ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮೇ: ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘವು ತನ್ನ 40ನೇ ವಾರ್ಷಿಕೋತ್ಸವದ ಅಂಗವಾಗಿ 21ನೇ ಕಾರ್ಯಕ್ರಮ ಇತ್ತೀಚೆಗೆ ಚಿತ್ರದುರ್ಗದ ಜೆಸಿಆರ್ ಬಡಾವಣೆಯ ಗಣಪತಿ ದೇವಾಲಯದ ಆವರಣದಲ್ಲಿ ನಡೆಯಿತು.

ಲಕ್ಷ್ಮೀಶ ಮಹಾ ಕವಿಯ ಜೈಮಿನಿ ಭಾರತದ ಸೀತಾ ಪರಿತ್ಯಾಗ ಹಾಗೂ ಕುಶಲವ ಜನನ ಭಾಗದ ವಾಚನವನ್ನು ಚಿತ್ರದುರ್ಗದ ಖ್ಯಾತ ಗಮಕಿ ಚಂಪಕಾ ಶ್ರೀಧರ್ ಅವರ ಶಿಷ್ಯೆ ಇಂಜನಿಯರಿಂಗ್ ವಿದ್ಯಾರ್ಥಿನಿ ಸೃಷ್ಟಿ ಸೀತಾರಾಮ ಶಾಸ್ತ್ರಿ ಅವರು ಅರ್ಥಸ್ಪುರಿಸುವಂತೆ ಭಾವ ಪ್ರಚೋಧಕವಾಗಿ ವಾಚನ ಮಾಡಿದರು. ಸ್ಥಳೀಯ ಗಮಕ ಕಲಾಭಿಮಾನಿಗಳ ಸಂಘದ ಅಧ್ಯಕ್ಷೆ ಕೆ. ಆರ್. ರಮಾದೇವಿ ವೆಂಕಣ್ಣಾಚಾರ್ ತಮ್ಮ ವ್ಯಾಖ್ಯಾನದಲ್ಲಿ ಕವಿ ಲಕ್ಷ್ಮೀಶ ಜೀವನದ ಸ್ವಾರಸ್ಯ ಪ್ರಸಂಗಗಳು ಜೈಮಿನಿ ಭಾರತದ ವಿಶೇಷಗಳು ಶ್ರೀರಾಮಕತೆಯ ಸ್ವಾರಸ್ಯ ಪ್ರಸಂಗಗಳು ಪ್ರಜಾ ವಾತ್ಸಲ್ಯ, ರಾಮ ರಜಕನೊಬ್ಬನ ಟೀಕೆಯನ್ನು ಅನುಲಕ್ಷಿಸಿ ಸೀತಾಮಾತೆಯನ್ನು ಕಾಡಿಗಟ್ಟುವುದು, ಲಕ್ಷ್ಮಣ ಭ್ರಾತೃ ಪ್ರೇಮ, ಗರ್ಭಿಣಿ ಸೀತಾಮಾತೆಯನ್ನು ಋಷಿ ಪತ್ನಿಯರಿಗೆ ಬಾಗಿನ ಕೊಡುವ ವ್ಯಾಜದಲ್ಲಿ ಘೋರಾರಣ್ಯದಲ್ಲಿ ಬಿಟ್ಟು ಹೊರಡುವುದು. ಸೀತೆಯ ಆರ್ತಲಾಪ ಮಹಾ ಕರುನಾಳು ವಾಲ್ಮೀಕಿ ಮುನಿಯ ಆಗಮನ, ಸೀತೆಯನ್ನು ಸಾಂತ್ವನಗೊಳಿಸಿ ಆಶ್ರಮಕ್ಕೆ ಕರೆದೊಯ್ದು. ಅಲ್ಲಿ ಆಕೆಗೆ ಅವಳಿ ಮಕ್ಕಳಾಗುವುದು ವಾಲ್ಮೀಕಿ ಅವರಿಗೆ ಕುಶಲವರೆಂದು ನಾಮಕರಣ ಮಾಡುವುದು. ಈ ಎಲ್ಲಾ ಪ್ರಸಂಗಗಳನ್ನು ಸಮಯೋಚಿತವಾಗಿ ಉಪಕಥೆಗಳ ಸಹಿತ ವ್ಯಾಖ್ಯಾನಿಸಿದರು.
ಕಾರ್ಯಕ್ರಮದಲ್ಲಿ ಸವಿತಾ ದಿವಾಕರ್ ಪ್ರಾರ್ಥಿಸಿದರೆ ಬಿ.ಎಲ್ .ಉಮಾ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷೆ ಗಮಕಿ ಅನಂತಕೃಷ್ಣ ವಂದಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಜಿ.ಆರ್. ಕೃಷ್ಣಮೂರ್ತಿ, ಚಿದಾನಂದಪ್ಪ ,ಪ್ರೊ.ಹರೀಶ್ ,ಗಮಕಿ ಜಂಪಕಾ ಶ್ರೀಧರ್, ಬೆಳಗೆರೆ ಸೀತಾರಾಮ ಶಾಸ್ತ್ರಿ, ಶ್ರೀಮತಿ ಆಶಾ ಮಾರುತಿ ಭಜನಾ ಮಂಡಳಿಯ ಸದಸ್ಯರು, ಮೊದಲಾದ
ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಿದರು.
ಮುಂದಿನ ಮಾಸಿಕ ಗಮಕ ಕಾರ್ಯಕ್ರಮ 25-05.2025 ರಂದು ಮಾಸಿಕ ಗಮಕ ಸರಣಿ 22ನೇ ಕಾರ್ಯಕ್ರಮವು ಜೆಸಿಆರ್ ಗಣಪತಿ ದೇವಾಲಯದಲ್ಲಿ ನಡೆಯಲಿದೆ .ಕುಮಾರವ್ಯಾಸ ಭಾರತದ ” ಭೀಷ್ಮ ಗೆಲಿದನು “ವರ ಸುದರ್ಶನ ಎನ್ನುವ ಕಥಾ ವಾಚನವನ್ನು ಶ್ರೀಮತಿ ಅಂಶೂ ಅನಂತ್ ನಡೆಸಿದರೆ ,ಗಮಕಿ ಅನಂತ ಕೃಷ್ಣ ವ್ಯಾಖ್ಯಾನಿಸುವವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.
Views: 4