ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 01
ಭಾರತ ಮಾತೆಯ ಮಡಿಲಿನಲ್ಲಿರುವವರಾದ ನಾವುಗಳು ಎಲ್ಲಿಯೋ ಒಂದು ಕಡೆ ಎಡವಿದ್ದೇವೆ ಎಂಬ ಆತಂಕವಿದೆ. ಇಂದಿನ ಯುವ ಜನತೆ ಎತ್ತ ಸಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಅವರನ್ನು ಸರಿ ದಾರಿಗೆ ತರುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಅಣಿಗೊಳಿಸಬೇಕಾಗಿದೆ ಎಂದು ಶ್ರೀ ಶಾರದಾ ರಾಮಕೃಷ್ಣ ಆಶ್ರಮದ ಶ್ರೀ ಬ್ರಹ್ಮನಿಷ್ಟಾನಂದ ಸ್ವಾಮೀಜಿ ಹೇಳಿದರು.
ನಗರದ ಜೋಗಿಮಟ್ಟಿರಸ್ತೆಯಲ್ಲಿ ಶನಿವಾರ ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವೆಲ್ಲಾ ಹಿಂದೂಮನೋಭಾವನೆಯಿಂದ ಒಟ್ಟಾಗಿ ಹಿಂದೂ ಸಮಾಜ ಸಂರಕ್ಷಣೆಗಾಗಿ ಪ್ರತಿಯೊಬ್ಬ ಹಿಂದೂಗಳು ಕಂಕಣಬದ್ಧರಾಗಬೇಕಾಗಿದೆ. ಹಿಂದೂ ಸಂಗಮದ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ಎಲ್ಲರೂ ಒಗ್ಗೂಡಬೇಕಾಗಿದೆ. ಪಾಂಚಜನ್ಯವನ್ನು ಮತ್ತೆ ಮೊಳಗಿಸಬೇಕಾದ ಅಗತ್ಯವಿದೆ ಸ್ವದೇಶಿ ವಸ್ತುಗಳ ಬಳಕೆ, ನಾಗರೀಕ ಜವಾಬ್ದಾರಿ ಅರಿತು ಬಾಳುವಂತಾಗಬೇಕು ಎಂದರು.

ಭಾರತ ಮಾತೆಯ ಮಕ್ಕಳಾಗಿ ದೇಶ ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಯಾವತ್ತೂ ಕೂಡ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಮರೆಯುವಂತಿಲ್ಲ ಮುಂದಿನ ಮಕ್ಕಳಿಗೆ ಸಂಸ್ಕಾರವನ್ನು ಕಲಿಸ ಬೇಕಾಗಿದೆ. ಭಾರತ ಮಾತೆಯ ಮಡಿಲಿನಲ್ಲಿರುವವರಾದ ನಾವುಗಳು ಎಲ್ಲಿಯೋ ಒಂದು ಕಡೆ ಎಡವಿದ್ದೇವೆ ಎಂಬ ಆತಂಕವಿದೆ. ಇಂದಿನ ಯುವ ಜನತೆ ಎತ್ತ ಸಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಅವರನ್ನು ಸರಿ ದಾರಿಗೆ ತರುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಅಣಿಗೊಳಿಸಬೇಕಾಗಿದೆ ಎಂದು ಹೇಳಿದರು.
