
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮೇ. 19 ಕಾಂಗ್ರೆಸ್ ಆಡಳಿತ ರಾಜ್ಯವನ್ನು ಹಿಂದೆಂದೂ ಕಾಣದ ದುಸ್ಥಿತಿಗೆ ದೂಡಿದೆ. ಇದು ಆಡಳಿತ ನಡೆಸುವ ಸರ್ಕಾರವಲ್ಲ, ಕೇವಲ “ವಸೂಲಿ ಸರ್ಕಾರ”. ಕಾಂಗ್ರೆಸ್ ಆಡಳಿತ ಕನ್ನಡಿಗರ ಬದುಕಿಗೆ ಶಾಪವಾಗಿದೆ. ಕಾಂಗ್ರೆಸ್ ಸರ್ಕಾರ ಎಂದರೆ ಭ್ರಷ್ಟಾಚಾರದ ಕೂಪ. ಪ್ರತಿಯೊಂದು ಯೋಜನೆಯಲ್ಲೂ, ಪ್ರತಿ ಟೆಂಡರ್‍ನಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ. ರಾಜ್ಯವನ್ನು ಕಾಂಗ್ರೆಸ್ ಪಕ್ಷದ “ಎಟಿಎಂ” ಆಗಿ ಪರಿವರ್ತಿಸಿದ್ದಾರೆ. ಎಂದು ಶಾಸಕ ಡಾ.ಎಂ.ಚಂದ್ರಪ್ಪ ಆರೋಪಿಸಿದ್ದಾರೆ.
ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ
ಎರಡು ವರ್ಷಗಳಿಂದ ಆಡಳಿತವನ್ನು ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನನ ಪ್ರಮಾಣಪತ್ರದಿಂದ ಮರಣ
ಪ್ರಮಾಣಪತ್ರದವರೆಗೂ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನೆಮ್ಮದಿಯಿಂದ ಬದುಕಲು ಅಥವಾ ಸಾಯಲು ಸಹ ಬಿಡದ ಕ್ರೂರ ಭ್ರಷ್ಟತೆ ರಾಜ್ಯವನ್ನು ಆವರಿಸಿದೆ. ರಾಜ್ಯ ಇಂದು ಆರ್ಥಿಕ ದಿವಾಳಿ, ಶೂನ್ಯ ಅಭಿವೃದ್ಧಿ, ಕುಸಿದ ಕಾನೂನು ಸುವ್ಯವಸ್ಥೆ, ಸಾಮಾಜಿಕ ನ್ಯಾಯದ ಕಗ್ಗೋಲೆ ಮತ್ತು ವ್ಯಾಪಕ ಭ್ರಷ್ಟಾಚಾರದಿಂದ ನರಳುತ್ತಿದೆ. ಇದು ಜನಾದೇಶಕ್ಕೆ ಮಾಡಿದ ದ್ರೋಹವಾಗಿದೆ. ಕನ್ನಡಿಗರ ಬದುಕಿಗೆ ಶಾಪವಾದ ಕಾಂಗ್ರೆಸ್ ಆಡಳಿತ ಅಪಚಾರ. ಭ್ರಷ್ಟಾಚಾರದ ಬ್ರಹ್ಮಾಂಡ-ವಸೂಲಿ ಸರ್ಕಾರ’ ಮತ್ತು ಹಗರಣಗಳ ಸರಮಾಲೆ ಕಾಂಗ್ರೆಸ್ ಸರ್ಕಾರ ಎಂದರೆ ಭ್ರಷ್ಟಾಚಾರದ ಕೂಪ. ಇದು ಸ್ಪಷ್ಟವಾಗಿ “ಕಮಿಷನ್ ಸರ್ಕಾರ”, “60% ಸರ್ಕಾರ”, ಪ್ರತಿಯೊಂದು ಯೋಜನೆಯಲ್ಲೂ, ಪ್ರತಿ ಟೆಂಡರ್‍ನಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ. ರಾಜ್ಯವನ್ನು ಕಾಂಗ್ರೆಸ್ ಪಕ್ಷದ “ಎಟಿಎಂ” ಆಗಿ ಪರಿವರ್ತಿಸಿದ್ದಾರೆ ಎಂದರು.
