National Education Day: ಪ್ರತಿ ವರ್ಷ ನವೆಂಬರ್ 11 ರಂದು ರಾಷ್ಟ್ರೀಯ ಶಿಕ್ಷಣ ದಿನ’ವಾಗಿ ಭಾರತದಲ್ಲಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಭಾರತದ ಹೆಮ್ಮೆಯ ಪುತ್ರ ಡಾ ಮೌಲಾನಾ ಅಬುಲ್ ಕಲಾಂ ಅಜಾದ್ ರ ಜನ್ಮ ದಿನವಾಗಿದ್ದು, ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಣೆ ಮಾಡಲಾಗುತ್ತದೆ.

ನವೆಂಬರ್ 11 1888 ರಂದು ಜನಿಸಿದ ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್ ಹುಸೇನಿ ಆಜಾದ್ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಬರಹಗಾರ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದರು . ಉರ್ದು ವಿದ್ವಾಂಸರಾದ ಅವರು, ತಮ್ಮ ಬರಹಗಳಿಗೆ ‘ಅಜಾದ್ ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಆದ್ದರಿಂದ ಅವರು ಮೌಲಾನಾ ಅಜಾದ್ ಎಂದೇ ಪ್ರಸಿದ್ದಿಯಾದರು. ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರೆತ ನಂತರ ಅವರು ಭಾರತ ಸರ್ಕಾರದ ಮೊದಲ ಶಿಕ್ಷಣ ಸಚಿವರಾದರು. ಅವರು ಆಗಸ್ಟ್ 15, 1947 ರಿಂದ ಫೆಬ್ರವರಿ 2, 1958 ರವರೆಗೆ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದರು ಮತ್ತು ಫೆಬ್ರವರಿ 22, 1958 ರಂದು ದೆಹಲಿಯಲ್ಲಿ ನಿಧನರಾದರು.
ಮೌಲಾನಾ ಅಜಾದ್ ರವರು ನೀಡಿದ ಕೆಲವು ಉಲ್ಲೇಖಗಳು
– “ಶಿಕ್ಷಣ ತಜ್ಞರು ವಿದ್ಯಾರ್ಥಿಗಳಲ್ಲಿ ವಿಚಾರಣೆಯ ಮನೋಭಾವ ಬೆಳೆಸುವುದು, ಸೃಜನಶೀಲನೆ ಸಾಮರ್ಥ್ಯ ಹೆಚ್ಚಿಸುವುದು, ಉದ್ಯಮಶೀಲತೆ, ನೈತಿಕ ನಾಯಕತ್ವ ಗುಣಗಳನ್ನು ಬೆಳೆಸುವುದರ ಮೂಲಕ ಅವರ ಅದರ್ಶ ವ್ಯಕ್ತಿಗಳಾಗಬೇಕು”. ಇದು ಉತ್ತಮ ಶಿಕ್ಷಣಕ್ಕೆ ನೀಡುವ ಕೊಡುಗೆ ಎಂದಿದ್ದಾರೆ ಮೌಲಾನಾ ಅಜಾದ್‌ರವರು.
– ” ನಾಲಿಗೆಯಿಂದ ಬೋಧಿಸುವುದರಿಂದ ಬೆದರಿಸಬಹುದು. ಆದರೆ ಒಳ್ಳೆಯ ಕಾರ್ಯದಿಂದ ಬಲವಾಗಿ ಉಳಿಯಬಹುದು”.
– “ಬಹುಸಂಖ್ಯಾತರು ಸಸಿಗಳನ್ನು ನೆಡುತ್ತಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ಅದರ ಫಲವನ್ನು ಪಡೆಯುತ್ತಾರೆ”.
2008 ರ ಸೆಪ್ಟೆಂಬರ್ 11 ರಂದು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು, ಅಜಾದ್ ರವರ ಜನ್ಮ ದಿನ ನವೆಂಬರ್ 11 ನೇ ದಿನಾಂಕವನ್ನು ‘ರಾಷ್ಟ್ರೀಯ ಶಿಕ್ಷಣ ದಿನ’ವಾಗಿ ಆಚರಣೆ ಮಾಡಲು ನಿರ್ಧರಿಸಿತು. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ಅದಕ್ಕೆ ಕಾರಣವಾಗಿದೆ. ಅಂದಿನಿಂದ ಅಜಾದ್ ರವರು ಶಿಕ್ಷಣ ಕ್ಷೇತ್ರಕ್ಕಾಗಿ ನೀಡಿದ ಪ್ರಮುಖ ಕೊಡಗೆಗಾಗಿ, ಭಾರತೀಯರೆಲ್ಲರೂ ಅವರಿಗೆ ಗೌರವ ಸಲ್ಲಿಸಲು, ಅವರ ಸವಿನೆನಪಿಗಾಗಿ ‘ರಾಷ್ಟ್ರೀಯ ಶಿಕ್ಷಣ ದಿನ’ ಆಚರಿಸಲಾಗುತ್ತದೆ.
ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರು ಈ ದೇಶದ ಒಬ್ಬ ಸ್ಕಾಲರ್ ಆಗಿಯೂ ಮತ್ತು ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರಾಗಿಯೂ ಸಕ್ರಿಯರಾಗಿದ್ದರು. ಭಾರತದ ಪ್ರಪ್ರಥಮ ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೆ ತಂದಿದ್ದರು. ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕೊಡುಗೆ ನೀಡಿದ್ದರು. 1922 ರಲ್ಲಿ ಇವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತರತ್ನ’ ನೀಡಿ ಅಜಾದ್‌ರನ್ನು ಗೌರವಿಸಲಾಯಿತು. ಭಾರತದಲ್ಲಿ ಐಐಟಿಗಳ ಸ್ಥಾಪನೆ ಮತ್ತು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗಗಳ ಅಡಿಪಾಯಕ್ಕೂ ಇವರ ಕೊಡುಗೆ ಪ್ರಶಂಸನೀಯವಾದದ್ದು.
ಬಡವರಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ
ಮೊದಲ ಭಾರತೀಯ ಶಿಕ್ಷಣ ಮಂತ್ರಿಯಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆಜಾದ್ ಅವರ ಮುಖ್ಯ ಗಮನವು ಗ್ರಾಮೀಣ ಬಡವರಿಗೆ ಮತ್ತು ಹುಡುಗಿಯರಿಗೆ ಶಿಕ್ಷಣ ನೀಡುವುದಾಗಿತ್ತು. ಅವರು ಗಮನಹರಿಸಿದ ಇತರ ಪ್ರಮುಖ ಕ್ಷೇತ್ರಗಳೆಂದರೆ ವಯಸ್ಕರ ಸಾಕ್ಷರತೆ 14 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ, ಮತ್ತು ಮಾಧ್ಯಮಿಕ ಶಿಕ್ಷಣ ಮತ್ತು ವೃತ್ತಿಪರ ತರಬೇತಿಯ ವೈವಿಧ್ಯೀಕರಣ ಹೀಗೆ ಹೊಸ ರೂಪದ ಶಿಕ್ಷಣ ಪರಿಕಲ್ಪನೆ ತಂದರು.
ಶಿಕ್ಷಣ ಮಾನವನ ಮೂಲಭೂತ ಹಕ್ಕು
ಪ್ರತಿಯೊಬ್ಬರೂ ಶಿಕ್ಷಣ ಪಡೆಯಲೇ ಬೇಕು ಯಾರು ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಇವರ ಆಶಯವಾಗಿತ್ತು. ಅವರು 16 ಜನವರಿ 1948 ರಂದು ಅಖಿಲ ಭಾರತ ಶಿಕ್ಷಣದ ಸಮ್ಮೇಳನವನ್ನು ಉದ್ದೇಶಿಸಿ ಇದೇ ಮಾತು ಹೇಳಿದ್ದರು. ಅವರು ದೆಹಲಿ ವಿಶ್ವವಿದ್ಯಾನಿಲಯದ ಶಿಕ್ಷಣ ವಿಭಾಗ, 1951 ರಲ್ಲಿ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ ಮತ್ತು 1953 ರಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸ್ಥಾಪನೆಯನ್ನು ಮೇಲ್ವಿಚಾರಣೆ ಮಾಡಿದರು. ಶಿಕ್ಷಣಕ್ಕೆ ಇವರ ಕೊಡುಗೆ ಇಂದ ಈ ದಿನ ಇವರ ನೆನಪಿನಲ್ಲಿ ಆಚರಿಸಲಾಗುತ್ತದೆ.
ದೇಶದಾದ್ಯಂತ ಶಾಲಾ ವಿದ್ಯಾರ್ಥಿಗಳು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಬೋಧನೆಗಳು ಮತ್ತು ಸಾಧನೆಗಳ ಕುರಿತು ಚರ್ಚೆಗಳು ಮತ್ತು ವಿಷಯಾಧಾರಿತ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1