Money Management Skills: ಚಿಕ್ಕ ಮಕ್ಕಳಿಗೆ ಮನೆ ಪಾಠದ ಜೊತೆ ‘money’ ಪಾಠವನ್ನೂ ಕಲಿಸಿ! ದುಡ್ಡಿನ ಬೆಲೆ ತಿಳಿಸಲು ಹೀಗೆ ಮಾಡಿ.

ಜೀವನಕ್ಕೆ (Life) ಬೇಕಾದ ಪಾಠಗಳನ್ನು ಕಲಿಸಲು ಮಕ್ಕಳ ವಯಸ್ಸನ್ನು ನೋಡಬೆಕಂತಿಲ್ಲ, ಅವರಿಗೆ ಚಿಕ್ಕವಯಸ್ಸಿನಲ್ಲಿ ಹೆಚ್ಚು ಗ್ರಹಿಸುವ ಮತ್ತು ಅರ್ಥ ಮಾಡಿಕೊಂಡು ಜೀವನಕ್ಕೆ ಬೇಕಾದ ವಿಷಯವನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ.

ಮಕ್ಕಳಿಗೆ ಹಣಕಾಸಿನ ಪಾಠ

ಹೀಗಾಗಿ ಹಣಕಾಸಿನಂತಹ ದೊಡ್ಡ ವಿಚಾರಗಳನ್ನು ಸಹ ಅವರಿಗೆ ಕಲಿಸುವುದರಲ್ಲಿ ತಪ್ಪೇ ಇಲ್ಲ. ಇದು ಅವರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಸಹಾಯ ಮಾಡುವುದು ಮಾತ್ರವಲ್ಲದೆ ಅವರ ದೈನಂದಿನ ಅಗತ್ಯಗಳಿಗೆ ಬಂದಾಗ ಅವರಲ್ಲಿ ಆರ್ಥಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುತ್ತದೆ.

ಮಕ್ಕಳಿಗೆ ಪೋಷಕರು ಹೇಳಿಕೊಡಬಹುದಾದ ಹಣ ನಿರ್ವಹಣೆ ಕೌಶಲ್ಯಗಳ ಮಾರ್ಗಗಳು

ನಿಮ್ಮ ಉಳಿತಾಯದ ಅನುಭವವನ್ನು ಹಂಚಿಕೊಳ್ಳಿ

ಮಕ್ಕಳಿಗೆ ಹಣದ ಪಾಠ ಮಾಡುವ ಪ್ರಥಮ ಹೆಜ್ಜೆ ಅಂದರೆ ನಿಮ್ಮ ಹಣಕಾಸಿನ ಅನುಭವಗಳನ್ನು ಅವರೊಟ್ಟಿಗೆ ಹಂಚಿಕೊಳ್ಳುವುದು. ಅದು ಉಳಿತಾಯ, ಖರ್ಚು-ವೆಚ್ಚ, ಹಣದ ಮಹತ್ವ ಇವೆಲ್ಲವನ್ನೂ ಮಕ್ಕಳ ಜೊತೆ ಮುಕ್ತವಾಗಿ ಹಂಚಿಕೊಳ್ಳಬೇಕು. ಹೀಗೆ ಪೋಷಕರು ಹಣದ ವಿಷಯಗಳನ್ನು ಹೇಳುವುದು ಕಲಿಕೆಯ ಅವಕಾಶವನ್ನಾಗಿ ಪರಿವರ್ತಿಸುತ್ತದೆ. ಮುಂದೆ ಬೇಕಾದ ಯೋಜನಗೆಳಿಗೆ ಈಗಿನಿಂದಲೇ ಹಣ ಹೇಗೆ ಹೊಂದಿಸಬೇಕು, ಉಳಿತಾಯ ಯಾವ ರೀತಿ ಮಾಡಬೇಕು ಎಂಬ ಎಲ್ಲಾ ಪ್ಲ್ಯಾನ್‌ಗಳನ್ನು ಅವರಿಗೆ ಕಲಿಸಿ.

ದಿನಸಿಗಾಗಿ ಬಜೆಟ್ ಮಾಡುವುದು ಅಥವಾ ನಿಗದಿತ ಬಜೆಟ್‌ನಲ್ಲಿ ಕುಟುಂಬ ಅಥವಾ ಸ್ನೇಹಿತರ ಪ್ರವಾಸವನ್ನು ಯೋಜಿಸುವುದು ಮುಂತಾದ ನೈಜ-ಜೀವನದ ಸನ್ನಿವೇಶಗಳಲ್ಲಿ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ನೀಡಿ. ಇದು ಪ್ರಾಯೋಗಿಕವಾಗಿ ಹಣಕಾಸಿನ ಪಾಠಗಳನ್ನು ಒದಗಿಸುತ್ತದೆ.

ದಿನನಿತ್ಯದ ಚರ್ಚೆ

ಸಾಮಾನ್ಯವಾಗಿ ಗಂಡ-ಹೆಂಡತಿ ಇಬ್ಬರೇ ತಮ್ಮ ಖರ್ಚು-ವೆಚ್ಚ ಇವುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಮಕ್ಕಳಿಗೂ ಹಣದ ಬೆಲೆ ಗೊತ್ತಗಬೇಕು, ಅವರಿಗೂ ಹಣದ ನಿರ್ವಹಣೆ ತಿಳಿಯಬೇಕು ಎಂದರೆ ಅವರನ್ನೂ ನಿಮ್ಮ ಜೊತೆ ಕೂರಿಸಿಕೊಳ್ಳಿ.

