ಅಲೆಮಾರಿ ಜನಾಂಗದವರಿಗೆ ಬೆಡ್‍ಸಿಟ್ ಮತ್ತು ಅವರ ಮಕ್ಕಳಿಗೆ ಬ್ಯಾಗ್‍ನ್ನು ವಿತರಣೆ ಮಾಡಿ ಮಾತನಾಡಿದ: ಶ್ರೀ ಮಾದಾರ ಚನ್ನಯ್ಯ ಶ್ರೀಗಳು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 29 ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವುದರ ಮೂಲಕ ಸಮಾಜಕ್ಕೆ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ, ಇದಕ್ಕೆ ಸರ್ಕಾರ ಮತ್ತು ಮಠಗಳು ಸಹಾಯವನ್ನು ಮಾಡಲಿವೆ ಎಂದ ಮಾದಾರ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.


ಚಿತ್ರದುರ್ಗ ನಗರದ ಹೊರ ವಲಯದ ಕೇತೇಶ್ವರ ಮಠದ ಬಳಿ ಬಿಡು ಬಿಟ್ಟಿರುವ ಅಲೆಮಾರಿ ಜನಾಂಗದವರಿಗೆ ಬೆಡ್‍ಸಿಟ್ ಮತ್ತು ಅವರ
ಮಕ್ಕಳಿಗೆ ಬ್ಯಾಗ್‍ನ್ನು ವಿತರಣೆ ಮಾಡಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಶ್ರೀಮಂತರು ತಮ್ಮ ಹುಟ್ಟುಹಬ್ಬವನ್ನು
ಅದ್ದೂರಿಯಾಗಿ ಹೋಟೇಲ್ ಗಳಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ ಆದರೆ ದಾವಣಗೆರೆಯ ಮಾಜಿ ಸಚಿವರು, ಸಂಸದರು, ಬಿಜೆಪಿ
ಮುಖಂಡರಾದ ಜಿ.ಎಂ.ಸಿದ್ದೇಶ್ವರ ರವರ ಪುತ್ರರಾದ ಅನಿತ್‍ಕುಮಾರ್ ರವರ ತಮ್ಮ ಹುಟ್ಟುಹಬ್ಬದ ನಿಮಿತ್ತ ನಮ್ಮ ಮಠಕ್ಕೆ ಬಂದಾಗ
ನಿಮ್ಮಗಳ ಬಗ್ಗೆ ತಿಳಿಸಿ ಅವರು ಕಷ್ಟ ಕಾಲದಲ್ಲಿದ್ದಾರೆ ಅವರಿಗೆ ಸಹಾಯವನ್ನು ಮಾಡುವಂತೆ ಮನವಿ ಮಾಡಿದ್ದರ ಮೇರೆಗೆ ಇಂದು ನಿಮಗೆ
ಚಳಿಗೆÉ ಬೆಚ್ಚಗೆ ಇರಲು ಬೆಡ್‍ಸಿಟ್ ನಿಮ್ಮ ಮಕ್ಕಳ ಕಲಿಗೆ ಸಹಾಯವಾಗಲು ಶಾಲಾಬ್ಯಾಗ್‍ನ್ನು ವಿತರಣೆ ಮಾಡಿದ್ದಾರೆ. ಇದು ಉತ್ತಮವಾದ
ಕಾರ್ಯವಾಗಿದೆ ಎಂದರು.


ಸಂವಿಧಾನದಲ್ಲಿ ಎಲ್ಲರಿಗೂ ಸಹಾ ಸಮಾನಾವಾದ ಹಕ್ಕುಗಳನ್ನು ನೀಡಿದೆ ಇದನ್ನು ತಿಳಿಸದ ಹಲವಾರು ಜನಾಂಗದವರು ಅದರ
ಉಪಯೋಗವನ್ನು ಪಡೆಯುತ್ತಿದ್ದಾರೆ ಆದರೆ ಇನ್ನೂ ಹಲವಾರು ಜನಾಂಗದವರು ಇದರ ಬಗ್ಗೆ ತಿಳಿಯದೇ ಇರುವವರು ಹಕ್ಕುಗಳನ್ನು
ಪಡೆಯಲು ಸಾಧ್ಯವಾಗಿಲ್ಲ ಇಂತಹ ಸಮಾಜಗಳು ನಮ್ಮಲ್ಲಿ ಇವೆ ಇವರಿಗೆ ನಾವು ಧ್ವನಿಯಾಗಬೇಕಿದೆ, ಅವರಿಗೆ ಸಹಾಯವನ್ನು
ಮಾಡಬೇಕಿದೆ. ಇಂತಹ ಸಮಾಜದಲ್ಲಿ ಅಲೆವಾರಿ ಸಮಾಜವೂ ಒಂದಾಗಿದೆ ಇವರು ತಮ್ಮ ಬದುಕಿಗಾಗಿ ಅಲೆಯುತ್ತಾ ಹೋಗುತ್ತಾರೆ
ಒಂದು ಕಡೆಯಲ್ಲಿ ನಿಲ್ಲುವುದಿಲ್ಲ ಇವರಿಗೆ ನಿಲ್ಲಲು ಜಾಗ ಇಲ್ಲ ಬದುಕಿಗೆ ಆಸರೆ ಇಲ್ಲ ಇಂತಹರ ಜೀವನವನ್ನು ಪಾವನ ಮಾಡಬೇಕಿದೆ ಅದು
ನಮ್ಮ ಕೆಲಸವಾಗಬೇಕಿದೆ ಎಂದು ತಿಳಿಸಿದರು.


