Skip to content
  • Sunday, March 22, 2026
  • ABOUT US
  • CONTACT US
  • PRIVACY POLICY

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • PRIVACY POLICY
  • Horoscope
  • Home
  • Sports
  • MS Dhoni: ಏಕದಿನ ವಿಶ್ವಕಪ್​ನಲ್ಲಿ ಎಂಎಸ್​ಡಿ ಸಿಡಿಸಿದ ಸಿಕ್ಸ್ ಲ್ಯಾಂಡ್ ಆದ ಆಸನಕ್ಕೆ ಧೋನಿ ಹೆಸರು
Sports

MS Dhoni: ಏಕದಿನ ವಿಶ್ವಕಪ್​ನಲ್ಲಿ ಎಂಎಸ್​ಡಿ ಸಿಡಿಸಿದ ಸಿಕ್ಸ್ ಲ್ಯಾಂಡ್ ಆದ ಆಸನಕ್ಕೆ ಧೋನಿ ಹೆಸರು

April 4, 2023
samagrasuddi

ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಾಗಿ ಕೆಲ ವರ್ಷಗಳಾಗಿದ್ದರೂ ಅವರ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮಾತ್ರ ಕಾಣಿಸಿಕೊಳ್ಳುವ ಎಂಎಸ್​ಡಿ ಈ ವರ್ಷ ಇದಕ್ಕೂ ನಿವೃತ್ತಿ ಘೋಷಿಸಿ ಕ್ರಿಕೆಟ್​ನಿಂದ ದೂರವಾಗಲಿದ್ದಾರೆ.ಇಂದು ಒಂದು ತಂಡಕ್ಕೆ ಬೆಂಬಲ ಎಂಬ ಬದಲು ಕೇವಲ ಧೋನಿಯನ್ನು ನೋಡಲು, ಅವರ ಆಟವನ್ನು ವೀಕ್ಷಿಸಲು ಅಭಿಮಾನಿಗಳು ಐಪಿಎಲ್​ಗೆ ಆಗಮಿನಿಸುತ್ತಿದ್ದಾರೆ. ಭಾರತಕ್ಕೆ ವಿಶ್ವಕಪ್ ತಂದುಕೊಟ್ಟು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಧೋನಿಗೆ ಇದೀಗ ವಿಶೇಷ ಗೌರವ ಸೂಚಿಸಲು ಮುಂಬೈ ಕ್ರಿಕೆಟ್ ಸಂಸ್ಥೆ ಮುಂದಾಗಿದೆ.ಭಾರತವು ಈಗ 2011 ರ ಏಕದಿನ ವಿಶ್ವಕಪ್ ಗೆದ್ದ ತಂಡದ 12 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಹೀಗಿರುವಾಗ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಮಹತ್ವದ ಘೋಷಣೆ ಮಾಡಿದ್ದು ವಾಂಖೆಡೆ ಸ್ಟೇಡಿಯಂನಲ್ಲಿ ವಿಕೆಟ್-ಕೀಪರ್ ಬ್ಯಾಟರ್ ಧೋನಿ ಹೆಸರನ್ನು ಇಡಲು ನಿರ್ಧರಿಸಿದ್ದಾರೆ.2011ರ ವಿಶ್ವಕಪ್​ ಫೈನಲ್​ಲ್ಲಿ ಶ್ರೀಲಂಕಾ ವಿರುದ್ಧ ಧೋನಿ ಸಿಕ್ಸ್ ಮೂಲಕ ವಿನ್ನಿಂಗ್ ಶಾಟ್ ಸಿಡಿಸಿದ್ದು ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ ಲಂಕಾ ವೇಗಿ ನುವಾನ್ ಕುಲಶೇಖರ ವಿರುದ್ಧ ಧೋನಿ ಹೊಡೆದಿದ್ದ ಸಿಕ್ಸರ್‌ ಲ್ಯಾಂಡ್ ಆಗಿರುವ ಕ್ರೀಡಾಂಗಣದಲ್ಲಿನ ಆಸನಕ್ಕೆ ಧೋನಿ ಅವರ ಹೆಸರನ್ನು ಇಡಲಾಗುವುದು ಎಂದು ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಹೇಳಿದ್ದಾರೆ."ಎಂಸಿಎ ಕ್ರೀಡಾಂಗಣದ ಒಳಗಿನ ಆಸನಕ್ಕೆ ಎಂಎಸ್ ಧೋನಿ ಹೆಸರಿಡಲು ನಿರ್ಧಾರ ತೆಗೆದುಕೊಂಡಿದೆ. 2011 ರ ವಿಶ್ವಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಧೋನಿ ಅವರ ಮ್ಯಾಚ್ ವಿನ್ನಿಂಗ್ ಸಿಕ್ಸರ್ ಬಿದ್ದ ಸ್ಥಳಕ್ಕೆ ಅವರ ಹೆಸರನ್ನು ಇಡಲಾಗುವುದು . ಇದರ ಉದ್ಘಾಟನೆಗೆ ಬರಲು ನಾವು ಧೋನಿ ಅವರನ್ನು ವಿನಂತಿಸುತ್ತೇವೆ'' ಎಂದು ಕಾಳೆ ಹೇಳಿದರು.ವಾಂಖೆಡೆ ಸ್ಟೇಡಿಯಂ ಈಗಾಗಲೇ ಕೆಲ ಕ್ರಿಕೆಟ್ ದಿಗ್ಗಜರ ಹೆಸರು ಇದೆ. ಸಚಿನ್ ತೆಂಡುಲ್ಕರ್, ಸುನೀಲ್ ಗವಾಸ್ಕರ್ ಹಾಗೂ ವಿಜಯ್ ಮರ್ಚೆಂಟ್ ಅವರಂತಹ ಶ್ರೇಷ್ಠರ ಹೆಸರನ್ನು ಹೊಂದಿದೆ. ಪಾಲ್ಲಿ ಉಮ್ರಿಗರ್ ಹಾಗೂ  ವಿನೂ ಮಂಕಡ್ ಅವರ ಹೆಸರಿನ ದ್ವಾರಗಳೂ ಇವೆ. ಇವರ ಜೊತೆಗೆ ಈಗ ಧೋನಿ ಹೆಸರು ಕೂಡ ಸೇರ್ಪಡೆ ಆಗಲಿದೆ.ಏಪ್ರಿಲ್ 2 ರ ದಿನ ಭಾರತೀಯ ಕ್ರಿಕೆಟ್‌ಗೆ ಬಹಳ ಮುಖ್ಯ. 28 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಟೀಮ್ ಇಂಡಿಯಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಾಯ್ನಾಡಿನಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ವಿಶ್ವಕಪ್ ಅನ್ನು ವಶಪಡಿಸಿಕೊಂಡಿತು.

source https://tv9kannada.com/photo-gallery/cricket-photos/2011-world-cup-mumbai-cricket-association-is-set-to-immortalise-the-name-ms-dhoni-at-the-historic-wankhede-vb-au48-548905.html

Post navigation

MS Dhoni: ನೀವು ನನ್ನ ನಾಯಕತ್ವದಲ್ಲಿ ಆಡಬೇಡಿ: ಗೆದ್ದರೂ ಪಂದ್ಯದ ಬಳಿಕ ಬೌಲರ್​​ಗಳ ಮೈಚಳಿ ಬಿಡಿಸಿದ ಎಂಎಸ್ ಧೋನಿ
ಭಗವಾನ್ ಮಹಾವೀರರ ತತ್ವಗಳು ಎಲ್ಲಾ ಸಮಾಜಕ್ಕೆ ಅನ್ವಯಿಸುತ್ತದೆ : ಜೈನ್ ಸಂಘದ ಅಧ್ಯಕ್ಷ ವಸ್ತಿಮಲ್

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
Home Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.5 | ದಿನ 77

March 20, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.4 | ದಿನ 76

March 19, 2026
samagrasuddi
  • ಚಿತ್ರದುರ್ಗ: ಮಾ. 23ರಂದು ಉಜ್ಜಯಿನಿ ಮಠದಲ್ಲಿ ಜಗದ್ಗುರು ಶ್ರೀ ಮರುಳಾರಾಧ್ಯ ಶಿವಾಚಾರ್ಯರ 31ನೇ ಪುಣ್ಯ ಸ್ಮರಣೋತ್ಸವ.
  • Life Cycle Mutual Funds: ಸೆಬಿಯ ಹೊಸ ಮ್ಯೂಚುವಲ್ ಫಂಡ್ ನಿಯಮ, ಲಾಭ ಮತ್ತು ಅನಾನುಕೂಲಗಳ ಸಂಪೂರ್ಣ ಮಾಹಿತಿ.
  • RCB Ticket Scam Alert: ಐಪಿಎಲ್ ಟಿಕೆಟ್ ಹೆಸರಿನಲ್ಲಿ ವಂಚನೆ; ಬೆಂಗ್ಳೂರು ಪೊಲೀಸರಿಂದ ಹೈ-ಅಲರ್ಟ್!
  • ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.
  • ​Day Special, ಮಾರ್ಚ್ 22: ಇತಿಹಾಸದ ಪುಟಗಳಲ್ಲಿನ ಸುವರ್ಣ ಅಕ್ಷರಗಳು ಮತ್ತು ವಿಶ್ವ ಜಲ ದಿನದ ವಿಶೇಷತೆ
Copyright © 2026
CONTACT US
Theme by: Theme Horse
Proudly Powered by: WordPress