MS Dhoni Tears: ಸಿಎಸ್​ಕೆ ಗೆಲ್ಲುತ್ತಿದ್ದಂತೆ ಜಡೇಜಾರನ್ನು ಅಪ್ಪಿ ಮೈದಾನದಲ್ಲೇ ಕಣ್ಣೀರಿಟ್ಟ ಎಂಎಸ್ ಧೋನಿ

MS Dhoni Tears: ಸಿಎಸ್​ಕೆ ಗೆಲ್ಲುತ್ತಿದ್ದಂತೆ ಜಡೇಜಾರನ್ನು ಅಪ್ಪಿ ಮೈದಾನದಲ್ಲೇ ಕಣ್ಣೀರಿಟ್ಟ ಎಂಎಸ್ ಧೋನಿ

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಗೆ (IPL 2023) ತೆರೆ ಬಿದ್ದಿದೆ. ಎಂಎಸ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರಣರೋಚಕ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸಿಎಸ್​ಕೆ ಡಕ್ವರ್ತ್ ಲುಯಿಸ್ ನಿಯಮದ ಅನ್ವಯ 5 ವಿಕೆಟ್​ಗಳಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು. ಈ ಪಂದ್ಯದಲ್ಲಿ ಯಾರೂ ಊಹಿಸಲಾಗದ ರೀತಿಯಲ್ಲಿ ಚೆನ್ನೈ ಗೆದ್ದಿದ್ದು ವಿಶೇಷ. ರವೀಂದ್ರ ಜಡೇಜಾ (Ravindra Jadeja) ಪಂದ್ಯವನ್ನು ಗೆಲ್ಲಿಸಿ ಹೀರೋ ಆದರು. ಕೊನೆಯ ಓವರ್​ನ 6 ಎಸೆತವಂತು ಅಭಿಮಾನಿಗಳನ್ನು ಮಾತ್ರವಲ್ಲದೆ ಎರಡೂ ತಂಡದ ಆಟಗಾರರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.

ಕೊನೆಯ ಎರಡು ಎಸೆತದಲ್ಲಿ ಚೆನ್ನೈಗೆ ಗೆಲ್ಲಲು 10 ರನ್​ಗಳು ಬೇಕಾಗಿದ್ದವು. ಫಾರ್ಮ್​ನಲ್ಲಿ ಇಲ್ಲದ ಜಡೇಜಾ ಕ್ರೀಸ್​ನಲ್ಲಿದ್ದರು. ಸಿಎಸ್​ಕೆಗೆ ಗೆಲುವು ಅಸಾಧ್ಯ ಎಂದೇ ಹೆಚ್ಚಿನವರು ನಂಬಿದ್ದರು. ಆದರೆ, ಅನೇಕರ ಲೆಕ್ಕಚಾರವನ್ನು ಜಡ್ಡು ತಲೆಕೆಳಗಾಗಿಸಿದರು. ಮೋಹಿತ್ ಶರ್ಮಾ ಬೌಲಿಂಗ್​ನ 5ನೇ ಎಸೆತದಲ್ಲಿ ಸಿಕ್ಸ್ ಮತ್ತು ಕೊನೆಯ ಎಸೆತದಲ್ಲಿ ಫೋರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಇದಕ್ಕೂ ಮುನ್ನ ಔಟ್ ಆಗಿದ್ದ ಎಂಎಸ್ ಧೋನಿ ಡಗೌಟ್​ನಲ್ಲಿ ಕೂತು ಪ್ರಾರ್ಥಿಸುತ್ತಿರುವುದು ಕಂಡು ಬಂತು. ಗೆದ್ದ ತಕ್ಷಣ ಜಡೇಜಾ ಅವರನ್ನು ಎತ್ತಿ ವಿಶೇಷವಾಗಿ ಸಂಭ್ರಮಿಸಿದರು. ಇದರ ಜೊತೆಗೆ ಕಣ್ಣೀರು ಕೂಡ ಇತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

