Mothers Day 2024: ಅಮ್ಮಂದಿರ ದಿನದಂದು ನಿಮ್ಮ ತಾಯಿಗೆ, ಹೀಗೆ ಶುಭಾಶಯ ಕೋರಿ, ಮದರ್ಸ್‌ ಡೇಯನ್ನು ವಿಶೇಷವನ್ನಾಗಿಸಿ.

Day Special: ಅಮ್ಮಂದಿರ ದಿನದಂದು ತಾಯಿಗೆ ವಿಶೇಷವಾಗಿ ಶುಭಾಶಯ ಕೋರಬೇಕು ಎಂದುಕೊಂಡಿದ್ದರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು. ಮೇ 12ರಂದು ನಿಮ್ಮ ತಾಯಿಗೆ ಈ ರೀತಿ ವಿಶ್‌ ಮಾಡಿ, ತಾಯಂದಿರ ದಿನವನ್ನು ವಿಶೇಷವನ್ನಾಗಿಸಿ.

ಕಣ್ಣಿಗೆ ಕಾಣುವ ದೇವತೆಯಾದ ಅಮ್ಮನನ್ನು ವರ್ಣಿಸಲು ಪದಗಳೇ ಸಾಲದು. ಅಮ್ಮ ಎನ್ನುವ ಅಕ್ಷರಕ್ಕೆಕ್ಕೆ ಎಲ್ಲಾ ನೋವನ್ನು ಮರೆಸುವ ಶಕ್ತಿಯಿದೆ. ಅಮ್ಮನಿಗಾಗಿಯೇ ಮೀಸಲಾಗಿರುವ ಅಮ್ಮಂದಿರ ದಿನವನ್ನು ವಿಭಿನ್ನವಾಗಿ ಆಚರಿಸಲು ಈಗಾಗಲೇ ಪ್ಲಾನ್ ಮಾಡಿಕೊಂಡಿದ್ದಾರೆ. ಆದರೆ ಕೆಲವೊಮ್ಮೆ ದೂರದಲ್ಲಿರುವ ಮಕ್ಕಳಿಗೆ ಸೆಲೆಬ್ರೇಟ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾದರೆ ಈ ರೀತಿಯಾಗಿ ಅಮ್ಮಂದಿರ ದಿನವನ್ನು ಆಚರಿಸಬಹುದಾಗಿದೆ.

ಅಮ್ಮ ಎಂದರೆ ಏನೋ ಹರುಷವೋ ನನ್ನ ಪಾಲಿಗೆ ಅವಳೇ ದೈವವು, ಅಮ್ಮ ಅಂದರೇನೇ ಹಾಗೆ ನೋವನ್ನು ಮರೆಸುತ ಸದಾ ಕಾಳಜಿಯನ್ನು ಬಯಸುವ ಜೀವ. ವಿಶ್ವದಾದ್ಯಂತ ತಾಯಂದಿರ ದಿನವನ್ನು ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರ ಆಚರಿಸಲಾಗುತ್ತದೆ. ಈ ಬಾರಿ ಮೇ 12 ರಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತಿದ್ದು, ಒಂದು ವೇಳೆ ದೂರವಿದ್ದರೆ ಅಮ್ಮಂದಿರ ದಿನವನ್ನು ಈ ರೀತಿಯಾಗಿ ಸೆಲೆಬ್ರೇಟ್ ಮಾಡಿ ಅಮ್ಮನ ಮೊಗದಲ್ಲಿ ನಗು ಮೂಡಿಸಬಹುದು.

