ನಾಗಮೋಹನ್ ದಾಸ್ ಆಯೋಗ ನಮ್ಮ ಸಮುದಾಯ ತೀರ ಹಿಂದೆ ಉಳಿದಿದೆ, ಇವರು ಯಾವುದರಲ್ಲೂ ಸಹಾ ಪ್ರಗತಿಯನ್ನು ಹೊಂದಿಲ್ಲ:ನಾಗರಾಜ್

ಚಿತ್ರದುರ್ಗ ಆ. 20

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ನಿವೃತ್ತ ನ್ಯಾ.ನಾಗಮೀಹನ್‍ದಾಸ್ ರವರ ಆಯೋಗ ಅಲೆಮಾರಿಗಳಿಗೆ ಶೇ. 1ರಷ್ಟು ಮೀಸಲಾತಿಯನ್ನು ನೀಡುವಂತೆ ನಿರ್ದೆಶನ
ನೀಡಿದ್ದರು ಸಹಾ ರಾಜ್ಯ ಸರ್ಕಾರ ಇದನ್ನು ನೀಡದೆ ಬೇರೆ ಜಾತಿಗಳಲ್ಲಿ ನಮ್ಮ ಸಮುದಾಯವನ್ನು ಸೇರಿಸುವುದರ ಮೂಲಕ ನಮಗೆ
ಅನ್ಯಾಯವನ್ನು ಮಾಡಿದೆ ಎಂದು ಅಖಿಲ ಕರ್ನಾಟಕ ಕೂರಚ ಮಹಾ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಸರ್ಕಾರದ
ಕ್ರಮವನ್ನು ಖಂಡಿಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಮಗೆ ಮೀಸಲಾತಿ ಬೇಕೆಂದು ಹಲವಾರು
ವರ್ಷಗಳಿಂದ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬರಲಾಗಿತ್ತು, ಇದರಂತೆ ಸರ್ಕಾರ ನಾಗಮೋಹನ್ ದಾಸ್ ರವರ
ಆಯೋಗವನ್ನು ರಚನೆ ಮಾಡುವುದರ ಮೂಲಕ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯನ್ನು ಹಂಚಿಕೆ ಮಾಡುವುದರ ಬಗ್ಗೆ
ದತ್ತಾಂಶವನ್ನು ಸಂಗ್ರಹ ಮಾಡಲು ಸೂಚನೆಯನ್ನು ನೀಡಿತ್ತು ಅದರಂತೆ ಆಯೋಗ ರಾಜ್ಯದಲ್ಲಿ ಸಮೀಕ್ಷೆಯನ್ನು ನಡೆಸುವುದರ
ಮೂಲಕ ಎಲ್ಲಾ ಸಮುದಾಯಗಳಿಗೂ ಅನ್ಯಾಯವಾಗದ ರೀತಿಯಲ್ಲಿ ಮಿಸಲಾತಿಯನ್ನು ಹಂಚಿಕೆ ಮಾಡಿತು ಇದರಲ್ಲಿ ನಮ್ಮ
ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿಯನ್ನು ನೀಡಿತ್ತು, ಆದರೆ ಅ, 19 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ
ಮುಖ್ಯಮಂತ್ರಿಗಳು ನಮ್ಮ ಪಾಲಿಗೆ ಬಂದಿದ್ದ ಶೆ.1ರ ಮೀಸಲಾತಿಯನ್ನು ಬೇರೆ ಸಮುದಾಯಗಳಲ್ಲಿ ಸೇರಿಸುವುದರ ಮೂಲಕ
ಅದರಲ್ಲಿ ನಿಮ್ಮ ಪಾಲನ್ನು ತೆಗೆದುಕೊಳ್ಳಿ ಎಂದಿದೆ ಆದರೆ ನಮ್ಮ ಜೊತೆಯಲ್ಲಿನ ಸಮುದಾಯಗಳು ಭಲಾಢ್ಯರಾಗಿದ್ದು ಅವರೊಂದಿಗೆ
ಹೋರಾಡುವ ಶಕ್ತಿ ನಮ್ಮ ಸಮುದಾಯಕ್ಕೆ ಇಲ್ಲವಾಗಿದೆ, ಈ ಮುಂಚಿನಂತೆ ಆಯೋಗ ಹೇಳಿದಂತೆ ನಮ್ಮ ಸಮುದಾಯಕ್ಕೆ ಶೇ.1ರಷ್ಟು
ಮೀಸಲಾತಿಯನ್ನು ನೀಡುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ನಾಗಮೋಹನ್ ದಾಸ ಆಯೋಗ ಮಾಡಿದ ಶಿಫಾರಸ್ಸಿನಂತೆ ನಮ್ಮ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿಯನ್ನು ಸರ್ಕಾರ
ನೀಡದೇ ಹೋದರೆ ಇದರ ಬಗ್ಗೆ ಉಗ್ರವಾದ ಹೋರಾಟವನ್ನು ರೂಪಿಸಲಾಗುವುದು. ಇದರ ಬಗ್ಗೆ ನಮ್ಮ ಸಮುದಾಯದವರ
ಸಭೆಯನ್ನು ಕರೆಯುವುದರ ಮೂಲಕ ಮುಂದಿನ ಹೋರಾಟದ ರೂಪು ರೇಷೆಗಳನ್ನು ನಿರ್ಧಾರ ಮಾಡಲಾಗುವುದು. ಈ ಮೀಸಲಾತಿ
ಇದ್ದರೆ ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆ ಅನುಕೂಲವಾಗಲಿದೆ. ನಮ್ಮಲ್ಲಿ ಬಡತನ ಇದೆ ನಾವುಗಳು
ಅಲೆಮಾರಿಯಾಗಿದ್ದು, ಸರಿಯಾದ ಸೂರು ಇಲ್ಲವಾಗಿದೆ, ಇದರಲ್ಲಿ ನಮಗೆ ಬಂದ ಮೀಸಲಾತಿಯನ್ನು ಬೇರೆಯವರೊಂದಿಗೆ
ಹಂಚಿಕೊಳ್ಳುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಮನದಟ್ಟು ಮಾಡಿದರು.
ಮಾದಿಗ ಸಮುದಾಯದ ಎಡಗೈ, ಬಲಗೈ ಸಮುದಾಯಕ್ಕೆ ಶೇ.6 ರಷ್ಟು ಮೀಸಲಾತಿಯನ್ನು ನೀಡಲಾಗಿದೆ ಇವುಗಳಲ್ಲಿ ಸಮುದಾಯ
ಇರುವುದು ಕಡಿಮೆ ಆದರೆ ನಮ್ಮ ಸಮುದಾಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನಾಂಗ ಇದೆ ಇದರಿಂದ ನಮಗೆ ಅನ್ಯಾಯವಾಗುತ್ತದೆ
ನಮ್ಮನ್ನು ಬೇರೆ ಜಾತಿಯಲ್ಲಿ ಸೇರ್ಪಡೆ ಮಾಡದೆ ಪ್ರತ್ಯೇಕವಾಗಿ ನಮಗೆ ಮೀಸಲಾತಿಯನ್ನು ನೀಡುವಂತೆ ಮನವಿ ಮಾಡಿ ಇದರ ಬಗ್ಗೆ
ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ನಮ್ಮ ಸಮಸ್ಯೆಯನ್ನು ತಿಳಿಸಲಾಗುವುದೆಂದರು.
ಅಲೆಮಾರಿ ಸಮುಯಾದ ಜಿಲ್ಲಾಧ್ಯಕ್ಷ ನಾಗರಾಜ್ ಮಾತನಾಡಿ, ನಾಗಮೋಹನ್ ದಾಸ್ ಆಯೋಗ ನಮ್ಮ ಸಮುದಾಯ ತೀರ ಹಿಂದೆ
ಉಳಿದಿದೆ, ಇವರು ಯಾವುದರಲ್ಲೂ ಸಹಾ ಪ್ರಗತಿಯನ್ನು ಹೊಂದಿಲ್ಲ ಇವರಲ್ಲಿ ಶಿಕ್ಷಣವಂರು, ರಾಜಕೀಯವಾಗಿ, ನೌಕರಿಯನ್ನು
ಪಡೆದವರು ಇಲ್ಲವಾಗಿದ್ದಾರೆ ಇದರಿಂದ ಇವರಿಗೆ ಶೇ.1ರಷ್ಟು ಮೀಸಲಾತಿಯನ್ನು ನೀಡಿ ಎಂದು ತಿಳಿಸಿದೆ, ಆದರೆ
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ತಮ್ಮ ರಾಜಕೀಯಕ್ಕಾಗಿ ನಮಗೆ ಬಂದ ಮೀಸಲಾತಿಯನ್ನು ಬೇರೆಯವರಿಗೆ