ಕರ್ನಾಟಕದಲ್ಲಿ ಲೂಟಿ ಮಾಡಿದ ಕೋಟ್ಯಂತರ ಹಣವನ್ನು ಪಕ್ಷದ ಹೈಕಮಾಂಡ್‍ಗೆ ಮತ್ತು ಇತರ ರಾಜ್ಯಗಳ ಚುನಾವಣೆಗಳಿಗೆ
ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದ ಮೇಲೆ ಮುಡಾ ನಿವೇಶನ ಹಗರಣ. ಕಾಂಗ್ರೆಸ್
ನಾಯಕರೇ ಭ್ರಷ್ಟಾಚಾರದ ಕಿಂಗ್ ಪಿನ್‍ಗಳು ವಾಲ್ಮೀಕಿ ನಿಗಮದ 187 ಕೋಟಿ ಇದು ಪರಿಶಿಷ್ಟ ಪಂಗಡ ಸಮುಧಾಯಕ್ಕೆ ಮಾಡಿದ
ಘೋರ ವಂಚನೆ. ಸ್ಮಾರ್ಟ್ ಮೀಟರ್ ಹೆಸರಿನಲ್ಲಿ 15,568 ಕೋಟಿ ಹಗರಣದ ಶಂಕೆ-ಇದರಲ್ಲಿ ಸಚಿವ ಜಾರ್ಜ್ ಪಾತ್ರ. ಸಚಿವ
ಪ್ರಿಯಾಂಕ್ ಖರ್ಗೆ ಸಹೋದರರ ಟ್ರಸ್ಟ್ಗೆ ಮೌಲ್ಯಯುತ ರಕ್ಷಣಾ ಏರೋಸ್ಪೇಸ್ ಪಾರ್ಕ್‍ನಲ್ಲಿ ಏIಂಆಃ ಭೂಮಿ ಅಕ್ರಮ ಮಂಜೂರು.
ಕಾರ್ಮಿಕ ಮಕ್ಕಳ ಪೌಷ್ಟಿಕಾಂಶ ಕಿಟ್‍ಗಳನೇರ ಹೊಣೆ. ಕಾರ್ಮಿಕ ಸಚಿವ ಸಂತೋಷ್ ಲಾಡ ಇದರ ಗುತ್ತಿಗೆದಾರರ “60% ಕಮಿಷನ್ಆ ರೋಪ-ಗುತ್ತಿಗೆದಾರರು ಬಿಲ್ ಪಾಸ್ ಆಗಲು ಲಂಚ ನೀಡದೆ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಕೇವಲ
ಆರೋಪವಲ್ಲ, ಕಾಂಗ್ರೆಸ್ ಸರ್ಕಾರದ ವ್ಯವಸ್ಥಿತ ಲೂಟಿ ರಾಜ್ಯದಲ್ಲಿನ ಗಂಭೀರ ಪ್ರಕರಣಗಳ ತನಿಖೆಗೆ ಆಃಖೆ ಗೆ ನೀಡಿದ್ದ ಮುಕ್ತ
ಸಮ್ಮತಿಯನ್ನು ಸರ್ಕಾರ ಹಿಂಪಡೆದಿದೆ. ಇದು ಭ್ರಷ್ಟರನ್ನು ರಕ್ಷಿಸಲು ಮತ್ತು ನಡೆದ ಹಗರಣಗಳನ್ನು ಮುಚ್ಚಿಹಾಕಲು ನಡೆಸುತ್ತಿರುವ
ವ್ಯವಸ್ಥಿತ ಹುನ್ನಾರ ಎಂದು ದೂರಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗ¼ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಘೋರ ವಂಚನೆ ಮತ್ತು ಅನ್ಯಾಯ. ಅವರ
ಅಭಿವೃದ್ಧಿ ಮತ್ತು ಏಳಿಗೆಗೆ ಮೀಸಲಾದ SಅSP-ಖಿSP ನಿಧಿಯನ್ನು ಕೊಳ್ಳೆ ಹೊಡೆದು ಬೇರೆ ಉದ್ದೇಶಗಳಿಗೆ ಬಳಸಿದ್ದಾರೆ. ದಲಿತ
ಸಂಘಟನೆಗಳೇ ಸರ್ಕಾರದ ವಿರುದ್ಧ “ಕಾಂಗ್ರೆಸ್ ಹಠಾವೋ ದಲಿತ ಬಚಾವೋ” ಎಂದು ಬೀದಿಗಿಳಿದು ಪ್ರತಿಭಟಿಸುತ್ತಿವೆ. ದಲಿತ
ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುತ್ತಿದ್ದ ವಿದೇಶಿ ಶಿಷ್ಯವೇತನ ಯೋಜನೆಯನ್ನು ಸಹ ನಿಲ್ಲಿಸಿದ್ದಾರೆ. ಒಂದೆಡೆ Sಅ/Sಖಿ
ಸಮುದಾಯವನ್ನು ನಿರ್ಲಕ್ಷಿಸಿ ವಂಚಿಸುತ್ತಿರುವ ಸರ್ಕಾರ ಇನ್ನೊಂದೆಡೆ ಕೇವಲ ಮುಸ್ಲಿಂ ಓಲೈಕೆಗೆ ಆದ್ಯತೆ ನೀಡುತ್ತಿದೆ.
