಮಾರಂಭದಲ್ಲಿ ನಾಡೋಜ ಶ್ರೀ ಗೊ.ರ.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಶ್ರೀ ಕೆ ಎಸ್ ನವೀನ್, ಎಸ್.ಜೆ.ಎಂ.ವಿದ್ಯಾಪೀಠದ

ಆಡಳಿತಮಂಡಳಿ ಅಧ್ಯಕ್ಷರಾದ ಶ್ರೀ ಶಿವಯೋಗಿ ಸಿ ಕಳಸದ, ಆಡಳಿತಮಂಡಳಿ ಸದಸ್ಯರಾದ ಶ್ರೀ ಎಸ್.ಎನ್.ಚಂದ್ರಶೇಖರ್,
ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅನುಭವ ಸಂಗಮ-ಸ್ಮರಣ ಸಂಚಿಕೆ, ಶರಣ ದರ್ಶನ ಹಾಗೂ ಶರಣ ಮೇದಾರ ಕೇತಯ್ಯ ಕೃತಿಗಳನ್ನು ಬಿಡುಗಡೆ
ಮಾಡಲಾಯಿತು. ನಾಟ್ಯರಂಜನಿ ನೃತ್ಯಕಲಾಕೇಂದ್ರ, ಡಾ.ನಂದಿನಿ ಶಿವಪ್ರಕಾಶ್, ಚಿತ್ರ ತಂಡ ಕಲಾಕೇಂದ್ರದವರು ವಚನ ರೂಪಕ,
ಶ್ರೀ ತೋಟಪ್ಪ ಉತ್ತಂಗಿ, ಶ್ರೀಮತಿ ಕೋಕಿಲ ರುದ್ರಮೂರ್ತಿ ವಚನ ಸಂಗೀತ, ಗಾನಯೋಗಿ ಪಂಚಾಕ್ಷರಿ ಸಂಗೀತ ಬಳಗದವರಿಂದ
ಸಾಮೂಹಿಕ ವಚನ ಗಾಯನ ಹಾಗೂ ಗಾಯತ್ರಿ ಮತ್ತು ತಂಡದವರಿಂದ ವೀಣಾವಾದನ ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಡಾ.ರೂಪ ಹುರಳಿ ಬಸವರಾಜು ನಿರೂಪಿಸಿ, ಡಾ.ಕೆ.ಎಂ.ವೀರೇಶ್ ಸ್ವಾಗತಿಸಿದರು.

Leave a Reply

Your email address will not be published. Required fields are marked *