ನೀಡುವುದರ ಮೂಲಕ ನಮಗೆ ಅನ್ಯಯಾ ಮಾಡಿದ್ದಾರೆ. ಕೂರಚ, ಕೂರಮ, ಲಂಬಾಣಿ, ಭೋವಿ ಅಲೆಮಾರಿ ಸಮುದಾಯಕ್ಕೆ ಶೇ.5
ರಷ್ಟು ಮೀಸಲಾತಿಯನ್ನು ನೀಡಲಾಗಿದೆ ಆದರೆ ಇವರುಗಳ ಜೋತೆಯಲ್ಲಿ ನಮ್ಮ ಸಮುದಾಯ ಹೋರಾಟ ಮಾಡಿ
ಮೀಸಲಾತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಇದರಿಂದ ನಮ್ಮ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ.1ರಷ್ಟು
ಮೀಸಲಾತಿಯನ್ನು ನೀಡುವಂತೆ ಆಗ್ರಹಿಸಿದ್ದಾರೆ.
ಗೋಷ್ಟಿಯಲ್ಲಿ ಸುಡುಗಾಡು ಸಿದ್ದರ ಮುಖಂಡರಾದ ಬಾಬು, ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ್
ಭಾಗವಹಿಸಿದ್ದರು.

Leave a Reply

Your email address will not be published. Required fields are marked *