ದಿಕ್ಕೂಚಿ ಭಾಷಣ ಮಾಡಿದ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಪ್ರವೀಣ್ ಹಿಂದೂ ಸಮಾಜವು ಸಂಘಟನೆ, ಸ್ವಾಭಿಮಾನ, ಸಮಾನತೆ, ಸಂಖ್ಯೆ ಹೆಚ್ಚಳ, ಸ್ವದೇಶಿ ಜೀವನ ಪದ್ಧತಿಯನ್ನು ಆಚರಿಸಬೇಕು. ಹಿಂದೂ ಎಂಬುದು ಪಂಥವಲ್ಲ, ಶಾಶ್ವತ ಸತ್ಯಗಳನ್ನು ಅಳವಡಿಸಿಕೊಂಡ ಧರ್ಮ. ಇದು ಸೂರ್ಯ ಪ್ರಕೃತಿಯನ್ನು ಆರಾಧಿಸುವ ಧರ್ಮ. ಹಾಗಾಗಿ ಈ ಸನಾತನ ಧರ್ಮವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಸೂರ್ಯನಷ್ಟೇ ಇದು ಅಜರಾಮರ ಎಂದು ಹೇಳಿದರು. ಹಿಂದೂ ಸಂಗಮ ದೇಶದ ಎಲ್ಲಾ ಪಂಚಾಯ್ತಿ ಮಟ್ಟದಲ್ಲಿ ನಡೆಯುತ್ತದೆ. ಹಿಂದೂಗಳ ಏಳುಬೀಳುಗಳನ್ನು ನೆನಪು ಮಾಡಿಕೊಂಡರೆ ಭವಿಷ್ಯವನ್ನು ನಿರ್ಮಿಸಬಹುದು ಭವಿಷ್ಯ ಉತ್ತಮವಾಗಿ ನಿರ್ಮಿಸಬೇಕಾದಲ್ಲಿ ಹಿಂದೂಗಳು ಇತಿಹಾಸವನ್ನು ಒಮ್ಮೆ ತಿರುಗಿ ನೋಡಿ ಮುಂದಿನ ಭವಿಷ್ಯ ನಿರ್ಮಾಣ ಮಾಡಬೇಕಿದೆ, ಹಿಂದೂ ಸಂಸ್ಕೃತಿ ಪ್ರಪಂಚಕ್ಕೆ ಮಾದರಿಯಾಗಿದೆ. ಸನಾತನ ಧರ್ಮದಲ್ಲಿ ಸಮಾನತೆಗೆ ಬಹಳ ಮಹತ್ವ ನೀಡಲಾಗಿದೆ. ಇದನ್ನೂ ಎಲ್ಲರೂ ಪಾಲಿಸಿ ಧರ್ಮವನ್ನು ಗಟ್ಟಿಗೊಳಿಸಬೇಕಾಗಿದೆ ಎಂದರು.
ಹಿಂದೂ ಸಂಗಮ ಆಯೋಜನಾ ಸಮಿತಿಯ ನಗರಾಧ್ಯಕ್ಷ ನವೀನ್ ಚಾಲುಕ್ಯ ಮಾತನಾಡಿ, ಗ್ರಾಮ ಮತ್ತು ವಸತಿಯ ಮಟ್ಟದಲ್ಲಿ ಹಿಂದೂ ಧರ್ಮ, ಸಂಸ್ಕೃತಿಗಳ ಸಂರಕ್ಷಣೆ, ಸ್ವಾವಲಂಬನೆ ಮತ್ತು ಸಮಗ್ರ ವಿಕಾಸದ ದೃಷ್ಟಿಯಿಂದ ಜಾಗೃತ ಹಿಂದೂ ಸಮಾಜ ಕಟಿಬದ್ಧವಾಗಬೇಕು ಎಂಬ ಆಶಯದೊಂದಿಗೆ ಹಿಂದೂ ಸಮಾಜದ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ.

