ಚಿತ್ರದುರ್ಗದಲ್ಲಿ ಗಣೇಶೋತ್ಸವದ ಅಂಗವಾಗಿ ಸ್ವಚ್ಚತಾ ಅಭಿಯಾನ: ವಿಧಾನ ಪರಿಷತ್ ಸದಸ್ಯ ನವೀನ್ ಕರೆ.

ಚಿತ್ರದುರ್ಗ ಸೆ. 6

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಉತ್ತಮವಾದ ಆರೋಗ್ಯವನ್ನು ಕಾಪಾಡಲಿ ಉತ್ತಮವಾದ ಪರಿಸರ ಮುಖ್ಯವಾಗಿದೆ ಇದಕ್ಕೆ ನಮ್ಮ ಮನೆಯ ಸುತ್ತಾ-ಮುತ್ತಲ್ಲಿನ ಪರಿಸರ ಚನ್ನಾಗಿ ಇರಬೇಕಿದೆ ಇದಕ್ಕೆ ನಾವೇಲ್ಲರೂ ಸಹಾ ಪಣವನ್ನು ತೊಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಕರೆ ನೀಡಿದರು.


ಚಿತ್ರದುರ್ಗ ನಗರದಲ್ಲಿ ಪ್ರತಿಷ್ಠಾಪನೆಯಾದ ಹಿಂದೂ ಮಹಾ ಗಣಪತಿ ಸಭಾಂಗಣದಲ್ಲಿ 10ನೇ ದಿನವಾದ ಇಂದು ಸ್ವಚ್ಚತಾ ಕಾರ್ಯಕ್ರಮವನ್ನು ನೇರವೇರಿಸಿ ಮಾತನಾಡಿದ ಅವರು, ವಿನಾಯಕನ ದರ್ಶನಕ್ಕೆ 4-5 ಸಾವಿರ ಭಕ್ತಾಧಿಗಳು ಬರುತ್ತಾರೆ, ಇವರು ಬಿಸಾಕಿದ ಕಸವನ್ನು ಸ್ವಚ್ಚತೆಯನ್ನು ಮಾಡುವುದರ ಸಹಾ ಪುಣ್ಯದ ಕೆಲಸವಾಗಿದೆ ಜನತೆ ಉಪಯೋಗ ಮಾಡಿದ ಪ್ಲಾಸ್ಟಿಕ್‍ನ್ನು ಒಂದೆಡೆ ಸೇರಿಸಿ ಅದನ್ನು ಬೇರೆ ಕಡೆಯಲ್ಲಿ ವಿಲೇವಾರಿ ಮಾಡುವುದು ಅಗತ್ಯವಾಗಿದೆ.

ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು ಆಶಯದಂತೆ ಸ್ವಚ್ಚತೆಗೆ ಹೆಚ್ಚಿನ ಒತ್ತನ್ನು ನೀಡಬೇಕಿದೆ, ನಮ್ಮ ಮನೆಯ ಸುತ್ತಾ-ಮುತ್ತಲ್ಲಿನ ಪ್ರದೇಶವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದರ ಮೂಲಕ ಪರಿಸರವನ್ನು ಚನ್ನಾಗಿ ಇಟ್ಟುಕೊಳ್ಳಬೇಕಿದೆ ಇದರಿಂದ ನಮ್ಮ ಆರೋಗ್ಯ ಚನ್ನಾಗಿ ಇರುತ್ತದೆ, ನಮ್ಮ ಮನೆಯ ಕಸವನ್ನು ಬೇರೆಯವರ ಮನೆಯ ಮುಂದೆ ಹಾಕದೇ ನಗರಸಭೆಯ ಗಾಡಿಗೆ ಹಾಕುವುದರ ಮೂಲಕ ಸ್ವಚ್ಚತೆಯನ್ನು ಕಾಪಾಡಬೇಕಿದೆ ಎಂದರು. 


ಇಂದಿನ ಸ್ವಚ್ಚತಾ ಕಾರ್ಯವನ್ನು ಚಿತ್ರದುರ್ಗ ತಾಲ್ಲೂಕಿನ ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷರಾದ ನಾಗರಾಜ್ ಸಂಗಂ, ಅಧ್ಯಕ್ಷರಾದ ಹನುಮಂತಪ್ಪ ಕಾರ್ಯದರ್ಶಿ ಪರಮೇಶ್ವರಪ್ಪ, ಶಿವಕುಮಾರ್ ಹಾಗೂ ಪದಾಧಿಕಾರಿಗಳು, ಪತಂಜಲಿ ಮಹಿಳಾ ಯೋಗ ಸಂಸ್ಥೆಯ ತರಬೇತಿ ಶ್ರೀಮತಿ ಹೇಮಾವತಿ ತಂಡ ಭಾಗವಹಿಸಿದ್ದವು. 


ಕಳೆದ 9 ದಿನಗಳ ಕಾಲ ಸ್ವಚ್ಚತಾ ಕಾರ್ಯದಲ್ಲಿ ಆರೋಗ್ಯವೇ ಭಾಗ್ಯ ಸಂಘಟನೆಯ ಅಧ್ಯಕ್ಷರಾದ ಶ್ರೀನಿವಾಸ್ ಮತ್ತು ತಂಡ, ದವಳಗಿರಿ ಬಡಾವಣೆಯ ಸಿ.ಜಿ.ಶ್ರೀನಿವಾಸ್ ಮತ್ತು ತಂಡ, ಜ್ಞಾನ ಭಾರತಿ ನಿವಾಸಿಗಳ ಹಾಗೂ ಯೋಗ ಶಿಕ್ಷಣದ ಶಿಕ್ಷಕರಾದ ಕೆಂಚವೀರಪ್ಪ ಮತು ತಂಡ, ಶ್ರೀ ಪತಂಜಲಿ ಯೋಗ ತಂಡ, ಎಬಿವಿಪಿ ಕಾರ್ಯಕರ್ತರು, ಗೃಹ ರಕ್ಷಕ ದಳ ಹಾಗೂ ಸಾರ್ವಜನಿಕರು ಪ್ರತಿ ದಿನ ಬೆಳಿಗ್ಗೆ 5.30 ರಿಂದ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿದ್ದರು.


ಪ್ರತಿ ದಿನ ಬೆಳಿಗ್ಗೆ 5.30ರಿಂದ ಹಿಂದೂ ಮಹಾ ಗಣಪತಿ ಮಂಟಪದಲ್ಲಿ ಉಚಿತ ಯೋಗ ಶಿಬಿರವನ್ನು ಪಂತಜಲಿ ಮಹಿಳಾ ಯೋಗ ಸಂಸ್ಥೆಯಿಂದ ನಡೆಸಲಾಗುತ್ತಿದೆ. ಈ ಸ್ವಚ್ಚತಾ ಕಾರ್ಯದ ಸಂಪೂರ್ಣ ನೇತೃತ್ವವನ್ನು ರಾಯಲ್ ಸ್ಪೋಟ್ಸ್ ಕ್ಲಬ್‍ನ ಕಲ್ಲೇಶ್ ಹಾಗೂ ಕಲ್ಲೇಶ್ ಮೌರ್ಯ, ಶ್ರೀನಿವಾಸ್, ನಾಗರಾಜ್ ಸಂಗಂ ಇತರರು ವಹಿಸಿಕೊಂಡಿದ್ದಾರೆ.

Views: 12

Leave a Reply

Your email address will not be published. Required fields are marked *