ಮೋದಿ 3.0 ಬಜೆಟ್​: ಯಾವ್ಯಾವ ಇಲಾಖೆಗೆ ಎಷ್ಟು ಅನುದಾನ ಇಲ್ಲಿದೆ ಮಾಹಿತಿ!

SECTOR WISE ALLOCATION DETALIS : ಕೇಂದ್ರ ಬಜೆಟ್​ನಲ್ಲಿ ಪ್ರಾಥಮಿಕ ವಲಯವಾಗಿರುವ ರಕ್ಷಣೆಗೆ ಹೆಚ್ಚಿನ ಅನುದಾನ ಘೋಷಣೆ ಮಾಡಿದ್ದು, ಉಳಿದ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.

ನವದೆಹಲಿ: ಮಧ್ಯಮ ವರ್ಗದವರಿಗೆ ತೆರಿಗೆ ಇಳಿಕೆ ಜೊತೆಗೆ ಹಲವು ಯೋಜನೆಗಳನ್ನು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್​ ಅವರು ಈ ಬಾರಿಯ 2025-26ನೇ ಸಾಲಿನ ಬಜೆಟ್​ನಲ್ಲಿ ಘೋಷಿಸಿದ್ದಾರೆ. ಕೃಷಿ, ಎಂಎಸ್​ಎಂಇ, ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಅನುದಾನ ಹಂಚಿಕೆಯಲ್ಲಿ ರಕ್ಷಣಾ ವಲಯಕ್ಕೆ ಸಿಂಹಪಾಲು ನೀಡಿದ್ದು, ಸರ್ಕಾರವೂ ಮೇಕ್​ ಇನ್​ ಇಂಡಿಯಾ ಪ್ರಯತ್ನ ಮುಂದುವರೆಸಲಾಗಿದೆ.

ಯಾವ ಇಲಾಖೆಗೆ ಎಷ್ಟು ಅನುದಾನ?

  • ಪ್ರಾಥಮಿಕ ವಲಯಗಳಲ್ಲಿ ಒಂದಾಗಿರುವ ರಕ್ಷಣಾ ವಲಯಕ್ಕೆ – 4,91,732 ಕೋಟಿ ರೂ
  • ಗ್ರಾಮೀಣ ಅಭಿವೃದ್ಧಿ – 2,66,817 ಕೋಟಿ ರೂ
  • ಗೃಹ ವ್ಯವಹಾರ – 2,33,211 ಕೋಟಿ ರೂ
  • ಕೃಷಿ ಮತ್ತು ಇತರೆ ಚಟುವಟಿಕೆ – 1,71,437 ಕೋಟಿ ರೂ
  • ಶಿಕ್ಷಣ – 1,28,650 ಕೋಟಿ ರೂ
  • ಆರೋಗ್ಯ – 98,311 ಕೋಟಿ ರೂ
  • ನಗರ ಅಭಿವೃದ್ಧಿ – 96,777 ಕೋಟಿ ರೂ
  • ಐಟಿ ಮತ್ತು ಟೆಲಿಕಾಂ – 95,298 ಕೋಟಿ ರೂ
  • ಇಂಧನ – 81,174 ಕೋಟಿ ರೂ
  • ವಾಣಿಜ್ಯ ಮತ್ತು ಕೈಗಾರಿಕೆ – 65,553 ಕೋಟಿ ರೂ
  • ಸಾಮಾಜಿಕ ಕಲ್ಯಾಣ – 60,052 ಕೋಟಿ ರೂ
  • ವೈಜ್ಞಾನಿಕ ಇಲಾಖೆ – 55,679 ಕೋಟಿ ರೂ.

Source : https://www.etvbharat.com/kn/!bharat/union-budger-2025-26-sector-wise-allocation-detalis-karnataka-news-kas25020103028

Leave a Reply

Your email address will not be published. Required fields are marked *