Skip to content
  • Wednesday, April 1, 2026
  • ABOUT US
  • CONTACT US
  • Privacy Policy

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Privacy Policy
  • Horoscope
  • Home
  • Sports
  • IPL 2023: RCB ಸೋಲನ್ನು ಸಂಭ್ರಮಿಸಿದ್ರಾ ನವೀನ್ ಉಲ್ ಹಕ್?
Sports

IPL 2023: RCB ಸೋಲನ್ನು ಸಂಭ್ರಮಿಸಿದ್ರಾ ನವೀನ್ ಉಲ್ ಹಕ್?

May 22, 2023
samagrasuddi

IPL 2023: ಇಂಡಿಯನ್ ಪ್ರೀಮಿಯರ್ ಲೀಗ್​ನ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್​ನಿಂದ ಹೊರಬಿದ್ದಿದೆ. ಪ್ಲೇಆಫ್ ಪ್ರವೇಶಿಸಲು ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಆರ್​ಸಿಬಿ 6 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿತು.ಇತ್ತ ಆರ್​ಸಿಬಿ ತಂಡ ಸೋಲುತ್ತಿದ್ದಂತೆ ಅತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ನವೀನ್ ಉಲ್ ಹಕ್ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ತಮಾಷೆಯಿಂದ ಕೂಡಿರುವ ಪೋಸ್ಟ್​ನಲ್ಲಿ ವ್ಯಕ್ತಿಯೊಬ್ಬರು ಸಖತ್ ಸಂತಸದಿಂದ ನಗುತ್ತಿರುವುದನ್ನು ಕಾಣಬಹುದು. ಇತ್ತ ಆರ್​ಸಿಬಿ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲುತ್ತಿದ್ದಂತೆ ನವೀನ್ ಇಂತಹದೊಂದು ಪೋಸ್ಟ್ ಹಂಚಿಕೊಂಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.ಅದರಲ್ಲೂ ಆರ್​ಸಿಬಿ ತಂಡದ ಸೋಲನ್ನು ನವೀನ್ ಉಲ್ ಹಕ್ ಈ ರೀತಿಯಾಗಿ ಸಂಭ್ರಮಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದಾಗ ನವೀನ್ ಸ್ವೀಟ್ ಮ್ಯಾಂಗೋ ಎಂದು ಪೋಸ್ಟ್ ಹಾಕಿ ಕಿಚಾಯಿಸಿದ್ದರು.ಇದೀಗ ಹೀಯಾಳಿಸುವ ನಗುವನ್ನು ಹೊಂದಿರುವ ಪೋಸ್ಟ್​ವೊಂದನ್ನು ಹಾಕಿ ನವೀನ್ ಉಲ್ ಹಕ್ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಅಂದಹಾಗೆ ನವೀನ್ ಉಲ್ ಹಕ್ ಈಗಾಗಲೇ ಆರ್​ಸಿಬಿ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೇ 1 ರಂದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ವಾಕ್ಸಮರ ನಡೆದಿತ್ತು. ಅಲ್ಲದೆ ಹಸ್ತಲಾಘವ ನೀಡುವ ವೇಳೆಯು ಕೊಹ್ಲಿ ಜೊತೆ ನವೀನ್ ಕಿತ್ತಾಡಿಕೊಂಡಿದ್ದರು.ಈ ಅಹಿತಕರ ಘಟನೆಯಲ್ಲಿ ಭಾಗಿಯಾಗಿದ್ದ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಹಾಗೂ ನವೀನ್ ಉಲ್​ ಹಕ್​ಗೆ ಬಿಸಿಸಿಐ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿತ್ತು. ಅಲ್ಲಿಗೆ ಮುಕ್ತಾಯವಾಗಬೇಕಿದ್ದ ಆಟಗಾರರ ನಡುವಣ ಜಿದ್ದಾಜಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮುಂದುವರೆದಿದೆ.ಇದರ ನಡುವೆ ಮತ್ತೊಮ್ಮೆ ಅಭಿಮಾನಿಗಳನ್ನು ಕೆಣಕುವಂತಹ ಪೋಸ್ಟ್ ಹಾಕುವ ಮೂಲಕ ನವೀನ್ ಉಲ್ ಹಕ್ ಆರ್​ಸಿಬಿ ಫ್ಯಾನ್ಸ್​ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

source https://tv9kannada.com/photo-gallery/cricket-photos/ipl-2023-naveen-ul-haq-shares-cryptic-story-on-instagram-after-rcb-eliminated-kannada-news-zp-584502.html

