ಈ ಬಿರು ಬೇಸಿಗೆಯ ಸಮಯದಲ್ಲಿ ಮನೆಯಿಂದ ಹೊರ ಬರುವುದೇ ಕಷ್ಟವಾಗಿದೆ. ಕೆಲಸ ಕಾರ್ಯದಿಂದಾಗಿ ಮನೆಯಿಂದ ಹೊರಗೆ ಬರಲೇ ಬೇಕಾದ ಅನಿವಾರ್ಯತೆ ಇರುವವರಿಗೆ ಬಿಸಿಲು ನಿಜಕ್ಕೂ ಸಂಕಷ್ಟಕ್ಕೆ ನೂಕುತ್ತಿದೆ. ಇಂತಹ ಸಮಯದಲ್ಲಿ ದೇಹಕ್ಕೆ ಆದಷ್ಟು ತಂಪು ನೀಡುವ ಆಹಾರ ತೆಗೆದುಕೊಳ್ಳಬೇಕು.

ಆದರೆ, ಈ ಹೊರಗಿರುವಾಗ ಇಡೀ ದಿನದ ಊಟ ತೆಗೆದುಕೊಂಡು ಹೋಗುವುದು ಕಷ್ಟವಾದರೆ, ಬಿಸಿಲಿಗೆ ಹಾಳಾಗಿಬಿಡುವ ಭಯ ಬೇರೆ ಇರುತ್ತದೆ. ಈ ಬಿಸಿಲಿಗೆ ತಂಪಾದ ರಾಗಿ ಅಂಬಲಿ ನಮ್ಮ ಆರೋಗ್ಯದ ಸಮತೋಲನಕ್ಕೆ ಸಹಕಾರಿಯಾಗುತ್ತದೆ. ಆದರೆ, ಎಲ್ಲಾ ಕಡೆ ರಾಗಿ ಅಂಬಲಿ ಸಿಗಲ್ಲ ಎನ್ನುವಾಗ ನಮ್ಮ ನೆಚ್ಚಿನ ‘ನಂದಿನಿ’ ಅಂತಹ ಸಾಹಸಕ್ಕೆ ಕೈ ಹಾಕಿದೆ. ಪ್ರಾಯೋಗಿಕವಾಗಿ ಕರ್ನಾಟಕ ಹಾಲು ಮಹಾ ಒಕ್ಕೂಟದ ಭಾಗವಾದ ಮೈಸೂರು ಹಾಲು ಉತ್ಪಾದಕರ ಒಕ್ಕೂಟ( Mymul) ‘ರಾಗಿ ಅಂಬಲಿ’ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಮಾರುಕಟ್ಟೆಯಲ್ಲಿ ನಂದಿನಿ ರಾಗಿ ಅಂಬಲಿ ರಾಜ್ಯದಲ್ಲಿ ಹೈನುಗಾರಿಕೆ ಮಾಡುವ ಕೃಷಿಕರ ಬೆನ್ನೆಲುಬಿನ ಜೊತೆಗೆ ದೇಶದಾದ್ಯಂತ ತನ್ನ ಉತ್ಪನ್ನಗಳ ಮೂಲಕ ಖ್ಯಾತಿ ಗಳಿಸಿರುವ ಕರ್ನಾಟಕ ಹಾಲು ಮಹಾ ಒಕ್ಕೂಟ( KMF) ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದೆ. ಇದರ ಭಾಗವಾಗಿ ಮೈಸೂರು ಹಾಲು ಉತ್ಪಾದಕರ ಒಕ್ಕೂಟ (MYMUL) ನಂದಿನಿ ರಾಗಿ ಅಂಬಲಿ ಮತ್ತು ಪ್ರೊಬಯಾಟಿಕ್ ಮಜ್ಜಿಗೆಯನ್ನು ಮಾರುಕಟ್ಟೆಗೆ ತಂದಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಏಪ್ರಿಲ್ ಮೊದಲ ವಾರದಲ್ಲಿ ನಂದಿನಿ ರಾಗಿ ಅಂಬಲಿ ಮತ್ತು ಪ್ರೊಬಯಾಟಿಕ್ ಮಜ್ಜಿಗೆ ಬಿಡುಗಡೆ ಮಾಡಲಾಗಿದೆ. ಎರಡು ಉತ್ಪನ್ನಗಳು ಬಿಡುಗಡೆಯಾದ ವಾರದೊಳಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಾಣಿಸುತ್ತಿದೆ. ಹೀಗಾಗಿ ಉತ್ಪಾದನೆ ಹೆಚ್ಚು ಮಾಡಲು ಮೈಮುಲ್ ಚಿಂತಿಸುತ್ತಿದೆ. ಈ ಉತ್ಪನ್ನಗಳನ್ನು ರಾಜ್ಯದ ಹಲವು ಭಾಗಗಳಿಗೆ ವಿಸ್ತರಿಸಬೇಕು ಎಂಬ ಕೂಗು ಕೂಡ ಕೇಳಿ ಬರುತ್ತಿದೆ.