ಹಿಂದೂ ಸಮಾಜದ ಸಂಘಟನೆ ಸ್ವಾವಲಂಬಿ ಸಂಸ್ಕಾರಯುಕ್ತ ಮತ್ತು ಸಾಮರಸ್ಯಯುಕ್ತ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ತುಂಬಿರುವ ಸಂದರ್ಭದಲ್ಲಿ ಹಿಂದೂ ಸಮಾಜವೇ ಒಟ್ಟುಗೂಡಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಮಂಡಲ ಪಂಚಾಯಿತಿ ನಗರಗಳಲ್ಲಿ ವಸತಿ ಮಟ್ಟದಲ್ಲಿ ಆಯೋಜಿಸುತ್ತಿದೆ ನಮ್ಮ ದೇವಾಲಯಗಳು ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವುದಲ್ಲದೇ ನಮ್ಮ ಧರ್ಮ. ಸಂಸ್ಕೃತಿ, ಮೌಲ್ಯಗಳನ್ನು ಆಚರಣೆಗೆ ತರುವಲ್ಲಿ ಜಾಗೃತಿಯ. ಶಕ್ತಿಯ ಕೇಂದ್ರವಾಗಬೇಕು. ವ್ಯಕ್ತಿಯು ತನ್ನ. ಕುಟುಂಬದ ಮತ್ತು ಸಮಾಜದ ನಡವಳಿಕೆಯಲ್ಲಿ ಪರಿವರ್ತನೆಯನ್ನು ತರುವಲ್ಲಿ ಜವಾಬ್ದಾರಿಯ ಪಾತ್ರವನ್ನು ನಿರ್ವಹಿಸಬೇಕು. ಕುಟುಂಬದಲ್ಲಿ ಸಂಸ್ಕೃತಿ, ಸಂಸ್ಕಾರಗಳ ಸಂವರ್ಧನೆ, ಪರಿಸರದ ಬಗ್ಗೆ ಕಾಳಜಿ, ಸ್ವದೇಶಿ ವಸ್ತುಗಳ ಬಳಕೆ ಮತ್ತು ಜೀವನ ಪದ್ಧತಿಯ ವಿಕಾಸ. ಸಮಾಜದ ಎಲ್ಲರೊಂದಿಗೆ ಸಾಮರಸ್ಯದ ಭಾವ ನಾಗರೀಕ ಕರ್ತವ್ಯಗಳನ್ನು ನಿತ್ಯ ಪಾಲಿಸುವುದು; ಈ ಪಂಚ ಪರಿವರ್ತನೆಯ ಅಂಶಗಳು ಸಮಾಜದಲ್ಲಿ ಅರಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ, ರೈತರಿಗೆ, ಯೋಧರಿಗೆ, ಪೈಲ್ವಾನ್, ಪತ್ರಕರ್ತರಿಗೆ ವೈದ್ಯರುಗಳಿಗೆ ಕಲಾ ಸೇವಕರಿಗೆ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ನಂದಿನಿ ಶಿವಪ್ರಕಾಶ್ ತಂಡ ಭರತನ್ಯಾಟವನ್ನು ಪ್ರದರ್ಶನ ಮಾಡಿತು, ಕೃಷ್ಣಮೂರ್ತಿ ಸ್ವಾಗತಿಸಿದರೆ, ಶೋಭಾ ಹನಯಮಾನ್ ಚಾಲಿಸ್ ಪಠಣ ಮಾಡಿದರೆ, ಜಾಹ್ನವೀ ಓಂಕಾರ್ ವ್ಯಯುತ್ತಿಕ ಗೀತೆಯನ್ನು ಹಾಡಿದರು. ರಶ್ಮಿ ಪ್ರಸ್ತಾವಿಕವಾಗಿ ಮಾತನಾಡಿದರು. ಛಲವಾದಿ ತಿಪ್ಪೇಸ್ವಾಮಿ ವಂದಿಸಿದರು. ಈ ಸಂದರ್ಭದಲ್ಲಿ ಜೀತೇಂದ್ರ ಹುಲಿಕುಂಟೆ, ಲೀಲಾಧರ್ ಠಾಕೂರ್, ರುದ್ರೇಶ್, ರಾಜೀವ ಲೋಚನ, ಓಂಕಾರ್, ಜಿ.ಎಂ.ಸುರೇಶ್, ಸಂಪತ್ ಕುಮಾರ್ ಲೋಕೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದಕ್ಕೂ ಮುನ್ನಾ ನಗರದ ರಂಗಯ್ಯನ ಭಾಗಿಲು ಬಳಿಯಲ್ಲಿನ ಮದಕರಿ ಗಣಪತಿ ದೇವಾಲಯದಿಂದ ಶೋಭಾ ಯಾತ್ರೆಯನ್ನು ಪ್ರಾರಂಭಿಸಿ ಜೋಗಿಮಟ್ಟಿ ರಸ್ತೆಯಲ್ಲಿನ ೪ನೇ ಕ್ರಾಸ್‌ನ ಸೇತುವೆಯ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಅಂತ್ಯಗೊಂಡಿತು, ಈ ಸಮಯದಲ್ಲಿ ಮಕ್ಕಳು ದೇಶ ಭಕ್ತಿ ಸಾರುವ ಮತ್ತು ಪುರಾಣ ಪುರುಷ ಛದ್ಮ ವೇಷಭೂಷಣ ಹಾಕುವುದರ ಮೂಲಕ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷ ವಾಗಿತ್ತು.