ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರ.

ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಹಳ್ಳಿಗಳಲ್ಲಿರುವ ದನಕರುಗಳಿಗೆ ತೊಂದರೆಯಾಗುತ್ತಿದೆ ಪ್ಲಾಸ್ಟಿಕ್ ನಿಷೇಧ ಮಾಡಬೇಕು ಡಾ ಎಚ್ ಕೆ ಎಸ್ ಸ್ವಾಮಿ

ಭೀಮಸಮುದ್ರ. ಸಮೀಪದ ಮಾಳಪ್ಪನಟ್ಟಿ ಗ್ರಾಮದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಈ ಸಂದರ್ಭದಲ್ಲಿ ಗ್ರಾಮದ ರೋಡು ಚರಂಡಿ ಹಾಗೂ ದೇವಸ್ಥಾನ ಸೇರಿದಂತೆ ಗ್ರಾಮದಲ್ಲಿ ಸ್ವಚ್ಛತಾ ಮಾಡಿದರು
 ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಸರ್ವೋದಯ ಉಪಾಧ್ಯಕ್ಷರಾದ ಡಾಕ್ಟರ್ ಎಚ್ ಎಸ್ ಸ್ವಾಮಿ ಮಾತನಾಡಿ ರಾಶಿಯೇ ಬಿದ್ದಿದ್ದರೂ ಸಹ, ಅವುಗಳನ್ನು ಜೆಸಿಬಿ ಬಳಸಿ, ಟ್ರಾಕ್ಟರ್ ಬಳಸಿ, ಸ್ವಚ್ಛತೆ ಮಾಡದೆ, ನಾವು ಮಾನವ ಶಕ್ತಿಯನ್ನು ಬಳಕೆ ಮಾಡಿ, ಕಸ ಎತ್ತಲು ಪ್ರಯತ್ನಿಸುತ್ತೇವೆ, ಅಗಾಧವಾಗಿ ಬಿದ್ದಿರುವ ಕಸವನ್ನು, ಮಾನವ ಶಕ್ತಿಯಿಂದ ನಿರ್ನಾಮ ಮಾಡಲು, ಸ್ವಚ್ಛಗೊಳಿಸಲು ಅಸಾಧ್ಯವಾಗಿದೆ, ಅದಕ್ಕೆ ತಾಂತ್ರಿಕ ಜ್ಞಾನವನ್ನೇ ಬಳಸಿಕೊಂಡು, ಗ್ರಾಮಗಳಲ್ಲಿ ಸಣ್ಣ ಟ್ರ್ಯಾಕ್ಟರ್ ಗಳನ್ನ, ಜೆಸಿಬಿಗಳನ್ನ ಬಳಸಿ, ಸ್ವಚ್ಛತೆಯನ್ನ ಅಳವಡಿಸಿಕೊಳ್ಳಬಹುದು ಎಂದು ಹೇಳಿದರು.

ಎನ್ಎಸ್ಎಸ್ ಅಧಿಕಾರಿಯಾಗಿ ಶ್ರೀ ಲಾಲ್ ಸಿಂಗ್ ನಾಯಕ್, ಸಹಪ್ರಾಧ್ಯಾಪಕರು ಗಣಿತಶಾಸ್ತ್ರ, ವಿಭಾಗ ಮಾತನಾಡಿ ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸಿ, ಗ್ರಾಮಸ್ಥರ ಮನಸ್ಸನ್ನು ಪರಿವರ್ತಿಸಬೇಕು, ಗ್ರಾಮದಲ್ಲಿರುವ ಸಮಸ್ಯೆಗಳನ್ನು ಅರಿತುಕೊಂಡು, ಮುಂದೆ ನೀವು ಜೀವನದಲ್ಲಿ ಉನ್ನತ ಹುದ್ದೆಗಳಿಗೆ, ಹೋದಾಗ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು. ತಿಳಿಸಿದರು

ಎನ್ಎಸ್ಎಸ್ ಅಧಿಕಾರಿಯಾಗಿ ಡಾ ಸತೀಶ್ ಗೌಡ. ಎಸ್ ಸಹಪ್ರಾಧ್ಯಪಕರು ಪ್ರಾಣಿ ಶಾಸ್ತ್ರ ವಿಭಾಗ ಮಾತನಾಡಿ. ವಿಜ್ಞಾನದ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಸತತ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಗ್ರಾಮಸ್ಥರನ್ನು ಸಹ ಜಾಗೃತಗೊಳಿಸಿ ಸಹಭಾಗಿತ್ವದಲ್ಲಿ ಗ್ರಾಮಗಳ ಸ್ವಚ್ಛತೆಯನ್ನ ಕೈಗೊಡಿಸಬೇಕು ಎಂದರು.

 ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ನಾಗರಾಜು ಜೆ. ಸಹ ಪ್ರಾಧ್ಯಾಪಕರು, ಭೌತಶಾಸ್ತ್ರ ವಿಭಾಗ, ಶ್ರೀ ನಾಗೇಂದ್ರ ಬಾಬು ಪತ್ರಾಂಕಿತ ವ್ಯವಸ್ಥಾಪಕರು, ಶ್ರೀ ಜೀವನ್ ಕುಮಾರ್ ಬಿ.ಕೆ. ಶ್ರೀ ಸುರೇಶ್. ಎಫ್, ಶ್ರೀ ಗುರುದೇವ್ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *