Skip to content
  • Sunday, July 6, 2025
  • About us
  • Contact us
ಸಮಗ್ರ ಸುದ್ದಿ

ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • MS Dhoni retirement: ಇಂದು ಎಂ ಎಸ್ ಧೋನಿ ನಿವೃತ್ತಿ ಸಾಧ್ಯತೆ: ಪ್ರಶಸ್ತಿಯೊಂದಿಗೆ ವಿದಾಯ ಹೇಳ್ತಾರ ಎಂಎಸ್​ಡಿ?
Sports

MS Dhoni retirement: ಇಂದು ಎಂ ಎಸ್ ಧೋನಿ ನಿವೃತ್ತಿ ಸಾಧ್ಯತೆ: ಪ್ರಶಸ್ತಿಯೊಂದಿಗೆ ವಿದಾಯ ಹೇಳ್ತಾರ ಎಂಎಸ್​ಡಿ?

May 28, 2023
samagrasuddi

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ಅಂತಿಮ ಫೈನಲ್ ಪಂದ್ಯ ನಡೆಯಲಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿ ಆಗಲಿದೆ. ಈ ಪಂದ್ಯ ಅನೇಕ ವಿಶೇಷ ಘಟನೆಗಳಿಗೆ ಸಾಕ್ಷಿಯಾಗಲಿದೆ.ಇಂದಿನ ಪಂದ್ಯದಲ್ಲಿ ಸಿಎಸ್​ಕೆ ಚಾಂಪಿಯನ್ ಆದರೆ 5ನೇ ಬಾರಿ ಟ್ರೋಫಿ ಎತ್ತಿ ಹಿಡಿದ ಸಾಧನೆ ಮಾಡಲಿದೆ. ಜಿಟಿ ಗೆದ್ದರೆ ಸತತ ಎರಡನೇ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ. ಇದರ ನಡುವೆ ಎಂಎಸ್ ಧೋನಿ, ಶುಭ್​ಮನ್ ಗಿಲ್ ಐತಿಹಾಸಿಕ ದಾಖಲೆ ಬರೆಯಲೂ ಸಜ್ಜಾಗಿದ್ದಾರೆ.ಹೀಗಿರುವಾಗ ಮಹೇಂದ್ರ ಸಿಂಗ್ ಧೋನಿ ಇಂದು ನಿವೃತ್ತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಐಪಿಎಲ್ 2023 ಆರಂಭವಾದಾಗಿನಿಂದ ಧೋನಿ ನಿವೃತ್ತಿ ವಿಚಾರ ಭಾರೀ ಚರ್ಚೆಯಲ್ಲಿದೆ. ಈ ಬಗ್ಗೆ ಧೋನಿ ಸೇರಿದಂತೆ ಯಾರುಕೂಡ ಈ ವರೆಗೆ ಖಚಿತ ಮಾಹಿತಿ ಹೊರಹಾಕಿಲ್ಲ.ಟಾಸ್ ವೇಳೆ ಅಥವಾ ಪೋಸ್ಟ್ ಮ್ಯಾಚ್ ಸಂದರ್ಭ ಧೋನಿ ಬಳಿ ನಿವೃತ್ತಿಗೆ ಸಂಬಂಧಿಸಿದಂತೆ ಹಲವಾರು ಬಾರಿ ಪ್ರಶ್ನೆಗಳನ್ನು ಕೇಳಿದರೂ ಇದರ ಬಗ್ಗೆ ಮಾತನಾಡದೇ ಮೌನವಾಗಿದ್ದರು. ಇಂದು ಫೈನಲ್ ಪಂದ್ಯ ಆಗಿರುವುದರಿಂದ ನಿವೃತ್ತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.ನಿವೃತ್ತಿ ಬಳಿಕ ಧೋನಿ ಸಿಎಸ್​ಕೆ ತಂಡದ ಕೋಚ್ ಆಗುವ ಸಾಧ್ಯತೆ ಇದೆ. ಮೊನ್ನೆಯಷ್ಟೆ ಧೋನಿ, ನಿವೃತ್ತಿ ಬಗ್ಗೆ ತೀರ್ಮಾನ ಕೈಗೊಳ್ಳಲು ನನಗಿನ್ನೂ 8ರಿಂದ 9 ತಿಂಗಳ ಸಮಯವಿದೆ. ನಾನು ಯಾವಾಗಲೂ ಚೆನ್ನೈ ಸೂಪರ್ ಕಿಂಗ್ಸ್ ಪರ ಇರುತ್ತೇನೆ, ಅದು ಆಡುವಾಗಾದರೂ ಸರಿ ಅಥವಾ ತಂಡದಿಂದ ಹೊರಗಿದ್ದಾದರೂ ಸರಿ ಎಂದು ಹೇಳಿದ್ದರು.ಈ ಮೂಲಕ ಧೋನಿ ಇನ್ನೂ ಎಂಟರಿಂದ ಒಂಬತ್ತು ತಿಂಗಳ ಸಮಯವಿದ್ದು, ಆಟಗಾರನಾಗಿ ಇರ್ತೀನೋ ಅಥವಾ ಕೋಚ್ ಆಗಿ ಇರ್ತೀನೋ ಗೊತ್ತಿಲ್ಲ, ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿಯೇ ಇರುತ್ತೇನೆ ಎಂದು ಪರೋಕ್ಷವಾಗಿ ಇದೇ ತನ್ನ ಕೊನೆಯ ಐಪಿಎಲ್ ಎಂದು ತಿಳಿಸಿದ್ದರು.ಎಂಎಸ್ ಧೋನಿ ಸದ್ಯ ಮೊಣಕಾಲು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಮಧ್ಯೆಯೂ ಐಪಿಎಲ್ ಆಡುತ್ತಿರುವುದು ವಿಶೇಷ. ಐಪಿಎಲ್ ಮುಗಿದ ಬೆನ್ನಲ್ಲೆ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಧೋನಿ ಇಂದು ನಿವೃತ್ತಿ ಘೋಷಣೆ ಮಾಡಿದರೆ ಚೆನ್ನೈ ಗೆಲುವಿನ ವಿದಾಯ ಹೇಳುತ್ತಾ ಎಂಬುದು ನೋಡಬೇಕಿದೆ.

source https://tv9kannada.com/photo-gallery/cricket-photos/csk-vs-gt-ipl-2023-final-could-very-well-be-the-farewell-game-of-india-legend-ms-dhoni-kannada-news-vb-588696.html

Tags: Cricket, IPL, IPL 2023, M S Dhoni, samagrasuddi, T-20, TATA IPL 2023, ಸಮಗ್ರ ಸುದ್ದಿ

Post navigation

MS Dhoni: ಐತಿಹಾಸಿಕ ದಾಖಲೆ ಸೃಷ್ಟಿಸಲು ಸಜ್ಜಾದ ಎಂಎಸ್ ಧೋನಿ, ಶುಭ್​ಮನ್ ಗಿಲ್: ಇದುವರೆಗೆ ಯಾರೂ ಮಾಡಿರದ ಸಾಧನೆ
CSK Vs GT Final Weather Forecast: ಐಪಿಎಲ್ 2023 ಫೈನಲ್ ಪಂದ್ಯ ನಡೆಯುವುದು ಅನುಮಾನ: ಮ್ಯಾಚ್ ಆಡದೆ ಚಾಂಪಿಯನ್ ಆಗುತ್ತಾ ಹಾರ್ದಿಕ್ ಪಡೆ?

Leave a Reply Cancel reply

Your email address will not be published. Required fields are marked *

Recent Comments

  1. Kaveri Sonkamble on SBI ನೇಮಕಾತಿ; ಸರ್ಕಲ್​ ಬೇಸ್ಡ್​​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನMay 31, 2025

    Kaveri Sonkamble

  2. Vani m on SBI Recruitment 2025: SBI ಬ್ಯಾಂಕಿನಲ್ಲಿ 2964 ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿMay 13, 2025

    I am complete b. Com in experience of work

  3. Sushma Basayya Hiremath on ಅಗ್ನಿವೀರ್​ ನೇಮಕಾತಿ: ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.April 9, 2025

    Sushma Basayya Hiremath

  4. samagrasuddi on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Tq

  5. Darshan K M on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Meaning full program..✨❤️

CITIES

Cities

🏫 ಕರ್ನಾಟಕದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳಿಗೆ ಅವಕಾಶ

July 4, 2025
samagrasuddi

📅 ದಿನಾಂಕ: 4 ಜುಲೈ 2025✍️ ಸಮಗ್ರ ಸುದ್ದಿ ವಿಶೇಷ ✅ ಮಹತ್ವದ ನಿರ್ಧಾರ: ಕರ್ನಾಟಕ ಸರ್ಕಾರವು 2025–26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಇಂದಿನ ಸ್ಪರ್ಧಾತ್ಮಕ…

Cities

ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳು

July 4, 2025
samagrasuddi
Cities

ದಾವಣಗೆರೆ ಜಿಲ್ಲೆಯ ಮಾರುತಿ ಹೆಚ್ ಗೆ 2025ರ ಇಂಟರ್ ನ್ಯಾಷನಲ್ ಐಕಾನ್ ಪ್ರಶಸ್ತಿ ಪ್ರದಾನ.