ವಿಧಾನಸೌಧದಂತಹ ಪವಿತ್ರ ಸ್ಥಳದಲ್ಲೇ “ಪಾಕಿಸ್ತಾನ್ ಜಿಂದಾಬಾದ್’ ಎಂಬ ದೇಶದ್ರೋಹಿ ಘೋಷಣೆಗಳು ಕೇಳಿಬಂದರೂ, ಸರ್ಕಾರ ಅದನ್ನು ಮರೆಮಾಚಲು ಪ್ರಯತ್ನಿಸುವ ಮೂಲಕ ರಾಷ್ಟ್ರ ವಿರೋಧಿಗಳಿಗೆ ಬೆಂಬಲ ನೀಡುತ್ತಿದೆ. ಇವರದು ಕೇವಲ ಮುಸ್ಲಿಂ ಓಲೈಕೆಯ ‘ಹಲಾಲ್ ಬಜೆಟ್’. ಹಿಂದೂಗಳ ತೆರಿಗೆ ಹಣವನ್ನು ಕೇವಲ ಓಲೈಕೆಗಾಗಿ ವಕ್ಸ್, ಉರ್ದು ಶಾಲೆ, ಇಮಾಮ್‍ಗಳಿಗೆ ಕೋಟಿ ಕೋಟಿ ಅನುದಾನ, ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ ವ್ಯಯಿಸುತ್ತಿದ್ದಾರೆ ಎಂದು ಚಂದ್ರಪ್ಪ ತಿಳಿಸಿದರು.
ವಕ್ಸ್ ಬೋರ್ಡ್ ಮೂಲಕ ಹಿಂದೂ-ರೈತರುಗಳ ಆಸ್ತಿಗಳ ಮೇಲೆ ಆಕ್ರಮ ನೋಟಿಸ್ ನೀಡಲು ಕುಮ್ಮಕ್ಕು. ಅಕ್ರಮ ಗೋಹತ್ಯೆಗೆ
ಕುಮ್ಮಕ್ಕು ನೀಡಿದೆ. ಗಲಭೆಕೋರರಿಗೆ ರಕ್ಷಣೆ, ಹಿಂದೂ ಹಬ್ಬಗಳಿಗೆ ಅನುದಾನ ವಿಳಂಬ, ದೇವಾಲಯಗಳ ಬಳಿ ಮದರಸಾ
ಅನುಮತಿ, ವಕ್ಸ್ ಅಕ್ರಮಗಳಿಗೆ ಬೆಂಬಲ ನೀಡಿದೆ ಕಾಂಗ್ರೆಸ್ ಸರ್ಕಾರದ ದುರಾಡಳಿತ. ರಾಜ್ಯ ಆರ್ಥಿಕ ದಿವಾಳಿಯ ಅಂಚಿನಲ್ಲಿದೆ.
ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ವ್ಯಾಪಕ ಭ್ರಷ್ಟಾಚಾರದಿಂದಾಗಿ ರಾಜ್ಯದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ.
ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಸ್ವತಃ ಉಪಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಸರ್ಕಾರದ ಜನವಿರೋಧಿ
ನೀತಿಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಲು, ನೀರು, ವಿದ್ಯುತ್, ಡೀಸೆಲ್ ಬೆಲೆ ಏರಿಕೆ, ವಿವಿಧ ತೆರಿಗೆ ಮತ್ತು
ಶುಲ್ಕಗಳ ವಿಪರೀತ ಹೆಚ್ಚಳದಿಂದಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಜನಸಾಮಾನ್ಯರ
ಬದುಕನ್ನು ಸಂಪೂರ್ಣವಾಗಿ ದುಸ್ತರಗೊಳಿಸಿದ್ದಾರೆ. . ಹದಗೆಟ್ಟ ಕಾನೂನು ಸುವ್ಯವಸ್ಥೆ – ಮಹಿಳೆಯರು ಮತ್ತು ನಾಗರಿಕರಿಗೆ ಅಭದ್ರತೆ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ರಾಜ್ಯವು ಆರಾಜಕತೆಯ ಕೂಪವಾಗಿ ಮಾರ್ಪಟ್ಟಿದೆ ಎಂದರು.
ಹಿಂದೂ ಕಾರ್ಯಕರ್ತರ ಹತ್ಯೆ, ಜೈನಮುನಿ ಹತ್ಯೆ, ನೇಹಾ ಹಿರೇಮಠ ಕೊಲೆ ಸೇರಿದಂತೆ ಕೊಲೆ, ಸುಲಿಗೆ, ಅತ್ಯಾಚಾರಗಳು
ಮಿತಿಮೀರಿವೆ. ಲವ್ ಜಿಹಾದ್ ಹಾವಳಿ ಹೆಚ್ಚಾಗಿದೆ. ಡ್ರಗ್ಸ್ ಮಾಫಿಯಾ ಮತ್ತೆ ಸಕ್ರಿಯವಾಗಿದೆ. ನಿಷೇಧಿತ ಈ ನಂತಹ
ಸಂಘಟನೆಗಳ ಚಟುವಟಿಕೆಗಳು ಮತ್ತೆ ಶುರುವಾಗಿವೆ. ಪೊಲೀಸರ ಮೇಲೆಯೇ ಮಾಫಿಯಾಗಳು ಹಲ್ಲೆ ನಡೆಸುವ ಮಟ್ಟಿಗೆ ಕಾನೂನು ಸುವ್ಯವಸ್ಥೆ ಕುಸಿದಿದೆ. ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಕೋಮು ಗಲಭೆಗಳು ಹೆಚ್ಚುತ್ತಿವೆ. ಸರ್ಕಾರ ಇವುಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಕಾಂಗ್ರೆಸ್ ಆಡಳಿತದಲ್ಲಿ ರೈತರಿಗೆ, ಸರ್ಕಾರದ ವಂಚನೆ, ನಿರ್ಲಕ್ಷ್ಯದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ
ನೀಡುತ್ತಿದ್ದ ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯದ ಪಾಲು 4000 ಸ್ಥಗಿತ. ಗೊಬ್ಬರ-ಬೀಜ-ಉಪಕರಣಗಳ ಬೆಲೆ ಏರಿಕೆ. ವಿವಿಧ
ಬೆಳೆಗಾರರಿಗೆ ಬೆಂಬಲ ಬೆಲೆ ನೀಡದೆ ರೈತರ ಆರ್ಥಿಕತೆಗೆ ಕೊಡಲಿಪೆಟ್ಟು. ಆಡಳಿತದ ಮೊದಲ 10 ತಿಂಗಳಲ್ಲೇ 692 ರೈತರ
ಆತ್ಮಹತ್ಯೆ. ರಾಜ್ಯದ ನೀರನ್ನು ಪರ ರಾಜ್ಯಗಳಿಗೆ ಹಂಚಿ, ಸಣ್ಣ ನೀರಾವರಿ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿ ಜಲವಂಚನೆ. ಹಕ್ಕುಗಳಿಗಾಗಿ ಪ್ರತಿಭಟಿಸುವ ರೈತರ ಬಂಧನ. ಯುವಜನರ ಭವಿಷ್ಯವನ್ನ ಕತ್ತಲೆಗೆ ದೂಡಿದ್ದಾರೆ ಎಂದು ಚಂದ್ರಪ್ಪ ದೂರಿದರು.
ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಜಲ್ಲಾ ಪ್ರಧಾನ
ಕಾರ್ಯದರ್ಶಿ ಸಂಪತ್ ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಮಾದ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್ ನಗರಾಧ್ಯಕ್ಷ
ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್ ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1