ತಾಯಿ ಎಂದರೆ ಮಮತೆಯ ಆಗರ, ತಾಯಿ ಎಂದರೆ ಕರುಣೆಯ ಕಡಲು, ತಾಯಿ ಎಂದರೆ ಪ್ರೀತಿಯ ಸೆಲೆ… ಹೀಗೆ ತಾಯಿಯ ಬಗ್ಗೆ ಹೇಳುತ್ತಾ ಹೊರಟರೆ ಪದಗಳೇ ಸಾಲುವುದಿಲ್ಲ. ತಾಯಿಯ ಅನನ್ಯ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ. ಜಗತ್ತಿನ ಸರ್ವ ಶ್ರೇಷ್ಠ ವ್ಯಕ್ತಿಯಾದ ಅಮ್ಮನಿಗೆಂದೇ ಒಂದು ವಿಶೇಷ ದಿನವನ್ನು ಮೀಸಲಿಡಲಾಗಿದೆ. ಅದುವೇ ಮೇ ತಿಂಗಳ ಎರಡನೇ ಭಾನುವಾರ. ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ. ಮದರ್ಸ್‌ ಡೇ ಅಥವಾ ಅಮ್ಮಂದಿರ ದಿನ ಎನ್ನುವುದು ನಮ್ಮ ಜೀವನದಲ್ಲಿ ತಾಯಿಯ ಪಾತ್ರ ವಹಿಸಿದ್ದ ಅಜ್ಜಿ, ದೊಡ್ಡಮ್ಮ, ಚಿಕ್ಕಮ್ಮ, ಅಕ್ಕ ಹೀಗೆ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವ, ವಿಶೇಷ ಉಡುಗೊರೆ ನೀಡಿ ಅವರ ಸಂಭ್ರಮಕ್ಕೆ ಕಾರಣವಾಗುವ ದಿನವಾಗಿದೆ. ಪ್ರತಿದಿನ ಮಕ್ಕಳ ಏಳ್ಗೆಗಾಗಿ ದುಡಿಯುವ ತಾಯಿಗೆ ಈ ದಿನ ವಿಶೇಷ. ಅಮೆರಿಕದಲ್ಲಿ ಮೊದಲ ಬಾರಿಗೆ ಸಾಮಾಜಿಕ ಕಾರ್ಯಕರ್ತೆ ಅನ್ನಾ ಜರ್ವೀಸ್‌ ಎನ್ನುವವರು ಅಮ್ಮಂದಿರ ದಿನಾಚರಣೆಗೆ ಕರೆ ನೀಡುತ್ತಾರೆ. 1907ರಲ್ಲಿ ಮೊದಲ ಬಾರಿಗೆ ಅಮ್ಮಂದಿರ ದಿನವನ್ನು ಆಚರಿಸಲಾಯಿತು.

ಈ ವರ್ಷ ಮೇ 12 ರಂದು ಅಮ್ಮಂದಿರ ದಿನಾಚರಣೆ ಇದೆ. ಈ ವರ್ಷದ ತಾಯಂದಿರ ದಿನವನ್ನು ವಿಶೇಷವಾಗಿ ಆಚರಿಸಬೇಕು, ನಿಮ್ಮ ತಾಯಿಗೆ ವಿಶೇಷವಾಗಿ ವಿಶ್‌ ಮಾಡಬೇಕು ಅಂತಿದ್ರೆ ಇಲ್ಲಿದೆ ಒಂದಿಷ್ಟು ಐಡಿಯಾಗಳು.

ಅಮ್ಮಂದಿರ ದಿನದಂದು ಹೀಗೆ ವಿಶ್‌ ಮಾಡಿ.

* ಪತ್ರ ಬರೆಯಿರಿ : ಅಮ್ಮನ ಜೊತೆಯಲ್ಲಿ ದಿನವನ್ನು ಆಚರಿಸಲು ಸಾಧ್ಯವಿಲ್ಲ ಎಂದಾದರೆ ಅಮ್ಮನಿಗಾಗಿ ಒಂದು ಪತ್ರ ಬರೆಯಿರಿ. ಈ ಪತ್ರದಲ್ಲಿ ಅಮ್ಮನಿಗೆ ಹೇಳಬೇಕಾದ ವಿಚಾರವನ್ನು ತಿಳಿಸಿ ಬಿಡಿ. ಅದಲ್ಲದೇ ಕ್ಷಮೆ ಕೇಳಬೇಕೆಂದಿದ್ದರೆ ಅದನ್ನು ಕೂಡ ಉಲ್ಲೇಖಿಸಬಹುದು. ಪ್ರೀತಿಯನ್ನು ವ್ಯಕ್ತಪಡಿಸಲು ಇದೊಂದು ಒಳ್ಳೆಯ ಮಾರ್ಗವಾಗಿದ್ದು, ಈ ಪತ್ರವನ್ನು ಓದಿದ ಬಳಿಕ ನಿಮ್ಮ ತಾಯಿಯು ಖಂಡಿತವಾಗಿ ಖುಷಿ ಪಡುತ್ತಾರೆ.

