ಉತ್ತರಾಖಂಡದ ಧಾರ್ಚುಲಾದಲ್ಲಿ ಮೇಘಸ್ಫೋಟ : ಸೇತುವೆ ಮುರಿದು, ಅಪಾಯದಲ್ಲಿ ೨೦೦ಕ್ಕೂ ಅಧಿಕ ಮಂದಿ

Cloudburst In Uttarakhand:ಬಿಹಾರದಿಂದ ಕೇರಳದವರೆಗೆ ಚಂಡಮಾರುತವು ಅವಾಂತರ ಸೃಷ್ಟಿಸಿದೆ. ಆದರೆ ಈ ತೊಂದರೆ ಇಲ್ಲಿಗೆ ಮುಗಿಯುವುದಿಲ್ಲ, ಹವಾಮಾನ ಇಲಾಖೆ ಪ್ರಕಾರ ಮುಂದಿನ ಕೆಲವು ದಿನಗಳ ಕಾಲ ಏಳು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ.

Cloudburst In Uttarakhand : ಉತ್ತರಾಖಂಡದ ಧಾರ್ಚುಲಾದಲ್ಲಿ ಮೇಘಸ್ಫೋಟದಿಂದಾಗಿ ಭಾರೀ ಅವಘಡ ಸಂಭವಿಸಿದೆ. ದರ್ಮಾ ಕಣಿವೆಯ ಚಾಲ್ ಗ್ರಾಮದಲ್ಲಿ ಮೇಘಸ್ಫೋಟದಿಂದಾಗಿ ಪಾದಚಾರಿ ಸೇತುವೆ ಮತ್ತು ಟ್ರಾಲಿ ಸಂಪೂರ್ಣ ಹಾನಿಗೊಳಗಾಗಿದೆ.  ಗ್ರಾಮದಲ್ಲಿ 200ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದಾರೆ. ಎಸ್‌ಡಿಆರ್‌ಎಫ್ ಮತ್ತು ಸ್ಥಳೀಯ ಪೊಲೀಸರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ದೋಬಾತ್‌ನಲ್ಲಿ ರಸ್ತೆ ಮುಚ್ಚಿರುವುದರಿಂದ, ರಕ್ಷಣೆಗೆ ತೆರಳುತ್ತಿರುವ ತಂಡವೂ ಕೂಡಾ ಸ್ಥಳಕ್ಕೆ ತಲುಪುವುದು ಸಾಧ್ಯವಾಗುತ್ತಿಲ್ಲ. ಬದರಿನಾಥದಲ್ಲಿ ಇಂದು ಮತ್ತೆ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಚೀಂಕಾ ಬಳಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಹಲವು ಪ್ರಯಾಣಿಕರು ಪರದಾಡುವಂತಾಯಿತು. ಸಂಚಾರ ಸ್ಥಗಿತಗೊಂಡಿದೆ.

ಮಳೆ ತಂದ ಆಪತ್ತು : 
ಬಿಹಾರದಿಂದ ಕೇರಳದವರೆಗೆ ಚಂಡಮಾರುತವು ಅವಾಂತರ ಸೃಷ್ಟಿಸಿದೆ. ಆದರೆ ಈ ತೊಂದರೆ ಇಲ್ಲಿಗೆ ಮುಗಿಯುವುದಿಲ್ಲ, ಹವಾಮಾನ ಇಲಾಖೆ ಪ್ರಕಾರ ಮುಂದಿನ ಕೆಲವು ದಿನಗಳ ಕಾಲ ಏಳು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ. ಎಂದರೆ ಈ ರಾಜ್ಯಗಳ ಜನರು ಪ್ರವಾಹ ಪರಿಸ್ಥಿತಿಗೆ ಸಿದ್ದರಿರಬೇಕು.  

ಹವಾಮಾನ ಇಲಾಖೆ  ನೀಡಿದೆ ಎಚ್ಚರಿಕೆ :
ಮುಂದಿನ ದಿನಗಳಲ್ಲಿ ದೇಶದ ಏಳು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಭಾರೀ ಮಳೆಯ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ತೊಂದರೆ ತಲೆದೋರಲಿದೆ. ಹಿಮಾಚಲ ಪ್ರದೇಶದಿಂದ ರಾಜಸ್ಥಾನ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಕೇರಳ, ಉತ್ತರಾಖಂಡದವರೆಗೆ ಮುಂಬರುವ ಗಂಟೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. 

ಮಳೆಯಿಂದಾಗಿ ಶಾಲೆಗಳಿಗೆ ರಜೆ : 
ಕೇರಳದಲ್ಲಿಯೂ ಮಳೆ ಬಿಡುವು ನೀಡುತ್ತಿಲ. ಕೇರಳದ ಕೋಝಿಕ್ಕೋಡ್ ನಲ್ಲಿ ಭಾರೀ ಮಳೆಯಿಂದಾಗಿ ಜನರೂ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ನಗರ ಪ್ರದೇಶಗಳಲ್ಲದೇ ಗ್ರಾಮೀಣ ಪ್ರದೇಶದ ರಸ್ತೆಗಳು ತುಂಬಿ ತುಳುಕುತ್ತಿರುವ ದೃಶ್ಯ ಕಂಡು ಬರುತ್ತಿದೆ. ಕೇರಳದ ಇಡುಕ್ಕಿ, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಭಾರೀ ಮಳೆಯ ಎಚ್ಚರಿಕೆಯಿಂದಾಗಿ ಕೇರಳದ 11 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

Source : https://zeenews.india.com/kannada/india/heavy-rain-likely-in-seven-dayd-in-these-states-cloud-burstin-uttarakhand-144055

Leave a Reply

Your email address will not be published. Required fields are marked *