ವಿವಿ ಸಾಗರ ಜಲಾಶಯಕ್ಕೆ ಸಂಸದ ಹಾಗೂ ಮೈಸೂರು ಅರಸ ಯದುವೀರ್ ಕೃಷ್ಣದತ್ತ ಒಡೆಯರ್ ಬಾಗಿನ ಅರ್ಪಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 21: ಈ ಭಾಗದ ಜನರಿಗೂ, ಮೈಸೂರಿನ ಅರಮನೆಗೂ ಅವಿನಾಭಾವ ಸಂಬಂಧವಿದೆ ಈ ಭಾಗದ ಜನರಿಗೆ ನೀರು ಕೊಡುವ ದೃಷ್ಟಿಯಿಂದ ಈ ಡ್ಯಾಂ ನಿರ್ಮಾಣ ಅರಮನೆಗೆ ನಿಕಟವಾದ ಸಂಬಂಧ ಇರೋದ್ರಿಂದ ಇಂದು ಬಾಗಿನ ಅರ್ಪಣೆ ಮೂರನೇ ಬಾರಿ
ತುಂಬಿರೋದ್ರಿಂದ ಗಂಗೆ, ವರುಣನಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂಸದ ಯದುವೀರ್ ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಜಲಾಶಯ ಭರ್ತಿ ಹಿನ್ನೆಲೆ ಜಲಾಶಯಕ್ಕೆ ಸಂಸದ ಹಾಗೂ ಮೈಸೂರು
ಅರಸ ಯದುವೀರ್ ಕೃಷ್ಣದತ್ತ ಒಡೆಯರ್ ಬಾಗಿನ ಅರ್ಪಿಸಿ ವಿವಿಸಾಗರ ಜಲಾಶಯಕ್ಕೆ ವಿಶೇಷ ಪೂಜಾ ಕೈಂಕಾರ್ಯ ನೆರವೇರಿಸಿದ
ಬಳಿಕ ಮಾದ್ಯಮಗಳಿಗೆ ಮಾತನಾಡಿದ ಸಂಸದ ಯದುವೀರ್ ಕೃಷ್ಣರಾಜ ಒಡೆಯರ್ ತಾಯಿ ಕೆಂಪನಂಜಮ್ಮಣ್ಣಿ ನೆನಪಿಗಾಗಿ ಕಟ್ಟಿದ್ದ
ವಿವಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ಪೂರ್ಣಗೊಂಡಿದೆ ಇದೊಂದು
ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.

ವಿವಿ ಸಾಗರ ತುಂಬಿದ್ದು ಅತ್ಯಂತ ಸಂತಸದ ವಿಷಯ. ಈ ಜಿಲ್ಲೆಯ ಜನರಿಗೆ ವರ್ಷ ಪೂರ್ತಿ ನೀರು ಲಭ್ಯಕ್ಕೆ ನಿರ್ಮಾಣ ಮಾಡಿತ್ತು.
ಈವರೆಗೆ ಜಲಾಶಯ ಸಮಾಜಕ್ಕೆ ಲಾಭ ಆಗುತ್ತ ಬಂದಿದೆ. ಇದಕ್ಕೆ ನಮಗೆ ಮೊದಲಿಂದ ಸಂಬಂಧವಿದ್ದು ಬಾಗಿನ ಅರ್ಪಣೆ. ವರುಣ,
ಗಂಗಾ ತಾಯಿಗೆ ಎಷ್ಟು ಕೃತಜ್ಞತೆ ಕೊಟ್ಟರೂ ಸಾಲದು. ಬಾಗಿನ ಅರ್ಪಿಸುವ ಮೂಲಕ ನಮ್ಮ ವಂದನೆಗಳನ್ನ ಅರ್ಪಿಸುತ್ತೇವೆ
ಎಂದರು.

ಅಧಿಕಾರ ಇದ್ದಾಗ ಪ್ರಕ್ರಿಯೆ ಏನಿದೆ ಅದನ್ಮ ಅನುಸರಿಸುತ್ತಾ ಹೋಗುತ್ತಾರೆ. ನಮಗೆ ಹಿಂದೆಯೂ ವಿಶೇಷವಾಗಿ ನಮ್ಮನ್ನ
ಆಹ್ವಾನಿಸಿರಲಿಲ್ಲ. ಸ್ಥಳಿಯರು ನಮ್ಮನ್ನ ಆಹ್ವಾನ ಕೊಡುತ್ತಿದ್ದರು ಹಾಗೆ ಇವತ್ತು ನಡೆದಿದೆ.ಇದರಲ್ಲಿ ರಾಜಕೀಯ ಮಾಡುವ ಯಾವ
ಅವಶ್ಯಕತೆ ಇರುವುದಿಲ್ಲ.ಅಧಿಕಾರದಲ್ಲಿ ಇರುವವರೇ ಬಾಗಿನ ಅರ್ಪಿಸುವುದು.ಸಮಸ್ತ ಕನ್ನಡಿಗರು ಅವರಿಗೆ ಅಧಿಕಾರ ನೀಡಿ ಸ್ಥಾನಕ್ಕೆ
ಕೂರಿಸಿದ್ದಾರೆ.ದೇವರ ಕೃತಜ್ಞತೆ ಸಲ್ಲಿಸುವಲ್ಲಿ ನಮ್ಮ ಕಡೆಯಿಂದ ರಾಜಕೀಯ ಆಗಲ್ಲ ಎಂದು ಯದುವೀರ ತಿಳಿಸಿದರು.

ಪ್ರಾರಂಭದಲ್ಲಿ ವಿವಿ ಸಾಗರ ಜಲಾಶಯ ವಿವಿ ಪುರದಲ್ಲಿ ಸಂಸದ ಯದುವೀರ್ ಒಡೆಯರ್‍ಗೆ ಅದ್ದೂರಿ ಸ್ವಾಗತ ನೀಡಿ ಜೆಸಿಬಿಯ
ಮೂಲಕ ಹೂವಿನ್ನು ಚಲ್ಲಿ ಮಾಲಾರ್ಪಣೆ ಮಾಡಿ ಅಭಿಮಾನಿಗಳು ಸಂತಸಪಟ್ಟರುಸತತ ನೂರು ವರ್ಷಗಳಲ್ಲಿ ಮೂರನೇ ಬಾರಿಗೆ
ಕೋಡಿ ಬಿದ್ದಿರುವ ಹಿನ್ನಲೆಯಲ್ಲಿ ಯದುವೀರ್ ಒಡೆಯರ್ ಭಾಗಿನವನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಬಿಜೆಪಿ ಸ್ಥಳೀಯ ನಾಯಕರು
ಸಾಥ್ ನೀಡಿದರು.

ಬಿಜೆಪಿಯಲ್ಲಿ ಬಣ ರಾಜಕೀಯ ವಿಚಾರಕ್ಕೆ ಯದುವೀರ್ ಪ್ರತಿಕ್ರಿಯೆ ಸಂಸದರಾಗಿ ನನ್ನ ಚಟುವಟಿಕೆ ಮುಂದುವರೆಸುತ್ತಿದ್ದೇನೆ
ಮೇಲ್ಮಟ್ಟದಲ್ಲಿ ನಡೆಯುತ್ತಿರುವುದನ್ನ ಕಾರ್ಯಕರ್ತರಾಗಿ ಅನುಭವಿಸ್ತಿದ್ದೀವಿ ನಾವು ಆಚೆ ಬಂದ್ಮೇಲೆ ಒಗ್ಗಟ್ಟಿನ ಪ್ರದರ್ಶನ ಆಗಬೇಕಿದೆ
ಏನೇ ಸಮಸ್ಯೆ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗಬೇಕಿದೆ ಏನೇ ವ್ಯತ್ಯಾಸಗಳಿದ್ದರೂ ಅದನ್ನು ಪಕ್ಷದ ಒಳಗಡೆ ಬಗೆಹರಿಸಿ
ಮುಂದುವರೆಯಬೇಕಿದೆ ಎಲ್ಲಾ ಸಮಸ್ಯೆಗಳನ್ನು ಹೈಕಮಾಂಡ್ ಬಗೆಹರಿಸುವ ವಿಶ್ವಾಸವಿದೆ ಎಂದು ಯದುವೀರ ವಿಶ್ವಾಸವನ್ನು
ವ್ಯಕ್ತಪಡಿಸಿದರು.

ಬಿಜೆಪಿ ನಾಯಕರಿಂದ ವಿಜಯೇಂದ್ರ ಬದಲಾವಣೆ ಕೂಗು ವಿಚಾರ ಎಲ್ಲಾ ಪಕ್ಷದಲ್ಲಿಯೂ ಕುರ್ಚಿ ಗದ್ದಲ ನಡೆಯುತ್ತದೆ ಕುರ್ಚಿಗಳು
ಕಡಿಮೆ, ಆದ್ರೆ ಆಕಾಂಕ್ಷಿಗಳು ಜಾಸ್ತಿ ಇವೆ ಯಾರಿಗೆ ಸಾಮಥ್ರ್ಯ, ಯೋಗ್ಯತೆ ಇರುತ್ತೋ ಅವರು ಆ ಕುರ್ಚಿಗೆ ಬರ್ತಾರೆ ಸಮಸ್ತ ಜನರ
ಅದನ್ನ ತೀರ್ಮಾನ ಮಾಡ್ತಾರೆ ಭವಿಷ್ಯದಲ್ಲಿ ನಾವು ಅದನ್ನ ನೋಡ್ತೀವಿ ಅಧಿಕಾರದಲ್ಲಿ ಇರುವಾಗ ಏನಿರುತ್ತೆ ಅದೇ ಪ್ರಕ್ರಿಯೆ
ಮುಂದುವರೆಸ್ತಾರೆ ಹಿಂದೆಯೂ ಸಲ ನಮಗೆ ಆಹ್ವಾನ ಇರಲಿಲ್ಲ ಸ್ಥಳೀಯರು ಆಹ್ವಾನ ಮಾಡಿದ್ರು ಹಾಗಾಗಿ ನಾವು ಬಂದಿದ್ದೀವಿ ಅದ್ರಲ್ಲಿ
ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಅಧಿಕಾರದಲ್ಲಿ ಇರುವವರು ಬಾಗಿನ ಅರ್ಪಣೆ ಮಾಡ್ತಾರೆ ದೇವರಿಗೆ ಕೃತಜ್ಞತೆ ಸಲ್ಲಿಸುವ
ಕೆಲಸದಲ್ಲಿ ನಮ್ಮ ಕಡೆಯಿಂದ ರಾಜಕೀಯ ಆಗಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *