ಇನ್ಮೇಲೆ FASTag ಬದಲಿಗೆ GPS ಆಧಾರಿತ GNSS Toll ಸಂಗ್ರಹ , ಏನಿದು GNSS?  ಹಾಗೂ ಅದರ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ.

FASTag ಬದಲಿಗೆ ಹೊಸ GPS ಮಾದರಿಯ ಟೋಲ್ ಕಲೆಕ್ಷನ್ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೊಸ GNSS ವ್ಯವಸ್ಥೆ FASTag ಜೊತೆಗೆ ಕಾರ್ಯನಿರ್ವಹಿಸಲಿದ್ದು ಪ್ರಸ್ತುತ ಬಳಕೆದಾರರಿಗೆ ತಕ್ಷಣ ಬದಲಾಯಿಸಲು ಹೊತ್ತಾಯಗಳಿಲ್ಲ. GPS ಆಧಾರಿತ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS Toll) ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಆಯ್ದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅನುಷ್ಠಾನಗೊಳಿಸುವುದಾಗಿ ಘೋಷಿಸಿದರು ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಟೋಲ್ ಸಂಗ್ರಹ ವಿಧಾನಗಳನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ.

ಈ ಹೊಸ GNSS Toll ಎಂದರೇನು?

ಈ ಹೊಸ GPS ಆಧಾರಿತ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS Toll) ವ್ಯವಸ್ಥೆಯು ವಾಹನದ ಸ್ಥಳಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರಯಾಣಿಸಿದ ದೂರದ ಆಧಾರದ ಮೇಲೆ ಟೋಲ್‌ಗಳನ್ನು ಲೆಕ್ಕಹಾಕಲು ಉಪಗ್ರಹಗಳೊಂದಿಗೆ ಸಂವಹನ ನಡೆಸುವ ವರ್ಚುವಲ್ ಟೋಲ್ ಬೂತ್‌ಗಳನ್ನು ಬಳಸುತ್ತದೆ. ಈ ವಿಧಾನವು ಭೌತಿಕ ಟೋಲ್ ಬೂತ್‌ಗಳ ಅಗತ್ಯವನ್ನು ನಿವಾರಿಸುತ್ತದೆ. ಇದರ ಮುಖ್ಯ ಗುರಿ ಟೋಲ್ ಕಲೆಕ್ಷನ್ ಯಾವುದೇ ನಿಲುಗಡೆಗಳಿಲ್ಲದೆ ತಡೆರಹಿತ ಪ್ರಯಾಣವನ್ನು ಸುಗಮಗೊಳಿಸುತ್ತದೆ. ಇನ್ನು ಸರಳವಾಗಿ ಹೇಳುವುದಾದರೆ ವಾಹನದ ಸ್ಥಳಗಳನ್ನು ನಿಖರವಾಗಿ ನಿರ್ಧರಿಸಲು ಮತ್ತು ಅದಕ್ಕೆ ಅನುಗುಣವಾಗಿ ಟೋಲ್ ಶುಲ್ಕವನ್ನು ಲೆಕ್ಕಾಚಾರ ಮಾಡಲು ಉಪಗ್ರಹ ಸ್ಥಾನೀಕರಣವನ್ನು ಅವಲಂಬಿಸುವ ವರ್ಚುವಲ್ ಟೋಲ್ ಬೂತ್‌ ಆಗಿದೆ.

GNSS Toll ಹೇಗೆ ಕಾರ್ಯನಿರ್ವಹಿಸುತ್ತದೆ.

ಈ GNSS ವ್ಯವಸ್ಥೆಯು ವರ್ಚುವಲ್ ಟೋಲ್ ಬೂತ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವಾಹನಗಳ ಸ್ಥಳಗಳನ್ನು ಪತ್ತೆಹಚ್ಚಲು ಉಪಗ್ರಹಗಳೊಂದಿಗೆ ಸಂವಹನ ನಡೆಸುತ್ತದೆ. ಟ್ರ್ಯಾಕ್ ಮಾಡಿದ ಸ್ಥಳದ ಪ್ರಕಾರ ವಾಹನವು ಪ್ರಯಾಣಿಸಿದ ದೂರವನ್ನು ವಿಶ್ಲೇಷಿಸಲಾಗುತ್ತದೆ ಮತ್ತು ಟೋಲ್ ಅನ್ನು ಲೆಕ್ಕಹಾಕಲಾಗುತ್ತದೆ. ಅಲ್ಲದೆ ಸಂಭಾವ್ಯ ಪರ್ಯಾಯವನ್ನು ನೀಡುತ್ತದೆ ಅಥವಾ FASTag ನಂತಹ ಅಸ್ತಿತ್ವದಲ್ಲಿರುವ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ವಿಧಾನಗಳಿಗೆ ಪೂರಕವಾಗಿದೆ.

Leave a Reply

Your email address will not be published. Required fields are marked *