ತಾಯಿ, ತಂದೆ ಈ ಇಬ್ಬರ ಪ್ರೀತಿಯಿಂದ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕಿದೆ: ಕೀಶೋರ್‍ರುಲ್‍ವಾಲ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜೂ. 02 ಮನೆಯಲ್ಲಿ ಮಕ್ಕಳಿಗೆ ತಾಯಿಯ ಪ್ರೀತಿಯೇ ಮೊದಲು, ತದ ನಂತರ ತಂದೆಯ ಪ್ರೀತಿ ತಾಯಿಯ ಪ್ರೀತಿ ಶೇ. 60 ರಷ್ಟಿದ್ದರೆ ತಂದೆಯ ಪ್ರೀತಿ ಶೇ, 40 ರಷ್ಟಿರುತ್ತದೆ, ಎಂದು ಭಾರತೀಯ ಜೈನ್ ಸಂಘದ ರಾಜ್ಯ ಮುಖಂಡರಾದ ಕೀಶೋರ್‍ರುಲ್‍ವಾಲ ತಿಳಿಸಿದರು.

ಚಿತ್ರದುರ್ಗ ನಗರದ ಭಾರತೀಯ ಜೈನ್ ಸಂಘದ ಚಿತ್ರದುರ್ಗ ಘಟಕದವತಿಯಿಂದ ಭಾನುವಾರ ಸಂಜೆ ನಗರದ ರೂಪಾವಾಣಿ ಚಿತ್ರಮಂದಿರ ರಸ್ತೆಯಲ್ಲಿನ ಜೈನ್ ಮಂದಿರದ ಪಕ್ಕದ ಜೈನ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾತೃತ್ವ ಮಾತೃ ವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಮನೆಯಲ್ಲಿ ಅಜ್ಜ-ಅಜ್ಜಿ ಇದ್ದವರೇ ಭಾಗ್ಯಶಾಲಿಗಳಾಗಿದ್ದಾರೆ. ಮನೆಯಲ್ಲಿ ಎಲ್ಲರ ಪ್ರೀತಿ, ವಿಶ್ವಾಸವನ್ನುಗಳಿಸುವುದರ ಮೂಲಕ ಮುಂದಿನ ಮಕ್ಕಳಾಗಿ ಬೆಳೆಯಬೇಕಿದೆ.

ಎಷ್ಟೇ ಮಕ್ಕಳಿಗೆ ತಂದೆ-ತಾಯಿಯ ಪ್ರೀತಿ ಸಿಗದೇ ಅನಾಥರಾಗಿದ್ದಾರೆ. ಈ ಸಮಯದಲ್ಲಿ ತಂದೆ-ತಾಯಿ ಇದ್ದವರೇ ಪುಣ್ಯವಂತರಾಗಿದ್ದಾರೆ. ಮನೆಯಲ್ಲಿ ತಾಯಿಯ ಪ್ರೀತಿ ಶೇ.60ರಷ್ಟಿದ್ದರೆ ತಂದೆಯ ಪ್ರೀತಿ ಶೇ, 40 ರಷ್ಟಿರುತ್ತದೆ ಎಂದರು. ಭಾರತವನ್ನು ಭಾರತಮಾತೆ ಎನ್ನುವ ಪರಿಪಾಠ ಇದೆ. ಎಲ್ಲಿ ಹೋದರು ಸಹಾ ಭಾರತ ಮಾತೆ ಎಂದು ಕರೆಯಲಾಗುತ್ತದೆ ಭಾರತವನ್ನು ಭಾರತ ಮಾತಾ ಎನ್ನುವುದಿಲ್ಲ, ಮಕ್ಕಳ ಪೋಷಣೆಯಲ್ಲಿ ತಾಯಿಯ ಪಾತ್ರ ಅತಿ ಹೆಚ್ಚಾಗಿದೆ. ಇದ್ದಲ್ಲದೆ ಕುಟುಂಬ ನಿರ್ವಹಣೆಯಲ್ಲಿಯೂ ಸಹಾ ತಂದೆ-ತಾಯಿಯ ಪಾತ್ರ ಮುಖ್ಯವಾಗಿದೆ. ತಾಯಿ ಇಲ್ಲದ ಕುಟುಂಬದಲ್ಲಿ ಮಕ್ಕಳ ನಿರ್ವಹಣೆ ತುಂಬಾ ಕಷ್ಠವಾಗುತ್ತದೆ. ನಮ್ಮ ಸೈನ್ಯದಲ್ಲಿ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಕೆಲಸ ಮಾಡುತ್ತಿದ್ದಾರೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ. ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಿದ ಪೋಷಕರ ನಿಜವಾಗಿಯೂ ಸಹಾ ಮಹಾನ್ ವ್ಯಕ್ತಿಗಳಾಗಿದ್ದಾರೆ ಮನೆಯಲ್ಲಿ ಒಂದು ಗಂಟೆ ತಡವಾಗಿ ಬಂದರೆ ಸಾಕು ತಾಯಿಯಂದಿರು ಅಂತಕಕ್ಕೆ ಒಳಗಾಗುತ್ತಾರೆ ಆದರೆ ತಮ್ಮ ಮಕ್ಕಳನ್ನು
ದೇಶವನ್ನು ಕಾಯಲು ಕಳುಹಿಸಿರುವ ಎಲ್ಲಾ ತಾಯಂದಿರು ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದು ಅವರ ಕಾರ್ಯವನ್ನು ಪ್ರಶಂಸಿದರು.