* ಉಡುಗೊರೆಯನ್ನು ಕಳುಹಿಸಿಕೊಡಿ : ನಿಮ್ಮ ಅಮ್ಮನಿಗೆ ಏನು ಇಷ್ಟ ಎನ್ನುವುದು ಮಕ್ಕಳಾದ ನಿಮಗೆ ಗೊತ್ತಿರುತ್ತದೆ. ಈ ದಿನದಂದು ನಿಮಗೆ ಬರಲು ಸಾಧ್ಯವಾಗದೇ ಹೋದರೆ ಉಡುಗೊರೆಯನ್ನು ಕಳುಹಿಸಿ ಕೊಡಬಹುದು. ಇಲ್ಲವಾದರೆ ನಿಮ್ಮ ಅಪ್ಪನ ಬಳಿ ಸೆಲೆಬ್ರೇಶನ್ ಹೇಗೆ ಮಾಡಬೇಕು ಎನ್ನುವ ಐಡಿಯಾವನ್ನು ಕೊಡಿ. ಈ ಮೂಲಕ ಅಮ್ಮಂದಿರ ದಿನವನ್ನು ಅಮ್ಮನನ್ನು ಖುಷಿಯಾಗಿರಿಸಿಕೊಳ್ಳಬಹುದು.

* ವಿಡಿಯೋ ಕಾಲ್‌ ನಲ್ಲಿ ಮಾತನಾಡಿ : ಅಮ್ಮನಿಂದ ದೂರವಿರುವವರು ಈ ತಾಯಂದಿರ ದಿನದಂದು ಅವಳ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಬಹುದು. ಈ ಮೂಲಕ ಪ್ರೀತಿಯ ಅಮ್ಮನಿಗೆ ಶುಭಾಶಯಗಳನ್ನು ಕೋರಬಹುದು. * ಸರ್ಪ್ರೈಸ್ ಆಗಿ ಮನೆಗೆ ಬನ್ನಿ : ನೀವು ಸರ್ಪ್ರೈಸ್ ಆಗಿ ಮನೆಗೆ ಬಂದರೆ ಅಮ್ಮ ಖಂಡಿತವಾಗಿಯೂ ಖುಷಿಯಾಗುತ್ತಾಳೆ. ಹೀಗಾಗಿ ನೀವು ಹೇಳದೇನೇ ಈ ದಿನದಂದು ಮನೆಗೆ ಬಂದರೆ ಆಕೆಯ ಖುಷಿಗೆ ಪಾರವೇ ಇರುವುದಿಲ್ಲ. ನಿಮ್ಮ ಈ ಸರ್ಪ್ರೈಸ್ ಭೇಟಿಯು ಆಕೆಗೆ ಸಂತೋಷವನ್ನು ಮತ್ತಷ್ಟು ಹೆಚ್ಚಿಸುತ್ತದೆ.

* ಅಮ್ಮ, ನಿಮ್ಮ ತಾಳ್ಮೆ-ಮಮಕಾರಕ್ಕೆ ಸಾಟಿಯಿಲ್ಲ. ನಿಮ್ಮ ಆಶೀರ್ವಾದದೊಂದಿಗೆ ನಿಮ್ಮ ಕುಟುಂಬ ಶ್ರೇಯಸ್ಸಿನೊಂದಿಗೆ ಮುನ್ನೆಡೆಯುತ್ತಿದೆ. ನಿಮ್ಮ ಪ್ರೀತಿ-ಕಾಳಜಿಯ ಕೊರತೆ ನಮಗೆಂದೂ ಕಾಡದಿರಲಿ. ತಾಯಂದಿರ ದಿನದ ಶುಭಾಶಯಗಳು ಅಮ್ಮ.

* ನಿನ್ನಷ್ಟು ಕಾಳಜಿ, ಪ್ರೀತಿ ತೋರುವ ತಾಯಿಯನ್ನು ಪಡೆದ ನಾನೇ ಧನ್ಯ. ಇದು ನನ್ನ ಅದೃಷ್ಟ. ನಿನಗೆ ವಿಶೇಷವಾಗಿ ಗೌರವ ತೋರುವ ದಿನವಿದು. ಜಗತ್ತಿನ ಮೋಸ್ಟ್‌ ಬೆಸ್ಟ್‌ ಮದರ್‌, ನಿನಗೆ ತಾಯಂದಿರ ದಿನದ ಶುಭಾಶಯ.

* ನನ್ನ ಬದುಕಿನ ಸೂಪರ್‌ ಸ್ಟಾರ್‌ ನೀನು. ನನ್ನೆಲ್ಲಾ ಸಮಸ್ಯೆಗಳಿಗೆ ಬೆಸ್ಟ್‌ ಸಲ್ಯೂಷನ್‌ ನೀನು. ನಿಮ್ಮ ಪ್ರೀತಿ, ತ್ಯಾಗವನ್ನು ಬಣ್ಣಿಸಲು ಇದಕ್ಕಿಂತ ಉತ್ತಮ ದಿನವಿಲ್ಲ. ಹ್ಯಾಪಿ ಮದರ್ಸ್‌ ಡೇ ಅಮ್ಮಾ.

* ನಮ್ಮಮ್ಮ… ಆಕೆ ಸುಂದರಿ, ಮಮತೆಯ ಕಡಲು, ಸ್ವಾಭಿಮಾನದ ಪ್ರತೀಕ. ನನ್ನ ಬದುಕಿನ ಸ್ಫೂರ್ತಿಯಾಗಿರುವ ನಿನಗೆ ತಾಯಂದಿರ ದಿನದ ಶುಭಾಶಯಗಳು.

* ಅಮ್ಮಾ, ನಾನು ನಿಮ್ಮ ಮಗ/ಮಗಳು ಎಂದು ಹೇಳಲು ಹೆಮ್ಮೆ ಪಡುತ್ತೇನೆ. ನೀನು ವಿಶ್ವದ ಬೆಸ್ಟ್‌ ಮದರ್‌. ಈ ಜೀವನ ನೀಡಿದ ನಿನಗಾಗಿ ನಾನು ಸದಾ ಕೃತಜ್ಞನಾಗಿರುತ್ತಾಳೆ/ಳಾಗಿರುತ್ತೇನೆ. ಅಮ್ಮಂದಿರ ದಿನದ ಶುಭಾಶಯ ನನ್ನಮ್ಮ.

* ಅಮ್ಮ ನೀನೊಂದು ಅದ್ಭುತ ಶಕ್ತಿ. ನಿಮ್ಮ ಪ್ರೀತಿ, ಕಾಳಜಿಗೆ ಈ ಜಗತ್ತಿನಲ್ಲಿ ಸರಿಸಾಟಿಯಿಲ್ಲ. ನನ್ನೊಲವಿನ ಮೊದಲ ಗೆಳತಿ ನೀನು. ಜಗತ್ತಿನ ಅತಿ ಸುಂದರ ದೇವತೆಗೆ ಹ್ಯಾಪಿ ಮದರ್ಸ್‌ ಡೇ.

* ಜಗತ್ತಿನ ಪರಿಶುದ್ಧ ಪ್ರೀತಿ ಎಲ್ಲಿದೆ ಎಂದು ಯಾವಾದ್ರೂ ಕೇಳಿದ್ರೆ ನಾನು ತೋರುವುದು ನಿನ್ನ ಮಡಿಲನ್ನ, ನಿನ್ನ ಮಡಿಲು ನನಗೆಂದಿಗೂ ಆಸರೆಯಾಗಿರಲಿ. ಲವ್‌ ಯು ಅಮ್ಮ, ಅಮ್ಮಂದಿರ ದಿನದ ಶುಭಾಶಯ ನಿನಗೆ.