ತಿಂಗಳ ಬಜೆಟ್‌, ಮುಂದೆ ಬರುವ ವೆಚ್ಚಗಳು, ಉಳಿತಾಯ ಗುರಿಗಳು ಮತ್ತು ಹಣಕಾಸಿನ ಆದ್ಯತೆಗಳನ್ನು ಬಹಿರಂಗವಾಗಿ ಮಕ್ಕಳ ಜೊತೆ ಕುಳಿತು ಚರ್ಚಿಸಿ. ಇಂತಹ ಮುಕ್ತ ಮಾತುಕತೆ ಮಕ್ಕಳಿಗೆ ಹಣಕಾಸು ಯೋಜನೆಯ ವಿಷಯಗಳನ್ನು ಸ್ಪಷ್ಟಪಡಿಸುತ್ತವೆ.

ಮಕ್ಕಳು ಚರ್ಚೆಗಳಲ್ಲಿ ಭಾಗವಹಿಸಿದರೆ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ಹಿರಿಯರು, ಪೋಷಕರು ಹಂಚಿಕೊಳ್ಳುವ ನೈಜ-ಜೀವನದ ಉದಾಹರಣೆಗಳಿಂದ ಕಲಿಯಲು ಸಹಾಯವಾಗುತ್ತದೆ.

ಹಣದ ಡೈರಿ ರಚಿಸಿ

‘ಮನಿ ಡೈರಿ’ ರಚಿಸಲು ಪ್ರಯತ್ನಿಸಬೇಕು. ಆರ್ಥಿಕ ಜಾಗೃತಿಯನ್ನು ಹೆಚ್ಚಿಸಲು ಇದು ಪ್ರಬಲ ಸಾಧನವಾಗಿದೆ. ಪೋಷಕರು ತಮ್ಮ ದಿನಚರಿಯಲ್ಲಿ ತಮ್ಮ ಖರ್ಚು, ಆದಾಯ ಮತ್ತು ಉಳಿತಾಯದ ಗುರಿಗಳನ್ನು ನಿಯಮಿತವಾಗಿ ಬರೆಯಲು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಹೀಗೆ ಹಣಕಾಸಿನ ವಹಿವಾಟುಗಳ ಬಗ್ಗೆ ದಾಖಲೆಗಳನ್ನು ನಿರ್ವಹಿಸುವ ಮೂಲಕ, ಮಕ್ಕಳು ಹಣ ನಿರ್ವಹಣೆ ಅಭ್ಯಾಸವನ್ನು ಅಭಿವೃದ್ಧಿಪಡಿಸುತ್ತಾರೆ ಮತ್ತು ಸುಧಾರಣೆ ಮಾಡಿಕೊಳ್ಳುತ್ತಾರೆ.

ಧನಾತ್ಮಕ ಆರ್ಥಿಕ ನಡವಳಿಕೆ

ಕೇವಲ ಹಣದ ಧನಾತ್ಮಕ ವಿಷಯಗಳನ್ನು ಹೇಳುವುದು ಮಾತ್ರವಲ್ಲದೇ ಸಾಲದಂತಹ ಪ್ರಕ್ರಿಯೆಗಳನ್ನು ಕಲಿಸಬೇಕು. ಸಾಲದ ಹೊರೆಯಿಂದ ಬಳಲುತ್ತಿರುವಾಗ ತಮ್ಮ ಆರ್ಥಿಕ ಸ್ಥಿತಿಯನ್ನು ಮರಳಿ ಪಡೆಯುವುದು ಹೇಗೆ ಎಂದು ಅವರಿಗೆ ಕಲಿಸಬೇಕು. ಯಾವುದೇ ಹಣಕಾಸಿನ ಪರಿಸ್ಥಿತಿಯಲ್ಲಿ, ಶಾಂತವಾಗಿರಲು ಮತ್ತು ಅವರ ಆರ್ಥಿಕ ಗುರಿಯತ್ತ ಎದುರುನೋಡಲು ಅವರಿಗೆ ಕಲಿಸಿ. ಇದು ಮಕ್ಕಳಲ್ಲಿ ಉತ್ತಮ ಆರ್ಥಿಕ ಅಭ್ಯಾಸಗಳನ್ನು ಬಲಪಡಿಸುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತದೆ.

ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿ

9 ರಿಂದ 5 ಉದ್ಯೋಗಗಳನ್ನು ಮಾಡಲು ಮಕ್ಕಳನ್ನು ಸಿದ್ಧಪಡಿಸುವ ಬದಲು, ಪೋಷಕರು ಉದ್ಯಮಶೀಲತಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸಬೇಕು. ಇದು ಯುವ ವಯಸ್ಕರಲ್ಲಿ ಉಪಕ್ರಮದ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ.

Source : https://kannada.news18.com/news/business/teach-kids-money-management-lessons-from-a-young-age-here-s-how-to-get-started-stg-pjl-1682649.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *