ಹೆಚ್ಚು ಸಂಖ್ಯೆಯಲ್ಲಿ ಭಕ್ತಾಧಿಗಳು ಹೋಗುವ ಪ್ರವಾಸಿ ಸ್ಥಳ, ದೇವಾಲಯಗಳ ಸುತ್ತಲೂ ಗುಟ್ಕಾ, ಸಗರೇಟ್, ಸೇರಿ ಮದ್ಯ ಮಾರಾಟವನ್ನೂ ನಿಷೇಧಿಸುವ ಯೋಚನೆಯನ್ನು ಮುಜರಾಯಿ ಇಲಾಖೆ ಮಾಡಿದೆ.

Kannada News: ಶಾಲಾ ಕಾಲೇಜುಗಳ ಆವರಣದಿಂದ ಸುಮಾರು 100 ಮೀಟರ್ ವರೆಗೂ ಯಾವುದೇ ಅಂಗಡಿಗಳಲ್ಲಿ ಬೀಡಿ ಸಿಗರೇಟು ಗುಟ್ಕಾ ಮಾರಾಟ ಮಾಡುವಂತಿಲ್ಲ ಅನ್ನೋ ನಿಯಮವಿದೆ. ಇದೇ ನಿಗಮವನ್ನ ಇನ್ಮೇಲೇ ಮುಜರಾಯಿ ಇಲಾಖೆ ದೇವಾಲಯಗಳಲ್ಲೂ ಜಾರಿಗೆ ತರಲು ಮುಜರಾಯಿ ಇಲಾಖೆ ನಿರ್ಧರಿಸಿದೆ.
ಹೌದು, ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಸ್ವಚ್ಛತೆಯನ್ನ ಕಾಪಾಡುವ ನಿಟ್ಟಿನಲ್ಲಿ ಖಡಕ್ ಪ್ಲ್ಯಾನ್ ಮಾಡಿದೆ. ಭಕ್ತಾಧಿಗಳಿಂದ ಮೌಖಿಕ ಮನವಿಗಳು ಬಂದ ಹಿನ್ನೆಲೆ ಯಾವುದೇ ಕಾರಣಕ್ಕೂ ದೇವಾಲಯಗಳ ಸುತ್ತಮುತ್ತ, ಅಂದರೆ ಸುಮಾರು100 ಮೀಟರ್ ವರೆಗೆ ಬೀಡಿ, ಸಿಗರೇಟ್, ಪಾನ್ ಮಸಾಲೆಗಳ ಮಾರಾಟಕ್ಕೆ ಸಂಪೂರ್ಣ ನಿಷೇಧ ಏರಲು ಇಲಾಖೆ ಮುಂದಾಗಿದೆ. ಹೆಚ್ಚು ಸಂಖ್ಯೆಯಲ್ಲಿ ಭಕ್ತಾಧಿಗಳು ಹೋಗುವ ಪ್ರವಾಸಿ ಸ್ಥಳ, ದೇವಾಲಯಗಳ ಸುತ್ತಲೂ ಗುಟ್ಕಾ, ಸಗರೇಟ್, ಸೇರಿ ಮದ್ಯ ಮಾರಾಟವನ್ನೂ ನಿಷೇಧಿಸುವ ಯೋಚನೆಯನ್ನು ಮುಜರಾಯಿ ಇಲಾಖೆ ಮಾಡಿದೆ.
ದೇವಾಲಯಗಳ ಸ್ವಚ್ಛತೆ ವಿಚಾರಕ್ಕೆ ಸಂಬಂಧಪಟ್ಟಂತೆ ಮುಜರಾಯಿ ಇಲಾಖೆ ಈ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ದೇವಸ್ಥಾನದ ಅಕ್ಕಪಕ್ಕದ ಅಂಗಡಿಗಳಿಗೆ ಮೊದಲು ಎಚ್ಚರಿಕೆ ನೀಡಲು ಇಲಾಖೆ ಸೂಚನೆ ನೀಡಿದೆ. ಸಿಗರೇಟ್, ಗುಟ್ಕಾ, ಮದ್ಯ ಮಾರಾಟ ನಿಲ್ಲಿಸುವಂತೆ ಎಚ್ಚರಿಕೆ ನೀಡಲಾಗುತ್ತೆ. ಅದಾದ ಬಳಿಕವೂ ನಿಲ್ಲಲಿಲ್ಲ ಅಂದ್ರೇ ಕಠಿಣ ಕ್ರಮಕ್ಕೆ ಮುಜರಾಯಿ ಇಲಾಖೆ ಮುಂದಾಗಲಿದೆ ಎಂದು ಸಚಿವರು ಸಂದೇಶ ರವಾನಿಸಿದ್ದಾರೆ. ಎಲ್ಲೆಂದರಲ್ಲಿ ಧೂಮಪಾನ ಮಾಡೋದು, ಗುಟ್ಕಾ ಹಾಕಿ ಉಗುಳುವುದು, ಮದ್ಯಪಾನ ಮಾಡಿ ದೇವಾಲಯಕ್ಕೆ ಬರುತ್ತಾರೆ ಎಂಬ ದೂರುಗಳು ಬರುತ್ತಿದ್ದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ದೇವಾಲಯಗಳಲ್ಲಿ ತಾಯಿ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ..!
ಒಂದೆಡೆ ದೇವಾಲಯಗಳ 100 ಮೀ ಅಂತರದಲ್ಲಿ ಗುಟ್ಕಾ, ಸಿಗರೇಟ್ ಮಾರಾಟ ನಿಷೇಧ ಹೇರಿರುವ ಮುಜರಾಯಿ ಇಲಾಖೆ ಮತ್ತೊಂದೆಡೆ, ದೇವಾಲಯಗಳಲ್ಲಿ ತಾಯಿ ಮಗುವಿಗೆ ಹಾಲುಣಿಸಲು ಪ್ರತ್ಯೆಕ ಕೊಠಡಿ ವ್ಯವಸ್ಥೆ ಬಗ್ಗೆಯೂ ಯೋಚನೆ ಮಾಡಿದೆಯಂತೆ. ಈ ಬಗ್ಗೆ ಸಾರಿಗೆ ಇಲಾಖೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗರೆಡ್ಡಿಯವರು ಸ್ವತಃ ಮಾಹಿತಿ ನೀಡಿದ್ದಾರೆ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii