Anant Ambani Radhika Merchant Marriage Date: ಮುಖೇಶ್ ಅಂಬಾನಿ ಅವರು ತಮ್ಮ ಕಿರಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. 2024ರ ಜುಲೈ 10, 11, 12 ರಂದು ಅದ್ಧೂರಿ ವಿವಾಹ ಸಮಾರಂಭದಲ್ಲಿ ನಡೆಯಲಿದ್ದು, ನವಜೋಡಿ ಹಸೆಮಣೆ ಏರಲಿದ್ದಾರೆ.
![](https://samagrasuddi.co.in/wp-content/uploads/2023/10/image-15-300x169.png)
Anant Ambani Radhika Merchant Marriage: ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಜನವರಿ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದಿನಿಂದ ಇಂದಿನವರೆಗೆ ಇವರ ಮದುವೆ ಡೇಟ್ ಬಗ್ಗೆ ಸಾಕಷ್ಟು ಊಹಾಪೋಹಗಳು ಹೊರಬಿದ್ದಿತ್ತು. ಇದೀಗ ಮುಕೇಶ್ ಅಂಬಾನಿ ಅವರೇ ತಮ್ಮ ಮಗ ಅನಂತ್ ಅಂಬಾನಿಯ ಮದುವೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.
ಮುಖೇಶ್ ಅಂಬಾನಿ ಅವರು ತಮ್ಮ ಕಿರಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. 2024ರ ಜುಲೈ 10, 11, 12 ರಂದು ಅದ್ಧೂರಿ ವಿವಾಹ ಸಮಾರಂಭದಲ್ಲಿ ನಡೆಯಲಿದ್ದು, ನವಜೋಡಿ ಹಸೆಮಣೆ ಏರಲಿದ್ದಾರೆ.
ಈ ವರ್ಷದ ಗಣೇಶ ಚತುರ್ಥಿಯ ಸಂದರ್ಭದಲ್ಲಿ, ಅಂಬಾನಿ ಕುಟುಂಬವು ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಗ್ಲಾಮರ್ ಉದ್ಯಮದ ಅನೇಕ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದರು. ಇನ್ನು ರಾಧಿಕಾ ಮರ್ಚೆಂಟ್ ಕೂಡ ತಮ್ಮ ಭಾವಿ ಪತಿ ಅನಂತ್ ಅಂಬಾನಿ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದರು.
ಇದೇ ವರ್ಷದ ಆರಂಭದಲ್ಲಿ ಅಂಬಾನಿ ನಿವಾಸ ‘ಆಂಟಿಲಿಯಾ’ದಲ್ಲಿ ಗುಜರಾತಿ ಸಂಪ್ರದಾಯದ ಅನುಸಾರ ರಾಧಿಕಾ ಮತ್ತು ಅನಂತ್ ನಿಶ್ಚಿತಾರ್ಥ ನಡೆದಿತ್ತು. ರಾಧಿಕಾ ಅವರು ಪ್ರಸಿದ್ಧ ವಿನ್ಯಾಸಕ ಅಬು ಜಾನಿ ಸಂದೀಪ್ ಖೋಸ್ಲಾ ಅವರು ಸಿದ್ಧಪಡಿಸಿದ ಗೋಲ್ಡನ್ ಲೆಹೆಂಗಾವನ್ನು ಧರಿಸಿದ್ದರು. ಮತ್ತೊಂದೆಡೆ, ಅನಂತ್ ನೀಲಿ ಬಣ್ಣದ ಕುರ್ತಾ-ಪೈಜಾಮ ಮತ್ತು ಮ್ಯಾಚಿಂಗ್ ಅಲಂಕೃತ ಜಾಕೆಟ್ ಧರಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1