Namibia vs Karnataka: ನಮೀಬಿಯಾ ವಿರುದ್ಧ ಸರಣಿ ಗೆದ್ದು ಬೀಗಿದ ಕರ್ನಾಟಕ

Namibia vs Karnataka: ನಮೀಬಿಯಾ ಹಾಗೂ ಕರ್ನಾಟಕ ನಡುವಣ 5 ಪಂದ್ಯಗಳ ಏಕದಿನ ಸರಣಿಯು ಮುಕ್ತಾಯಗೊಂಡಿದೆ. ಈ ಸರಣಿಯನ್ನು 3-2 ಅಂತರದಿಂದ ಗೆಲ್ಲುವ ಮೂಲಕ ಕರ್ನಾಟಕ ತಂಡವು ಟ್ರೋಫಿಯನ್ನು ಮುಡಿಗೇರಿಕೊಂಡಿದೆ.ವಿಂಡ್​ಹೋಕ್​ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಸರಣಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ 2ನೇ ಏಕದಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 5 ವಿಕೆಟ್​ಗಳಿಂದ ಸೋಲಿಸಿ ನಮೀಬಿಯಾ ಸಮಬಲ ಸಾಧಿಸಿತ್ತು.ಆದರೆ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕರ್ನಾಟಕ ಮತ್ತೊಮ್ಮೆ 9 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತು. ಹಾಗೆಯೇ 4ನೇ ಏಕದಿನ ಪಂದ್ಯದಲ್ಲಿ ಆತಿಥೇಯರನ್ನು 5 ವಿಕೆಟ್​ಗಳಿಂದ ಬಗ್ಗು ಬಡಿದು 3-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು.ಇದಾಗ್ಯೂ 5ನೇ ಏಕದಿನ ಪಂದ್ಯದಲ್ಲಿ ನಮೀಬಿಯಾ ತಂಡವು 5 ವಿಕೆಟ್​ಗಳ ಜಯ ಸಾಧಿಸಿದೆ. ಅತ್ತ ಐದು ಪಂದ್ಯಗಳಲ್ಲಿ 3 ಜಯ ಸಾಧಿಸುವ ಮೂಲಕ ರಾಷ್ಟ್ರೀಯ ತಂಡವನ್ನು ಮಣಿಸಿ ಕರ್ನಾಟಕ ತಂಡವು ಸರಣಿಯನ್ನು ತನ್ನದಾಗಿಸಿಕೊಂಡಿದೆ.ನಮೀಬಿಯಾ ವಿರುದ್ಧ ಸರಣಿ ಆಡಿದ ಕರ್ನಾಟಕ ಏಕದಿನ ತಂಡ: ರವಿಕುಮಾರ್ ಸಮರ್ಥ್ (ನಾಯಕ), ವಿಶಾಲ್ ಓನಾಟ್, ನಿಕಿನ್ ಜೋಸ್, ಕೆವಿ ಸಿದ್ಧಾರ್ಥ್, ಕಿಶನ್ ಬಿದರೆ, ಕೃತಿಕ್ ಕೃಷ್ಣ, ಶುಭಾಂಗ್ ಹೆಗ್ಡೆ, ವೈಶಾಖ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಅನೀಶ್ವರ್ ಗೌತಮ್, ಲೋಚನ್ ಅಪ್ಪಣ್ಣ, ಚೇತನ್ ಎಲ್ಆರ್, ಆದಿತ್ಯ ಗೋಯಲ್, ರಿಷಿ ಬೊಪ್ಪಣ್ಣ.ನಮೀಬಿಯಾ ಏಕದಿನ ತಂಡ: ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಶಾನ್ ಫೌಚೆ , ನಿಕೋಲಾಸ್ ಡೇವಿನ್ , ಮೈಕೆಲ್ ವ್ಯಾನ್ ಲಿಂಗೆನ್ , ಮಿಚೌ ಡು ಪ್ರೀಜ್ , ಜಾನ್ ಫ್ರಿಲಿಂಕ್, ಗೆರ್ಹಾರ್ಡ್ ಜಾನ್ಸ್ ವ್ಯಾನ್ ರೆನ್ಸ್‌ಬರ್ಗ್ , ಝೇನ್ ಗ್ರೀನ್ (ವಿಕೆಟ್ ಕೀಪರ್) , ಪಿಕ್ಕಿ ಯಾ ಫ್ರಾನ್ಸ್ , ಬರ್ನಾರ್ಡ್ ಸ್ಕೋಲ್ಟ್ಜ್ , ಕಾರ್ಲ್ ಬಿರ್ಕೆನ್‌ಸ್ಟಾಕ್ , ಬೆನ್ ಶಿಕೊಂಗೊ, ಹ್ಯಾಂಡ್ರೆ ಕ್ಲಾಜಿಂಗೆ, ಸ್ಟೀಫನ್ ಬಾರ್ಡ್

source https://tv9kannada.com/photo-gallery/cricket-photos/namibia-vs-karnataka-karnataka-won-the-series-kannada-news-zp-599662.html

Views: 0

Leave a Reply

Your email address will not be published. Required fields are marked *