IPL 2023: ಈ ಬಾರಿ ಅತೀ ಹೆಚ್ಚು ಫೋರ್ ಬಾರಿಸಿದ ಬ್ಯಾಟರ್​ಗಳ ಪಟ್ಟಿ ಇಲ್ಲಿದೆ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್​ ಟೈಟಾನ್ಸ್ ತಂಡದ ಪರ ಯುವ ಆಟಗಾರ ಸಾಯಿ ಸುದರ್ಶನ್ ಅಮೋಘ ಆಟ ಪ್ರದರ್ಶಿಸಿದರು. ಇವರ ಬಿರುಸಾದ ಬ್ಯಾಟಿಂಗ್​ನಿಂದಾಗಿ 200 ರನ್​ ಗಡಿ ದಾಟಿತು. 96 ರನ್​ ಮಾಡಿದ ಸುದರ್ಶನ್​ ಫೈನಲ್​ ಪಂದ್ಯದ ಹೀರೋ ಆದರು. ಇದರ ಜೊತೆಗೆ ವೃದ್ಧಿಮಾನ್​ ಸಾಹ 54, ಶುಭಮನ್​ ಗಿಲ್​ 39, ಹಾರ್ದಿಕ್​ ಪಾಂಡ್ಯ 21 ರನ್​ಗಳ ಕಾಣಿಕೆ ನೀಡಿದರು. ಜಿಟಿ 20 ಓವರ್​ಗಳಲ್ಲಿ 4 ವಿಕೆಟ್​ಗೆ 214 ರನ್​ ಗಳಿಸಿತು.

ಟಾರ್ಗೆಟ್ ಬೆನ್ನಟ್ಟಲು ಬಂದ ಚೆನ್ನೈಗೆ ಮಳೆ ಅಡ್ಡಿ ಪಡಿಸಿತು. 2 ಗಂಟೆಗಳ ಕಾಲ ಆಟ ನಿಂತ ಕಾರಣ ಡಕ್ವರ್ಥ್​ ಲೂಯಿಸ್​ ನಿಯಮದನ್ವಯ ಚೆನ್ನೈಗೆ 15 ಓವರ್​ಗಳಲ್ಲಿ 171 ರನ್​ ಗುರಿ ನೀಡಲಾಯಿತು. ಅದರಂತೆ ಕ್ರೀಸ್​ಗೆ ಬಂದ ಗಾಯಕ್ವಾಡ್ ಹಾಗೂ ಕಾನ್ವೆ ಸ್ಫೋಟಕ ಬೌಂಡರಿ, ಸಿಕ್ಸರ್​ಗಳಿಂದಲೇ ರನ್​ ಗಳಿಸಿದರು. ಮೊದಲ ವಿಕೆಟ್​ಗೆ ಬಿರುಸಿನ 71 ರನ್ ಮಾಡಿದರು. ಗಾಯಕ್ವಾಡ್​ 16 ಎಸೆತಗಳಲ್ಲಿ 26 ರನ್​ ಮಾಡಿದರೆ, ಕಾನ್ವೆ 25 ಎಸೆತಗಳಲ್ಲಿ 47 ರನ್​ ಚಚ್ಚಿದರು. ಇದಾದ ಬಳಿಕ ಶಿವಂ ದುಬೆ 32, ಅಜಿಂಕ್ಯಾ ರಹಾನೆ 27, ಅಂಬಟಿ ರಾಯುಡು 19 ಹಾಗೂ ರವೀಂದ್ರ ಜಡೇಜಾ 15 ರನ್​ ಮಾಡಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ms-dhoni-looked-emotional-as-he-picked-ravindra-jadeja-and-hugged-him-tight-with-tears-after-csk-vs-gt-ipl-final-vb-589992.html

Leave a Reply

Your email address will not be published. Required fields are marked *