ನಂದಿನಿ ರಾಗಿ ಅಂಬಲಿ ಬೆಲೆ ನಂದಿನಿ ರಾಗಿ ಅಂಬಲಿ ಆರೋಗ್ಯಕರವಾಗಿದೆ. ಇದನ್ನು ಹುರಿದ ರಾಗಿ ಹಿಟ್ಟು, ಮಜ್ಜಿಗೆ ಹಾಗೂ ಜೀರಿಗೆಯನ್ನು ಸೇರಿಸಿ ತರಾಯಿಸಲಾಗಿದೆ. 200 ಎಂಎಲ್ನ ಪ್ಯಾಕೇಟಿಗೆ 10 ರೂಪಾಯಿ ದರ ನಿಗದಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ರಾಗಿ ಅಂಬಲಿಗೆ ಒಂದು ಲೋಟಕ್ಕೆ ಇಪ್ಪತ್ತು ರೂಪಾಯಿ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಈ ಹತ್ತು ರೂಪಾಯಿ ಬೆಲೆ ಆರಾಮವಾಗಿ ಕೊಡಬಹುದು.
ನಂದಿನಿಯ ಮತ್ತೊಂದು ಉತ್ಪನ್ನವಾದ ಪ್ರೋಬಯಾಟಿಕ್ ಮಜ್ಜಿಗೆ ಕೂಡ ಔಷಧೀಯ ಗುಣ ಇರುವ ಕೆಲವು ಉತ್ಪನ್ನಗಳು ಮತ್ತು ಮಜ್ಜಿಗೆ ಸೇರಿಸಿ ತಯಾರಿಸಲಾಗುತ್ತದೆ. ಹೊಟ್ಟೆಯೊಳಗಿನ ಪಚನ ಕ್ರಿಯೆಗೆ ಪ್ರೋಬಯಾಟಿಕ್ ಮಜ್ಜಿಗೆ ಸಹಾಯ ಮಾಡಲಿದೆ. ಇದರ ಬೆಲೆಯೂ 200 ಎಂಎಲ್ ನ ಪ್ಯಾಕೇಟಿಗೆ 10 ರೂಪಾಯಿ. ಸಾಮಾಜಿಕ ಮಾಧ್ಯಮಗಳಲ್ಲಿ ನಂದಿನಿ ರಾಗಿ ಅಂಬಲಿ ಫೋಟೋಗಳು ಸದ್ದು ಮಾಡುತ್ತಿವೆ. ಹಲವರು ಅದರ ರುಚಿಗೆ ಮಾರು ಹೋಗಿದ್ದಾರೆ. “ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಹೊಸ ಉತ್ಪನ್ನಗಳು. ಪ್ರೋಬಯಾಟಿಕ್ ಮಜ್ಜಿಗೆ ಮತ್ತು ರಾಗಿ ಅಂಬಲಿ ಎರಡೂ ತುಂಬಾ ಟೇಸ್ಟಿ ಮತ್ತು ಕೊಟ್ಟ ಹಣಕ್ಕೆ ಯೋಗ್ಯವಾಗಿವೆ. 200 ಮಿಲಿ ಪ್ಯಾಕೆಟ್ಗಳಿಗೆ 10 ರೂಪಾಯಿ. ಸಾದಾ ಮಜ್ಜಿಗೆ ಯಾರು ಇಷ್ಟ ಪಡುತ್ತಾರೋ ಅವರು ಪ್ರೋಬಯಾಟಿಕ್ ಅನ್ನು ಇಷ್ಟಪಡುತ್ತಾರೆ. ಇದು MYMUL ನಿಂದ ಇದೀಗ ಮೈಸೂರಿನಲ್ಲಿ ಲಭ್ಯವಿದೆ” ಎಂದು ನೆಟ್ಟಿಗರೊಬ್ಬರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0