MS Dhoni: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಎಂಎಸ್ ಧೋನಿ

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ 16 ರ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ದಾಖಲೆ ನಿರ್ಮಿಸಿದ್ದಾರೆ.ಈ ಪಂದ್ಯದಲ್ಲಿ ಟಾಸ್​ಗೆ ಆಗಮಿಸುವ ಮೂಲಕ ಐಪಿಎಲ್​ನಲ್ಲಿ ಕಣಕ್ಕಿಳಿದ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆಯನ್ನು ಧೋನಿ ತಮ್ಮದಾಗಿಸಿಕೊಂಡರು. ಧೋನಿಗೆ ಈಗ 41 ವರ್ಷ 249 ದಿನಗಳು. ಇದಕ್ಕೂ ಮುನ್ನ ಐಪಿಎಲ್​ನ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆ ಶೇನ್ ವಾರ್ನ್​ ಹೆಸರಿನಲ್ಲಿತ್ತು. 2011 ರಲ್ಲಿ ವಾರ್ನ್​ ತಮ್ಮ 41ನೇ ವಯಸ್ಸಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ಇದೀಗ ಈ ದಾಖಲೆಯನ್ನು ಧೋನಿ ಮುರಿದಿದ್ದಾರೆ.
ಇದಲ್ಲದೆ ಐಪಿಎಲ್​ ಟ್ರೋಫಿ ಗೆದ್ದ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆ ಕೂಡ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. 2021 ರಲ್ಲಿ ಸಿಎಸ್​ಕೆ ಚಾಂಪಿಯನ್ ಪಟ್ಟಕ್ಕೇರಿದಾಗ ನಾಯಕ ಧೋನಿಗೆ 40 ವರ್ಷ, 70 ದಿನಗಳು. ಇದು ಕೂಡ ಐಪಿಎಲ್​ನ ದಾಖಲೆಯಾಗಿದೆ.ಹಾಗೆಯೇ ಪ್ರಸ್ತುತ ಐಪಿಎಲ್​ನ ಹಿರಿಯ ನಾಯಕರೆನಿಸಿಕೊಂಡಿರುವ ಧೋನಿ ಈ ಬಾರಿಯ ಟೂರ್ನಿಯ ಮೂಲಕ ವಿದಾಯ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.

source https://tv9kannada.com/photo-gallery/cricket-photos/ipl-2023-ms-dhoni-oldest-captain-in-ipl-record-kannada-news-zp-au50-546749.html

Views: 0

Leave a Reply

Your email address will not be published. Required fields are marked *