ರೋಟರಿ ಸಂಸ್ಥೆಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚು : ಶ್ರೀಮತಿ ಮಾಧುರಿ ಮಧುಪ್ರಸಾದ್

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮಾ.28) :  ಮಾನವನಿಗೆ ಕಣ್ಣು ಅತಿ ಮುಖ್ಯವಾದ ಅಂಗವಾಗಿದೆ, ಇದರ ಸಂರಕ್ಷಣೆ ಅಗತ್ಯವಾಗಿದೆ. ಇದರ ಬಗ್ಗೆ ಕಾಳಜಿಯನ್ನು ವಹಿಸುವಂತೆ ರೋಟೇರಿಯನ್ ಮಾಜಿ ಅಧ್ಯಕ್ಷರಾದ ಎಸ್ ವೀರೇಶ್ ಕರೆ ನೀಡಿದರು.

ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಂಕರ್ ಕಣ್ಣಿನ ಆಸ್ಪತ್ರೆ,ಶಿವಮೊಗ್ಗ,  ಸಮುದಾಯ ಆರೋಗ್ಯ ಕೇಂದ್ರ ನಾಯಕನಹಟ್ಟಿ, ಮದರ್ ತೇರೆಸಾ ಗ್ರಾಮೀಣಾಭಿವೃದ್ದಿ ಸಂಸ್ಥೆ ನಾಯಕನಹಟ್ಟಿ, ರೋಟರಿ ಕ್ಲಬ್ ಚಿತ್ರದುರ್ಗ ವಾಸವಿ ಕ್ಲಬ್ ಚಿತ್ರದುರ್ಗ, ವಿದ್ಯಾ ವಿಕಾಸ ಶಾಲೆ ನಾಯಕನಹಟ್ಟಿ ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾ ವಿಕಾಸ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಕಣ್ಣಿನ ಇತರೆ ತೊಂದರೆಗಳಿಗೆ ಚಿಕಿತ್ಸೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಕಣ್ಣಿನ ರಕ್ಷಣೆಯನ್ನು ಮಾಡುವುದರ ಮೂಲಕ ಅದನ್ನು ರಕ್ಷಣೆ ಮಾಡಬೇಕಿದೆ ಕಣ್ಣಿನ ಏನೇ ತೊಂದರೆ ಬಂದರೂ ಸಹಾ ಸ್ವಯಂ ಚಿಕಿತ್ಸೆಯನ್ನು ಮಾಡಿಕೊಳ್ಳದೆ ವೈದ್ಯರನ್ನು ಸಂಪರ್ಕ ಮಾಡುವುದರ ಮೂಲಕ ಚಿಕಿತ್ಸೆಯನ್ನು ಪಡೆದು ಔಷದಿಯನ್ನು ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ಕಣ್ಣಿನ ತಪಾಸಣೆಯನ್ನು ಮಾಡಿಸಿಕೊಳುವುದರ ಮೂಲಕ ಸಾಯುವವರೆಗೂ ಕಣ್ಣುಗಳನ್ನು ಚನ್ನಾಗಿ ಆರೈಕೆಯನ್ನು ಮಾಡಬೇಕಿದೆ ಎಂದು ಕರೆ ನೀಡಿದರು.

ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಮಾಧುರಿ ಮಧುಪ್ರಸಾದ್ ಮಾತನಾಡಿ ರೋಟರಿ ಸಂಸ್ಥೆಯೂ ಮಾನವನಿಗೆ ಅಗತ್ಯವಾಗಿ ಬೇಕಾದ ಆರೋಗ್ಯ ಶಿಬಿರವನ್ನು ಏರ್ಪಾಡು ಮಾಡುವುದರ ಮೂಲಕ ಅವರ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುವಂತೆ ಮಾಡುತ್ತಿದೆ.

ಇದಲ್ಲದೆ ಸಂಸ್ಥೆಯೂ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾಗಿ ಬೇಕಾದ ಸೌಕರ್ಯಗಳನ್ನು ನೀಡುತ್ತಿದೆ ಇದ್ದಲ್ಲದೆ ಬಡವರು ಅರ್ಥಿಕವಾಗಿ ಸಬಲರಾಗಲು ಬೇಕಾದ ಸೌಕರ್ಯವನ್ನು ಅರ್ಹರಿಗೆ ನೀಡಲಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಷಾ, ಲಕ್ಷ್ಮಣ್, ವೆಂಕಟೇಶ್ ವೀರಣ್ಣ, ಮದರ್ ತೇರೆಸಾ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಶಿವಮೂರ್ತಿ, ನಾಗರಾಜ್ ಸೇರಿದಂತೆ ವಾಸವಿ ಕ್ಲಬ್ ಚಿತ್ರದುರ್ಗ, ವಿದ್ಯಾ ವಿಕಾಸ ಶಾಲೆ ನಾಯಕನಹಟ್ಟಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಕ್ಕಳ ಮತ್ತು ಜನತೆಯ ನೇತ್ರಗಳನ್ನು ತಪಾಸಣೆ ಮಾಡಲಾಗಿದ್ದು ಇದರಲ್ಲಿ 104 ಜನರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಲು ಶಿವಮೊಗ್ಗಕ್ಕೆ ಕರೆದು ಕೊಂಡು ಹೋಗಲಾಯಿತು.

The post ರೋಟರಿ ಸಂಸ್ಥೆಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚು : ಶ್ರೀಮತಿ ಮಾಧುರಿ ಮಧುಪ್ರಸಾದ್ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/67XxVfR
via IFTTT

Leave a Reply

Your email address will not be published. Required fields are marked *