July 4, 2025
samagrasuddi
Cities

“ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ – ರೈತರಿಗೆ ಮುನ್ನೆಚ್ಚರಿಕೆ ಅಗತ್ಯ!”

July 4, 2025
samagrasuddi
Cities Health

ಚಿಂತೆ ಬೇಡ, ಹೃದಯ ಸೇಫ್! — ಹಾಸನ ಜಿಲ್ಲೆಯಲ್ಲಿನ ಹೃದಯಾಘಾತ ಪ್ರಕರಣಗಳಿಗೆ ತಡೆಗಟ್ಟಲು ಸರ್ಕಾರದಿಂದ ಕ್ರಮ

July 2, 2025
samagrasuddi

You may Missed

Health

“Health Tips”: ವಿಟಮಿನ್‌ ಡಿ: ನಮಗೇಕೆ ಬೇಕು?

July 6, 2025
samagrasuddi
Health

ತಿಂಗಳುಗಟ್ಟಲೆ ಕ್ಯಾರೆಟ್ ತಾಜಾವಾಗಿರಲು ಈ ಸಲಹೆಯನ್ನು ಅನುಸರಿಸಿ! “carrot”

July 5, 2025
samagrasuddi
Health

“ಕರ್ನಾಟಕದಲ್ಲಿ COVID-19 ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ – ಆರೋಗ್ಯ ಇಲಾಖೆ ಎಚ್ಚರಿಕೆ”

July 4, 2025
samagrasuddi
Health

🌿 ತುಳಸಿಯ ಸೌಂದರ್ಯ ಮತ್ತು ಆರೋಗ್ಯ ಮಹತ್ವ

July 4, 2025
samagrasuddi
July 2025
M T W T F S S
 123456
78910111213
14151617181920
21222324252627
28293031  
« Jun    
  • ಭಾರತ ದೇಶ ಇಂದು ಆಹಾರದಲ್ಲಿ ಸ್ವಾವಲಂಭನೆಯನ್ನು ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುತ್ತಿದೆ: ಅದಕ್ಕೆ ಬಾಬು ಜಗಜೀವನರಾಂರವರ ದೂರದೃಷ್ಟಿ ಕಾರಣವಾಗಿದೆ.
  • ಜೆಡಿಎಸ್ ಹಿರಿಯ ಉಪಾಧ್ಯಕ್ಷರಾದ ಜೆ.ಎನ್.ಕೋಟೆ ಗುರುಸಿದ್ದಪ್ಪನವರಿಗೆ ನುಡಿ ನಮನ: ಜೀವನ, ರಾಜಕೀಯ ಎರಡರಲ್ಲೂ ಕಪ್ಪು ಚುಕ್ಕೆ ಇಲ್ಲದಂತೆ ಬದುಕಿದ್ದವರು : ಕಾಂತರಾಜ್.
  • ನರೇನಹಾಳ್ ಗ್ರಾಮದಲ್ಲಿ ಭಾರತೀಯ ಯೋಗ ಶಿಕ್ಷಣ ಬಾಲಗೋಕುಲ ಕಾರ್ಯಕ್ರಮ:
  • “IND vs ENG”: ಗಿಲ್ ಶತಕ, ಸಿರಾಜ್- ಆಕಾಶ್ ಮಾರಕ ದಾಳಿ; ದಿನದಾಟದಂತ್ಯಕ್ಕೆ ಇಂಗ್ಲೆಂಡ್ 72/3
  • “Health Tips”: ವಿಟಮಿನ್‌ ಡಿ: ನಮಗೇಕೆ ಬೇಕು?
Copyright © 2025 ಸಮಗ್ರ ಸುದ್ದಿ
Contact us
Theme by: Theme Horse
Proudly Powered by: WordPress