ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ನಗರದ ಆನೇ ಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಸೇವಾ ಸಮಿತಿಯವರಿಂದ ಅಂಗರಾಕ ಚತುರ್ಥಿ ಅಂಗವಾಗಿ ಶ್ರೀ ವಿನಾಯಕನಿಗೆ ಭವ್ಯವಾದ ಮೋದಕ ಅಲಂಕಾರವನ್ನು ಅಚ್ಚುಕಟ್ಟಾಗಿ ನೆರವೇರಿಸಲಾಯಿತು. ವಿಶೇಷವಾಗಿ ಸಜ್ಜುಗೊಳಿಸಿದ ವಿನಾಯಕನ ಮೂರ್ತಿ ಭಕ್ತರನ್ನು ಆಕರ್ಷಿಸಿತು.

ಈ ಪವಿತ್ರ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ವಿನಾಯಕನ ದರ್ಶನ ಪಡೆದು ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಪೂಜೆ, ಅಲಂಕಾರ ಮತ್ತು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಕ್ತಿಭಾವದ ವಾತಾವರಣ ಮನೆಮಾಡಿತ್ತು. ಸೇವಾ ಸಮಿತಿಯ ಸದಸ್ಯರ ಶ್ರಮ ಹಾಗೂ ಸಮರ್ಪಣೆಯಿಂದ ಕಾರ್ಯಕ್ರಮ ಸಾರ್ಥಕವಾಗಿ ನೆರವೇರಿತು.
ಭಕ್ತರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯಿಂದ ಆನೇ ಬಾಗಿಲ ಪ್ರದೇಶವು ಧಾರ್ಮಿಕ ಸಂಭ್ರಮದಿಂದ ಕಂಗೊಳಿಸಿತು.
Views: 37