
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಮಾ,19 : ಚಿತ್ರದುರ್ಗ ನಗರದ ಗಮಕ ಕಲಾಭಿಮಾನಿಗಳ ಸಂಘವು ನಡೆಸುತ್ತಿರುವ ಮಾಸಿಕ ಗಮಕ ವಾಚನ-ವ್ಯಾಖ್ಯಾನ ಸಂಭ್ರಮದ 20ನೇ ಕಾರ್ಯಕ್ರಮವು ಇದೇ ತಿಂಗಳ 22/3/2025, ಶನಿವಾರ ಸಂಜೆ 6 ಗಂಟೆಗೆ ನಗರದ ಜೆ.ಸಿ.ಆರ್ ಬಡಾವಣೆಯ ಶ್ರೀ ಗಣಪತಿ
ದೇವಾಲಯದ ಆವರಣದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ‘ಕುಮಾರ ವ್ಯಾಸ ಭಾರತದ ಉದ್ಯೋಗ ಪರ್ವದ ವಿಶ್ವರೂಪ ದರ್ಶನ ಕಥಾ ಪ್ರಸಂಗ’ವನ್ನು ಅಧ್ಯಾಪಕರಾದ
ಬೆಂಗಳೂರಿನ ಶ್ರೀಮತಿ ಸುಮಾ ಜಯಸಿಂಹ ವಾಚನ ಮಾಡಲಿದ್ದು, ಬೆಂಗಳೂರಿನ ಇಸ್ರೋದ ವಿಜ್ಞಾನಿಗಳಾದ ಜಯಸಿಂಹ ಇವರು
ವ್ಯಾಖ್ಯಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಾ ಪೋಷಕರಾದ ಶ್ರೀಕಾಂತ್ ಭಾಗವಹಿಸಲಿದ್ದಾರೆ.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಬೇಕೆಂದು ಗಮಕ ಕಲಾಭಿಮಾನಿಗಳ ಸಂಘ ಹಾಗೂ ಜೆ.ಸಿ.ಆರ್. ಗಣಪತಿ ದೇವಾಲಯ ಸಮಿತಿಯವರು
ಕೋರಿದ್ದಾರೆ.