MS Dhoni: ಜಿಯೋಸಿನಿಮಾದಲ್ಲಿ ಹೊಸ ದಾಖಲೆ: ಧೋನಿ ಬ್ಯಾಟಿಂಗ್‌ಗೆ ಬಂದಾಗ 2.5 ಕೋಟಿ ವೀಕ್ಷಣೆ

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​​​ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್-1 ಪಂದ್ಯ ಹೊಸ ಮೈಲಿಗಲ್ಲು ನೆಟ್ಟಿದೆ. ಜಿಯೋಸಿನಿಮಾದಲ್ಲಿ ದಾಖಲೆಯ 2.5 ಕೋಟಿ ಜನರು ವೀಕ್ಷಿಸಿದ್ದಾರೆ.ಅಂಬಟಿ ರಾಯುಡು ಔಟಾದ ಬಳಿಕ ಕ್ರೀಸ್‌ಗೆ ಬಂದ ಧೋನಿ, 1 ರನ್‌ ಗಳಿಸಿ ಔಟಾದರು. ಆದರೆ, ಧೋನಿ ಬ್ಯಾಟಿಂಗ್‌ ನಡೆಸಲು ಕ್ರೀಸ್​ಗೆ ಬಂದಾಗ 2.5 ಕೋಟಿ ತಲುಪಿತ್ತು ಎಂಬುದು ವಿಶೇಷ. ಧೋನಿ ಔಟಾಗುತ್ತಿದ್ದಂತೆ 55 ಲಕ್ಷಕ್ಕೆ ಕುಸಿತ ಕಂಡಿದ್ದು ಕೂಡ ಅಚ್ಚರಿ.ಇದರ ಮೂಲಕ ಜಿಯೋಸಿನಿಮಾ ಹಾಲಿ ಐಪಿಎಲ್ ಆವೃತ್ತಿಯಲ್ಲಿ 3ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆಯನ್ನ ಮುರಿದಿದೆ. ಜೊತೆಗೆ 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ನಿರ್ಮಿಸಲ್ಪಟ್ಟಿದ್ದ ವಿಶ್ವದಾಖಲೆಯನ್ನೂ ಸರಿಗಟ್ಟಿದೆ.ಏಪ್ರಿಲ್ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಎಂಎಸ್ ಧೋನಿ ಅವರ ಆಟವನ್ನು ವೀಕ್ಷಿಸಲು 2.4 ಕೋಟಿ ವೀಕ್ಷಕರು ಜಿಯೋಸಿನಿಮಾದಲ್ಲಿ ಒಟ್ಟಾಗಿ ಸೇರಿದ್ದು ಹಿಂದಿನ ದಾಖಲೆ ಎನಿಸಿತ್ತು.ಇದಕ್ಕೆ ಮುನ್ನ ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಧೋನಿ ಗತವೈಭವವನ್ನು ನೆನಪಿಸುವಂಥ ಬ್ಯಾಟಿಂಗ್ ಪ್ರದರ್ಶಿಸಿದಾಗ ಗರಿಷ್ಠ 2.2 ಕೋಟಿ ವೀಕ್ಷಕರ ದಾಖಲೆ ಸ್ಥಾಪಿಸಿತ್ತು. ಐಪಿಎಲ್ 2023ರ ಮೊದಲ ಐದು ವಾರಗಳಲ್ಲಿ ಜಿಯೋಸಿನಿಮಾ 1,300 ಕೋಟಿಗೂ ಅಧಿಕ ವಿಡಿಯೋ ವೀಕ್ಷಣೆಯ ದಾಖಲೆ ನಿರ್ಮಿಸಲಾಗಿತ್ತು. ವೀಕ್ಷಕರು ಜಿಯೋಸಿನಿಮಾದ ಅಭಿಮಾನಿ-ಕೇಂದ್ರಿತ ಪ್ರಸ್ತುತಿಗೆ ಮನಸೋತಿದ್ದಾರೆ. ಜಿಯೋಸಿನಿಮಾ ಪ್ರತಿ ಪಂದ್ಯದ ವೇಳೆ ಪ್ರತಿ ವೀಕ್ಷಕರು ಸರಾಸರಿ 60 ನಿಮಿಷಗಳಷ್ಟು ಸಮಯವನ್ನು ಕಳೆಯುತ್ತಿದ್ದಾರೆ.ಟಾಟಾ ಐಪಿಎಲ್ 2023ರ ಪಂದ್ಯಗಳನ್ನು ವೀಕ್ಷಿಸಲು ಜಿಯೋಸಿನಿಮಾವೇ ಕ್ರಿಕೆಟ್ ಅಭಿಮಾನಿಗಳ ಪ್ರಮುಖ ಆದ್ಯತೆ ಆಗಿದೆ ಎಂಬುದಕ್ಕೆ ಈ ದಾಖಲೆಗಳು ಸಾಕ್ಷಿಯಾಗಿವೆ. ರೋಚಕ ಪಂದ್ಯಗಳನ್ನು ವೀಕ್ಷಿಸುವ ವೇಳೆ ಜಿಯೋಸಿನಿಮಾದಲ್ಲಿ ಅಭಿಮಾನಿ ಕೇಂದ್ರಿತವಾದ ಹಲವಾರು ಕೊಡುಗೆಗಳನ್ನು ಕೂಡ ನೀಡಲಾಗುತ್ತಿದೆ.

source https://tv9kannada.com/photo-gallery/cricket-photos/jiocinema-viewership-touches-2-5-crore-when-ms-dhoni-batting-during-csk-gt-ipl-2023-qualifier-1-kannada-news-vb-586356.html

Views: 0

Leave a Reply

Your email address will not be published. Required fields are marked *