* ಜಗತ್ತಿನ ನಡೆದಾಡುವ ಅದ್ಭುತ ನನ್ನಮ್ಮ. ಹ್ಯಾಪಿ ಮದರ್ಸ್‌ ಡೇ.

* ಬಿರುಗಾಳಿಗೆ ಸಿಕ್ಕು ಓಲಾಡುವ ಜೀವನೆಂಬ ದೋಣಿಗೆ ನಾವಿಕಳಾಗಿ ಮುನ್ನೆಡುವ ನೀನು ನನ್ನ ಬದುಕಿನ ದೇವತೆ ಅಮ್ಮ. ನೀನಿಲ್ಲದೇ ಈ ಬದುಕಿಲ್ಲ. ಬದುಕಿನ ಸರ್ವಸ್ವವೂ ಆದ ನಿನಗೆ ತಾಯಂದಿರ ದಿನದ ಶುಭಾಶಯ.

* ಸ್ವೀಕಾರ ಮನೋಭಾವ, ಶೌರ್ಯ, ಸಹಾನುಭೂತಿ, ಧೈರ್ಯ ಎಲ್ಲವನ್ನೂ ಕಲಿಸಿದ ಬದುಕಿನ ಬೆಸ್ಟ್‌ ಟೀಚರ್‌ ನನ್ನಮ್ಮ, ಅಮ್ಮಂದಿರ ದಿನದ ಶುಭಾಶಯಗಳು ಅಮ್ಮಾ, ಸದಾ ಖುಷಿಯಾಗಿರು.

* ಸದಾ ನನ್ನ ಪರವಾಗಿ ಇರುವುದಕ್ಕೆ, ನನ್ನ ಪಕ್ಕದಲ್ಲಿ ನಿಂತು ಬೆಂಬಲ ಸೂಚಿಸಿದ್ದಕ್ಕೆ, ಜಗತ್ತಿನಲ್ಲಿ ಯಾರೂ ಪ್ರೀತಿಸಿದಷ್ಟೂ ನನ್ನ ಪ್ರೀತಿಸಿದ್ದಕ್ಕೆ, ಯಾರೂ ತೋರದ ಕಾಳಜಿ ತೋರಿದ್ದಕ್ಕೆ ತುಂಬಾ ಥ್ಯಾಂಕ್ಸ್‌ ಅಮ್ಮ. ಹ್ಯಾಪಿ ಮದರ್ಸ್‌ ಡೇ ಟು ಯೂ.

ಈ ವರ್ಷ ಮೇ 12ರ ಅಮ್ಮಂದಿರ ದಿನಕ್ಕೆ ಹೀಗೆ ವಿಶೇಷವಾಗಿ ಶುಭಾಶಯ ಕೋರಿ, ಅಮ್ಮನನ್ನು ಖುಷಿ ಪಡಿಸಿ. ಅಮ್ಮನ ಪ್ರೀತಿ ತೋರುವ ಪ್ರೀತಿಪಾತ್ರರಿಗೂ ಹೀಗೆ ವಿಶ್‌ ಮಾಡಿ, ನಿಮ್ಮ ಜೀವನದಲ್ಲಿ ಅವರೆಷ್ಟು ಮುಖ್ಯರು ಎಂಬುದನ್ನು ತಿಳಿಸಿ.

Source: https://kannada.hindustantimes.com/lifestyle/mothers-day-2024-may-12th-best-wishes-images-messages-quotes-and-greetings-to-make-your-mom-feel-special-rst-181715323257973.html

Source: https://tv9kannada.com/lifestyle/mothers-day-2024-how-about-celebrating-mothers-day-with-mom-if-you-are-in-a-different-city-lifestyle-news-siu-830275.html

Leave a Reply

Your email address will not be published. Required fields are marked *