Tags: Cricket, IPL, Naveen ul haque, RCB, samagrasuddi, T-20, TATA IPL 2023, ಸಮಗ್ರ ಸುದ್ದಿ

Post navigation

IPL 2023: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 2 ಮಹತ್ವದ ದಾಖಲೆ ಬರೆದ ರೋಹಿತ್ ಶರ್ಮಾ..!
IPL 2023: ಶುಭ್​ಮನ್ ಗಿಲ್ ಬ್ಯಾಟಿಂಗ್ ಬಗ್ಗೆ ವಿಭಿನ್ನ ಕಾಮೆಂಟ್ ಮಾಡಿದ ಸಚಿನ್ ತೆಂಡೂಲ್ಕರ್..!

Leave a Reply Cancel reply

Your email address will not be published. Required fields are marked *

CITIES

Cities

ರಾಜ್ಯದಲ್ಲಿ ಮುಂದಿನ 7 ದಿನ ‘ಮಿಶ್ರ’ ಹವಾಮಾನ: ಎಲ್ಲೆಲ್ಲಿ ಸುಡುಬಿಸಿಲು? ಎಲ್ಲಿ ಗುಡುಗು ಸಹಿತ ಮಳೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

March 30, 2026
samagrasuddi

ಬೆಂಗಳೂರು (ಮಾ. 30): ಬೇಸಿಗೆಯ ಆರಂಭದಲ್ಲೇ ಸುಡುಬಿಸಿಲಿನಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಮುಂಬರುವ ವಾರದ ಹವಾಮಾನದ ಕುರಿತು ಮಹತ್ವದ ಮುನ್ಸೂಚನೆ ನೀಡಿದೆ. ಮುಂದಿನ ಏಳು ದಿನಗಳ ಕಾಲ ಕರ್ನಾಟಕದಾದ್ಯಂತ ‘ಮಿಶ್ರ ಹವಾಮಾನ’ ಇರಲಿದ್ದು, ಒಂದೆಡೆ ಅತಿಯಾದ…

Cities

ಏ. 1ರಂದು ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ: ಸಿದ್ದಗಂಗಾ ಮಠದ ಡಾ. ಶಿವಕುಮಾರ ಶ್ರೀಗಳ 119ನೇ ಜಯಂತ್ಯೋತ್ಸವ ಕಾರ್ಯಕ್ರಮ ಕಡಿತ!

March 29, 2026
samagrasuddi
Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi
Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 13 | ದಿನ 85

March 30, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 12 | ದಿನ 84

March 29, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 11 | ದಿನ 83

March 28, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 10 | ದಿನ 82

March 27, 2026
samagrasuddi
  • ಇಂದಿನ ನೀರಿನ ಮಿತಬಳಕೆ ನಾಳೆಯ ಬದುಕಿಗೆ ಭರವಸೆ: ಡಾ. ಹೆಚ್.ಎನ್. ಪ್ರದೀಪ್
  • IPL 2026: ಸಿಎಸ್‌ಕೆ ವಿರುದ್ಧ ರಾಜಸ್ಥಾನ ರಾಯಲ್ಸ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ, ಮಿಂಚಿದ ಯುವ ತಾರೆ ವೈಭವ್ ಸೂರ್ಯವಂಶಿ.
  • Karnataka High Court Recruitment: ಪದವೀಧರರಿಗೆ ಭರ್ಜರಿ ಗುಡ್ ನ್ಯೂಸ್; ಹೈಕೋರ್ಟ್‌ನಲ್ಲಿ ಉದ್ಯೋಗವಕಾಶ, ಈಗಲೇ ಅರ್ಜಿ ಸಲ್ಲಿಸಿ.
  • Top 3 Job Sectors in 2026: ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಕೇವಲ ಡಿಗ್ರಿ ಸಾಲದು! ಇಲ್ಲಿವೆ ಭವಿಷ್ಯದ ‘ಟಾಪ್ 3’ ಉದ್ಯೋಗ ವಲಯಗಳು
  • Rupee Fall: 95 ರೂ.ಗೆ ಕುಸಿದ ರೂಪಾಯಿ ಮೌಲ್ಯ; ಇಎಂಐ, ಆಮದು ವಸ್ತುಗಳು ಮತ್ತಷ್ಟು ದುಬಾರಿ?ಸಾಮಾನ್ಯರ ಮೇಲೇನು ಪರಿಣಾಮ?
Copyright © 2026
CONTACT US
Theme by: Theme Horse
Proudly Powered by: WordPress