ಎಲ್ಲಾ ರಂಗಗಳಲ್ಲಿಯೂ ಮಹಿಳೆಗೆ ಪರುಷರಷ್ಟೆ ಸಮಾನ ಹಕ್ಕಿದೆ : ಶ್ರೀಮತಿ ಮೋಕ್ಷರುದ್ರಸ್ವಾಮಿ

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಮಾ.31): ಮಹಿಳಾ ಸೇವಾ ಸಮಾಜ ಹಾಗೂ ರೋಟರಿ ಕ್ಲಬ್ ಚಿತ್ರದುರ್ಗ ವಿಂಡ್‍ಮಿಲ್ ಸಿಟಿ ಸಹಯೋಗದೊಂದಿಗೆ ಮಹಿಳಾ ಸೇವಾ ಸಮಾಜದಲ್ಲಿ ಹೆಣ್ಣು ಮಕ್ಕಳ ಜೊತೆ ಸೇರಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.

ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಶ್ರೀಮತಿ ಮೋಕ್ಷರುದ್ರಸ್ವಾಮಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಗಾಟಿಸಿ ಮಾತನಾಡುತ್ತ ಮಹಿಳೆ ಕೀಳರಿಮೆಯನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಮಹಿಳೆ ಸದೃಢಳಾಗಬೇಕಿದೆ. ಎಲ್ಲಾ ರಂಗಗಳಲ್ಲಿಯೂ ಮಹಿಳೆಗೆ ಪರುಷರಷ್ಟೆ ಸಮಾನ ಹಕ್ಕಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯವರೆಗೂ ಮಹಿಳೆ ಏರಬಹುದು ಎನ್ನುವುದಕ್ಕೆ ನಮ್ಮ ದೇಶದ ಈಗಿನ ರಾಷ್ಟ್ರಪತಿ ಮಹಿಳೆ ಎನ್ನುವುದೇ ಸಾಕ್ಷಿ ಎಂದು ಹೇಳಿದರು.

ಮಹಿಳಾ ಸೇವಾ ಸಮಾಜದ ಅನಾಥ ಬಾಲಿಕಾಶ್ರಮದಲ್ಲಿ ಬೆಳೆದ ಎಷ್ಟೊ ಮಕ್ಕಳು ಉನ್ನತ ಸ್ಥಾನದಲ್ಲಿದ್ದಾರೆ. ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೊದಲಿನಿಂದಲೂ ಪ್ರೋತ್ಸಾಹಿಸುತ್ತ ಬರಲಾಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಗೆ ಸಮಾನ ಅವಕಾಶವಿದ್ದು, ಇರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಭಿಯಾಗಿ ಬದುಕುವುದನ್ನು ಕಲಿಯಬೇಕೆಂದು ತಿಳಿಸಿದರು.

ರೋಟರಿ ಕ್ಲಬ್ ಚಿತ್ರದುರ್ಗ ವಿಂಡ್‍ಮಿಲ್ ಸಿಟಿ ಅಧ್ಯಕ್ಷೆ ನಾಗರತ್ನ ವಿಶ್ವನಾಥ್, ಕಾರ್ಯದರ್ಶಿ ಅಮೃತ ಸಂತೋಷ್, ಮಹಿಳಾ ಸೇವಾ ಸಮಾಜದ ಕಾರ್ಯದರ್ಶಿ ಲತ ಉಮೇಶ್, ಭಾರತಿ ಸುರೇಶ್, ಸುಜಾತ ಹಿರೇಮಠ್, ಮಹಾಂತಮ್ಮ ಜಯಪ್ಪ, ಗೀತ ಜಯಣ್ಣ, ಉಮೇಶ್ ಗುರುರಾಜ್, ಶಿಲ್ಪ ಜಗದೀಶ್, ವೀಣ ವಿಜಯ್ ಇನ್ನು ಅನೇಕರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

The post ಎಲ್ಲಾ ರಂಗಗಳಲ್ಲಿಯೂ ಮಹಿಳೆಗೆ ಪರುಷರಷ್ಟೆ ಸಮಾನ ಹಕ್ಕಿದೆ : ಶ್ರೀಮತಿ ಮೋಕ್ಷರುದ್ರಸ್ವಾಮಿ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/v36wkqe
via IFTTT

Views: 0

Leave a Reply

Your email address will not be published. Required fields are marked *