ಇಂದಿನ ದಿನದಲ್ಲಿ ಶ್ರೀಮಂತ ವರ್ಗದವರು ತಮ್ಮ ಹುಟ್ಟು ಹಬ್ಬಗಳನ್ನು ಬೇರೆ ಕಡೆಯಲ್ಲಿ ಆಚರೆಣೆ ಮಾಡುತ್ತಾರೆ ಆದರೆ
ಅನಿತ್‍ಕುಮಾರ್‍ರವರ ತಮ್ಮ ಹುಟ್ಟು ಹಬ್ಬದ ಅಂಗವಾಗಿ ನಿಮಗೆ ಸಹಾಯವನ್ನು ಮಾಡಲು ಬಂದಿದ್ದಾರೆ. ಇಥಹವರಿ ಇಂದಿನ ದಿನದಲ್ಲಿ
ಸಿಗುವುದು ವಿರಳ. ತಾವು ಬೇರೆಯವರಿಗೆ ದಾನವನ್ನು ಮಾಡಬೇಕು ಸಾದ್ಯವಾಗದಿದ್ದರೆ ಬೇರೆಯವರಿಂದ ದಾನವನ್ನು ಮಾಡಿಸುವ
ಗುಣವನ್ನು ಹೊಂದಿರಬೇಕಿದೆ. ನಿಮ್ಮಲ್ಲಿ ಬಹಳಷ್ಟು ಜನ ಶಿಕ್ಷಣವನ್ನು ಕಲಿತಿಲ್ಲ, ಆದರೆ ನಿಮ್ಮ ಮಕ್ಕಳು ಶಿಕ್ಷಣವನ್ನು ಕಲಿಯುವಂತ
ವಾತಾವರಣವನ್ನು ಕಲ್ಪಿಸಬೇಕಿದೆ ಸರ್ಕಾರಗಳು ಉಚಿತವಾದ ಶಿಕ್ಷಣವನ್ನು ನೀಡುತ್ತಿದ್ದಾರೆ.ಅದು ಆಗದಿದ್ದರೆ ಇಲ್ಲಿ ಮಠಗಳು ಇವೆ ಇಲ್ಲಿ
ತಮ್ಮ ಮಕ್ಕಳನ್ನು ಬಿಟ್ಟರೆ ನಾವು ಶಿಕ್ಷಣವನ್ನು ನೀಡುವುದಾಗಿ ಶ್ರೀಗಳು ಭರವಸೆಯನ್ನು ನೀಡಿದರು.


ಬಿಜೆಪಿ ಮುಖಂಡ ಅನಿತ್ ಕುಮಾರ್ ಮಾತನಾಡಿ, ಶ್ರೀಗಳು ನಮಗೆ ಇಲ್ಲಿನ ಜನತೆಗೆ ಸಹಾಯವನ್ನು ಮಾಡುವಂತೆ ಸೂಚನೆ ನೀಡಿದ್ದರ
ಮೇರೆ ನಾವುಗಳು ನಿಮಗೆ ಸಹಾಯವನ್ನು ಮಾಡಲಾಗುತ್ತಿದೆ, ಇಲ್ಲಿನ ಪರಿಸ್ಥಿತಿಯನ್ನು ನೋಡಿದರೆ ಮಳೆ, ಗಾಳಿ ಚಳಿಗೆ ನಿಮ್ಮ ಬದುಕು
ಅತಂತ್ರ ಸ್ಥಿತಿಯಲ್ಲಿದೆ. ಇದನ್ನು ಮನಗಂಡ ಶ್ರೀಗಳು ನಿಮಗೆ ಸಹಾಯ ಮಾಡಲು ಸೂಚಿಸಿದರು ಈ ಹಿನ್ನಲೆಯಲ್ಲಿ ನಾವು ನಮ್ಮ ಕೈಲಾದ
ಸಹಾಯವನ್ನು ಮಾಡಲಾಗುತ್ತಿದೆ. ನಿಮಗೆ ಜೀವನ ನಡೆಸಲು ಸರಿಯಾದ ವ್ಯವಸ್ಥೆ ಇಲ್ಲವಾಗಿದೆ ದೇಶದ ಪ್ರಧಾನ ಮಂತ್ರಿಗಳಾದ
ನರೇಂದ್ರ ಮೋದಿಯವರು ಇಂತಹ ಜನರಿಗಾಗಿ ವಿಶೇಷವಾದ ಯೋಜನೆಯನ್ನು ರೂಪಿಸಿವುದರ ಮೂಲಕ ಅವರ ಬದಕನ್ನು ಹಸನು
ಮಾಡಲು ಮುಂದಾಗಿದ್ದಾರೆ. ನಿಮ್ಮ ಮಕ್ಕಳು ಶಿಕ್ಷಣವನ್ನು ಪಡೆಯುವುದರ ಮೂಲಕ ಉತ್ತಮ ಪ್ರಜೆಗಳಾಗಿ ದೇಶದಲ್ಲಿ ಪ್ರಗತಿಯನ್ನು
ಸಾಧಿಸುವಂತಾಗಲಿ ಈಗ ನೀವುಗಳು ಗುಡಿಸಲಿನಲ್ಲಿ ಇದ್ದೀರಾ ಮುಂದೆ ನಿಮ್ಮ ಬದುಕು ಉತ್ತಮ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಿ
ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೇತೇಶ್ವರ ಮಠದ ಶ್ರೀಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *