![](https://samagrasuddi.co.in/wp-content/uploads/2024/12/IMG-20241230-WA0020-225x300.jpg)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ,ಡಿ,30 ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘವು ತನ್ನ 40ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ 17ನೇ ಕಾರ್ಯಕ್ರಮದ ಅಂಗವಾಗಿ ದೇವಿ ಭಾಗವತದ ಚಂಡ ಮುಂಡರ ಪ್ರಸಂಗದ ವಾಚನ ವ್ಯಾಖ್ಯಾನವನ್ನು ಇಲ್ಲಿನ ಜೆಸಿಆರ್ ಬಡಾವಣೆಯ ಗಣಪತಿ
ದೇವಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಹುರುಳಿ ಎಂ. ಬಸವರಾಜ್ ಗ್ರಾಮೀಣ ಗಾಯಕ ಕಲಾ ಪ್ರತಿಭೆ
ಮಲ್ಲಾಪುರ ಗೊಲ್ಲರಟ್ಟಿಯ ಸಿ. ವೀರಣ್ಣ ವಾಚನಕ್ಕೆ ವಿದ್ಯುತ್ ಪೂರ್ಣ ವ್ಯಾಖ್ಯಾನ ನೀಡಿದರು. ಒಟ್ಟಿನಲ್ಲಿ ಒಂದು ಪ್ರಸಂಗದ ಹೆಸರಲ್ಲಿ
ಕವಿ ಚಿದಾನಂದ ಅವಧೂತರ ದೇವಿ ಭಾಗವತದ ಸಮಗ್ರ ಸ್ವರೂಪವನ್ನು ಶ್ರೋತೃಗಳ ಮುಂದೆ ಮಂಡಿಸಿದ ಪರಿ ವಿಶೇಷವಾಗಿತ್ತು.
ಶ್ರೀ ವಾರಿ ಭಜನಾ ಮಂಡಳಿಯ ಅಧ್ಯಕ್ಷಣಿ ಸತ್ಯಪ್ರಭಾ ವಸಂತಕುಮಾರ್ ತಮ್ಮ ಭಾಷಣದಲ್ಲಿ ಚಿತ್ರದುರ್ಗದ ಗಮಕ
ಕಲಾಭಿಮಾನಿಗಳ ಸಂಘದ ಕಾರ್ಯವನ್ನು ಶ್ಲಾಘಿಸಿ ತಮ್ಮ ಸಂಘದಲ್ಲಿ ಈಚೆಗೆ ನಡೆಯುತ್ತಿರುವ ಪ್ರಾರ್ಥನಾ ನಿವೇದನೆಯಲ್ಲಿ ಗಮಕ
ಕಲೆಯನ್ನು ಅಳವಡಿಸಿಕೊಳ್ಳುತ್ತಿರುವುದಾಗಿ ಹೇಳಿದರು.
ಗಮಕ ಕಲಾಭಿಮಾನಿಗಳ ಸಂಘದ ಅಧ್ಯಕ್ಷಣಿ ಕೆ.ಆರ್ .ರಮದೇವಿ ವೆಂಕಣ್ಣಾಚಾರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಗಮಕಲೆಯನ್ನು
ಉಳಿಸಿ ಬೆಳೆಸಲು ನಿರಂತರ ಪ್ರಯತ್ನ ನಡೆಸಿರುವುದಾಗಿಯೂ, ಕಲಾಭಿಮಾನಿಗಳು ಅತಿಶಯವಾದ ಸಹಕಾರ ನೀಡಿ ಸಹಾಯ
ಮಾಡಬೇಕೆಂದು ಹೇಳಿದರು.
ದೇವಸ್ಥಾನದ ಮಾರುತಿ ಭಜನಾ ಮಂಡಳಿಯವರ ಗಮಕ ಪ್ರಾರ್ಥನೆಯೊಂದಿಗೆ ಶ್ರೀ ಗೌರಿ ಎಂಬ ಬಸಪ್ಪ ಶಾಸ್ತ್ರಿ ವಿರಚಿತ ದೇವಿ
ಪ್ರಾರ್ಥನೆಯಾಯಿತು. ಸಂಘದ ನಿರ್ದೇಶಕಿ ಬಿ .ಎಲ್. ಉಮಾ ಸ್ವಾಗತಿಸಿದರು. ಸಭೆಯಲ್ಲಿ ಜಿ .ಆರ್ .ಕೃಷ್ಣಮೂರ್ತಿ, ಕೆ.
ವೆಂಕಣ್ಣಾಚಾರ್, ಅಮೆರಿಕ ಕನ್ನಡ ಸಂಘಗಳ ಪ್ರಮುಖ ಕಾರ್ಯಕರ್ತರಾದ ಜಿ.ಕೆ .ಸತೀಶ್, ಗಣಪತಿ ದೇವಸ್ಥಾನ ಸಮಿತಿಯ
ಪ್ರೊ.ಹರೀಶ್,ಚಿದಾನಂದಪ್ಪ ಮೊದಲಾದವರು ಹಾಜರಿದ್ದರು. ಕಾರ್ಯಕರ್ತರಾದ ಶಶಿಧರ್ ಶ್ಯಾನುಭೋಗ್ ಕಾರ್ಯಕ್ರಮ
ನಿರ್ವಾಹಣೆ ಮಾಡಿದರು.
ಸಮಾರಂಭದ ಅಂಗವಾಗಿ ವಾಚಕಕಾರ ಸಿ .ವೀರಣ್ಣ ಅವರನ್ನು ವ್ಯಾಖ್ಯಾನಕಾರ ಹುರುಳಿ ಬಸವರಾಜ ಹಾಗೂ
ಸತ್ಯಪ್ರಭಾವಸಂತಕುಮಾರ್ ಅವರನ್ನು ಸಂಘದ ಪರವಾಗಿ ನಿರ್ದೇಶಕರಾದ ಲಕ್ಷ್ಮಿ ವಾಸುದೇವ ಶ್ರೇಷ್ಠಿ, ಅನಂತ ಕೃಷ್ಣ, ಮೀನಾಕ್ಷಿ
ಭಟ್ ಅವರುಗಳು ಸನ್ಮಾನಿಸಿ ಗೌರವಿಸಿದರು.