ಭಾರತೀಯ ಜೈನ್ ಸಂಘದ ಕಾರ್ಯದರ್ಶಿಗಳಾದ ಪ್ರಕಾಶ್ ಗುಲೇಚ ಮಾತನಾಡಿ, ನಮ್ಮ ಭಾರತೀಯ ಜೈನ್ ಸಂಘದವತಿಯಿಂದ 18 ರಿಂದ 25 ವರ್ಷದ ಒಳಗಿನ ಹೆಣ್ಣು ಮಕ್ಕಳಿಗಾಗಿ ಸ್ಮಾಟ್‍ಗರ್ಲ್ ಎಂಬ ವಿಶೇಷವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ತಮ್ಮ ಹೆಣ್ಣು ಮಕ್ಕಳನ್ನು ಕಳುಹಿಸುವುದರ ಮೂಲಕ ಅವರಲ್ಲಿ ಧೈರ್ಯ, ಮನೋವಿಕಾಸ, ನಾಯಕತ್ವ ಗುಣ, ಕಷ್ಟ ಕಾಲದಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಕಲೆ, ಸಮಾಜದಲ್ಲಿ ಬರುವಂತ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುವ ಬಗ್ಗೆ ತಿಳಿಸಿಕೊಡಲಾಗುವುದು. ಚಿತ್ರದುರ್ಗದಲ್ಲಿ ಜೂ.21-22ರಂದು ಈ ಕಾರ್ಯಕ್ರಮ ನಡೆಯಲಿದೆ ಇದರ ನೊಂದಾಣಿ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಭಾರತೀಯ ಜೈನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ವಿಕ್ರಾಂತ್‍ಜೈನ್ ಮಾತನಾಡಿ, ದೇಶದಲ್ಲಿ ಭಾರತೀಯ ಜೈನ್ ಸಂಘದ
ಮೂಲಕ ವಿವಿಧ ರೀತಿಯ ಜನಪರವಾದ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಜನರ ಆರೋಗ್ಯ, ಪರಿಸರ, ಶಿಕ್ಷಣದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಇದರ ಬಗ್ಗೆ ಕಾಳಜಿಯನ್ನು ವಹಿಸಲಾಗುತ್ತಿದೆ. ಇದೇ ರೀತಿ ಚಿತ್ರದುರ್ಗದಲ್ಲಿಯೂ ಸಹಾ ಹಲವಾರು ವರ್ಷಗಳಿಂದಲೂ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಚಿತ್ರದುರ್ಗದಲ್ಲಿ ಜೂ.21-22ರಂದು 18 ರಿಂದ 25 ವರ್ಷದ ಒಳಗಿನ ಹೆಣ್ಣು ಮಕ್ಕಳಿಗಾಗಿ ಸ್ಮಾಟ್‍ಗರ್ಲ್ ಎಂಬ ವಿಶೇಷವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಇದರ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು.

ಸಮಾರಂಭದಲ್ಲಿ ಟ್ರಸ್ಟಿಗಳಾದ ವಸ್ತಿಮಲ್‍ಜೀ,ಪುಷಬ್ ರಾಜ್ ಭಾಘ್ನಾ, ವಿಪುಲ್ ಜೈನ್, ವಿನೋದ್, ಭಾರತೀಯ ಜೈನ್ ಸಂಘದ
ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಷಾ ಭಾಗವಹಿಸಿದ್ದರು. ಪ್ರಾರ್ಥನೆಯನ್ನು ರೇಖಾ, ರಿಂಕಲ್ ಕನಷ್ಷನ್, ಸರೋಜ್ ಮಾಡಿದರು. ನಿರೂಪಣೆಯನ್ನು ಸವಿತಾ ಅನಿತಾ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ದೇಶದ ಸೇನೆಯಲ್ಲಿ ವಿವಿಧ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಭಗತ್ ಸಿಂಗ್‍ನ ಪೋಷಕರಾದ ಕಮಲಮ್ಮ ತಿಪ್ಪೇಸ್ವಾಮಿ, ರಮೇಶ್‍ನ ಪೋಷಕರಾದ ಶಿವಮ್ಮ ಜಯಪ್ಪ, ಗುರುಮೂರ್ತಿ ಪೋಷಕರಾದ ರತ್ನಮ್ಮ ತಿಪ್ಪೇಸ್ವಾಮಿಯವರನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳು ದೇಶಕ್ಕೆ ಸಂಬಂಧಿಸಿದ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *