ಚಿತ್ರದುರ್ಗ ಆ. 22
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಶ್ರೀ ಸದ್ಗುರು ಕಬೀರಾನಂದಾಶ್ರಮ ಹಾಗೂ ಶ್ರೀ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನ ಚಿತ್ರದುರ್ಗ ಇವರ ಸಂಹಯೋಗದೊಂದಿಗೆ
ಅ. 24ರ ಭಾನುವಾರ ನಗರದ ಕಬೀರಾನಂದ ಆಶ್ರಮದಲ್ಲಿ ಬೆಳಿಗ್ಗೆ 10.30ಕ್ಕೆ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ
ಟಿ.ಎನ್.ಚಿಕ್ಕವೀರಯ್ಯರವರ ಮೊಬೈಲ್‍ಬಿಡಿ, ಪುಸ್ತಕಹಿಡಿ ಅರಿವಿನ ಅಭಿಯಾನ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಎಂದು ಶಿಕ್ಷಕರು, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಂಜಾಚಿ ಗೀತಾ ಭರಮಸಾಗರ ತಿಳಿಸಿದ್ದಾರೆ.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ಹಾಗೂ ಶ್ರೀ ಕುಂಬಾರ
ಗುಂಡಯ್ಯ ಮಹಾ ಸಂಸ್ಥಾನದ ಸಿ.ಸಿ.ಬಸವಮೂರ್ತಿ ಕುಂಬಾರ ಗುಂಡಯ್ಯ ಶ್ರೀಗಳು ವಹಿಸಲಿದ್ದಾರೆ. ಈ ಸಂವಾದಲ್ಲಿ
ಟಿ.ಎನ್.ಚಿಕ್ಕವೀರಯ್ಯರವರು ಭಾಗವಹಿಲಿದ್ದಾರೆ ಎಂದು ತಿಳಿಸಿದ್ದಾರೆ.
Views: 21